Swadeshi Jagaran Manch organised Workshop at Kalaburgi

Kalaburgi, Karnataka: A workshop for volunteers of Swadeshi Jagaran Manch, Karnataka Uttara Pranth was organised at Kalaburgi recently. Jagadeesh State Coordinator for SJM, Mahadevayya Karadalli, Hingulambika and several other senior SJM functionaries participated in this workshop, attended by nearly 50 volunteers.

Swadeshi Jagaran Manch -Workshop-

ಸ್ವದೇಶಿ ಜಾಗರಣ ಮಂಚ್ ಕರ್ನಾಟಕ

ಸ್ವದೇಶಿ ಜಾಗರಣ ಮಂಚ್, ಕರ್ನಾಟಕದ ಉತ್ತರ ಜಿಲ್ಲೆಗಳ ಕಾರ್ಯಕರ್ತರ ಕಾರ್ಯಾಗಾರ ದಿನಾಂಕ 15.7.2012 ರಂದು ಕಲಬುರ್ಗಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಗೋಷ್ಠಿಗಳನ್ನು ನಡೆಸಿಕೊಟ್ಟರು.

ಶ್ರೀ. ಪ್ರಭು ನಿಷ್ಠಿಯವರು ಮಾನವ-ಸಂಬಂಧಗಳ ಗಟ್ಟಿಗೊಳಿಸುವಿಕೆಯಲ್ಲಿ ಆಧುನಿಕ ಸಂಪರ್ಕ ಸಾಧನಗಳ ಪಾತ್ರ ಕುರಿತಾಗಿ ವಿಷಯ ಮಾತನಾಡುತ್ತ  ಸಂವಹನ (Communication Skills) ಕಲೆ ಸದ್ಭಳಕೆಯಿಂದ ಸಂಬಂಧ ಸುಧಾರಿಸುವ ರೀತಿ ನೀತಿಗಳನ್ನು ನಮ್ಮವರು ಅರಿತಿದ್ದರು. ಪರಸ್ಪರ ಭೇಟಿಗೆ ಆದ್ಯತೆ ಇತ್ತು.  ಸಂಪರ್ಕ ಜಾಲ ಕಡಿಮೆ ಇದ್ದ ಕಾಲದಲ್ಲಿ ಇದ್ದಾಗ ಸಂಬಂಧ ಗಟ್ಟಿಯಾಗಿದ್ದವು. ಆಧುನಿಕ ಸಂಪರ್ಕ ಸಾಧನಗಳಾದ ದೂರವಾಣಿ, ಮೊಬೈಲ್, ಇ ಮೇಲ್, ಫೇಸ್ ಬುಕ್ ಎಲ್ಲ ಇದ್ದರೂ ಸಂಬಂಧಗಳಲ್ಲಿ ಗಟ್ಟಿತನವಿಲ್ಲ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪರಸ್ಪರ ಸಂಬಂಧ ಸುಧಾರಿಸಿ ಜಾಗೃತ ಸಮಾಜವನ್ನು ಕಟ್ಟಬಹುದು ಎಂದು ಹೇಳಿದರು.

ಶ್ರೀ ಹಿಂಗುಲಾಂಬಿಕಾ ಆರ್ಯುವೇದ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ.ನಿರ್ಮಲಾ ಕೆಳಮನಿ ಅವರು ಆಯುರ್ವೇದ ಪದ್ಧತಿಯಲ್ಲಿ ಆರೋಗ್ಯವಂತ ಜೀವನ ಶೈಲಿ, ಆಹಾರ, ವಿಹಾರ, ನಿದ್ದೆ ದಿನಚರಿ ನಿರ್ವಹಣೆಯ ಕುರಿತಾಗಿ ಹೇಳುತ್ತ ಆರೋಗ್ಯವಂತ ಸಮಾಜಕ್ಕೆ ದೇಹದ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅಗತ್ಯವೆಂಬುದನ್ನು ತಿಳಿಸಿಕೊಟ್ಟರು. ಆಯುರ್ವೇದ ಜೀವನ ಪದ್ಧತಿ ಮುಖ್ಯ ಬಿಂದುಗಳನ್ನು ತಿಳಿಸಿದರು.. ಆರೋಗ್ಯ ಸಂಬಂಧಿತ ಸಂವಾದವೂ ಜರುಗಿತು.

Swadeshi Jagaran Manch -Worksho

ಶ್ರೀ. ಮಹಾದೇವಯ್ಯ ಕರದಳ್ಳಿ, ಸ್ವದೇಶಿ ಜಾಗರಣ ಮಂಚ್‌ನ ಕರ್ನಾಟಕ ರಾಜ್ಯದ  ಸಹ-ಸಂಯೋಜಕರು, ಸ್ವದೇಶಿ ಜೀವನ ಪದ್ಧತಿಯೆಂಬುದು ವ್ಯಕ್ತಿಯಿಂದ ಪ್ರಾರಂಭವಾಗಬೇಕು. ಸಮಾಜದಲ್ಲಿ  ಸ್ವಾವಲಂಬನೆ, ಸ್ವಾಭಿಮಾನ ಮತ್ತು ದೇಶಹಿತ ಕೇಂದ್ರಿತ ಜೀವನಶೈಲಿ ರೂಢಿಸುವುದಾಗಿದೆ. ಈ ಅರಿವು ಮೂಡಿಸುವ ಕಾರ್ಯವನ್ನು ಸ್ವದೇಶಿ ಜಾಗರಣ ಮಂಚ್ ಕಾರ್ಯಕರ್ತರು ದಶಕಗಳಿಂದ ಮಾಡುತ್ತಿದ್ದಾರೆ ಎಂದು ಹೇಳಿದರು. ಮತ್ತು ೨೦೧೨-೧೩ರ ವಾರ್ಷಿಕ ಯೋಜನೆ ತಕ್ಕಂತೆ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶ್ರೀ. ಜಗದೀಶ, ಸ್ವದೇಶಿ ಜಾಗರಣ ಮಂಚ್‌ನ ಕರ್ನಾಟಕ ರಾಜ್ಯದ  ಸಂಯೋಜಕರು, ಮಂಚ್‌ನ ಕಳೆದ ವರ್ಷದ ಸಾಧನೆಗಳನ್ನು ಹೋರಾಟಗಳ ವಿವರಗಳನ್ನು ಸಭೆಗೆ ತಿಳಿಸಿದರು.  ಕಾರ್ಯಕರ್ತರಿಗೆ ತಿರುಚನಾಪಳ್ಳಿಯ ರಾಷ್ಟ್ರೀಯ ಅಭ್ಯಾಸವರ್ಗ ಬಗ್ಗೆ  ಮಾಹಿತಿ ನೀಡಿದರು.

ಶ್ರೀ. ಅಪಲಾ ಪ್ರಸಾದ್, ಸ್ವದೇಶಿ ಜಾಗರಣ ಮಂಚ್‌ನ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳು, ಸ್ವದೇಶಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಅಮೇರಿಕಾ, ಬ್ರಿಟನ್, ಜಪಾನ್ ಮತ್ತು ಜರ್ಮನಿಗಳಂತಹ ರಾಷ್ಟ್ರಗಳು ಸ್ವದೇಶಿ ಅಳವಡಿಸಿಕೊಂಡಿವೆ. ದೇಶ ಆರ್ಥಿಕ ಸುಭದ್ರತೆ ಹೊಂದಲು ಸ್ವದೇಶಿ ಚಿಂತನೆಯಿಂದ ಸಾಧ್ಯವೆಂದು ಅಂಕಿ ಅಂಶಗಳ ಸಹಿತವಾಗಿ ಸಭೆಗೆ ತಿಳಿಸಿಕೊಟ್ಟರು. ಉತ್ತಮ ನಾಯಕನಿಗೆ ಇರಬೇಕಾದ ಗುಣಗಳ ಬಗ್ಗೆ ಕಾರ್ಯಕರ್ತರ ಗಮನ ಸೆಳೆದರು.

ಪ್ರೊ ಎಂ ಬಿ ಬಿರಾದಾರ, ಉಪನ್ಯಾಸಕರಾದ ಶ್ರೀ ಬಿ ಎಸ್ ಬಿರಾದಾರ,  ಶ್ರೀ ರಾಜಕುಮಾರ ಕೋರಿ, ಶ್ರೀ ಸಿ ಎನ್ ಬಾಬಳಗಾಂವ,   ಶ್ರೀ ಮನೋಹರ ಬಡಶೇಷಿ, ಶ್ರೀ ಹಣಮಂತರಾವ ಆಲಗೂಡಕರ್, ಡಾ ಚಂದ್ರಕಾಂತ ಕೆಳಮನಿ, ಶ್ರೀ ಮಾಣಿಕ ಕುಲಕರ್ಣಿ, ಶ್ರೀ ಗುರುರಾಜ ದೇಶಪಾಂಡೆ, ಶ್ರೀ ಚಂದ್ರಕಾಂತ ಹೊಸಮನಿ, ಶ್ರೀ ಶಾಂತಪ್ಪ ಹೊಸಗೌಡರ್, ಸಂಶೋಧನಾ ವಿದ್ಯಾರ್ಥಿಗಳಾದ ಶ್ರೀ ಪ್ರಮೋದ ಕುಲಕರ್ಣಿ, ಶ್ರೀ ವಿನೋದ ಪಾಟೀಲ, ಶ್ರೀ ರಾಕೇಶ, ಶ್ರೀ ಮಹೇಶ, ಶ್ರೀ ನಿಂಗಣ್ಣ, ಶ್ರೀ ಸಂವಾದ, ಶ್ರೀ ಎನ್ ಮಂಜುನಾಥ, ಶ್ರೀ ಸಿದ್ದೇಶ್ವರ ಮುಂತಾದವರು ಸೇರಿದಂತೆ     ಕರ್ನಾಟಕದ ಉತ್ತರ ಜಿಲ್ಲೆಗಳಿಂದ 50 ಕಾರ್ಯಕರ್ತರು ಈ ಸಭೆಯಲಿ ಭಗವಹಿಸಿದ್ದರು.

(ಗಣಪತರಾವ ಹುಮನಾಬಾದೆ ಕಲಬುರ್ಗಿ ನಗರ ಸಂಯೋಜಕರು.)

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS-ABVP Worker Vishal's murder case: Kerala Police arrested two Popular Front Workers

Fri Jul 20 , 2012
Chengannur, Kerala July 20:  Kerala police has arrested two activists of Popular Front, in connection with murder of RSS-ABVP activist Vishal. The arrested individuals were identified as Nasim and Shafique, were active members of Popular Front, a Muslim extremist organisation in Kerala. Nasim, a 3rd year student of Christian College […]