ಮೈಸೂರು: ವಾಯುವಿಹಾರಕ್ಕೆ ಹೋದ ಮಾಜಿ ಆರೆಸ್ಸೆಸ್ ಸರಸಂಘಚಾಲಕ ಕೆ ಎಸ್ ಸುದರ್ಶನ್ ವಾಪಾಸ್ಸು

ಆರೆಸ್ಸೆಸ್  ಕಚೇರಿ ಅಧಿಕೃತ ಪ್ರಕಟಣೆ 

ಮೈಸೂರು ಅಗಸ್ಟ್ 3: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸರಸಂಘಚಾಲಕ ಶ್ರೀ ಕೆ ಎಸ್ ಸುದರ್ಶನ್ (83) ಮೈಸೂರಿನಲ್ಲಿ ಮುಂಜಾನೆ ವಾಯುವಿಹಾರಕ್ಕೆ ಹೋದವರು ವಾಪಾಸ್ಸು ಬಂದಿದ್ದಾರೆ . ಸ್ವಯಂಸೇವಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೆಸ್ಸೆಸ್ ಕಚೇರಿ ಪ್ರಕಟಣೆ ತಿಳಿಸಿದೆ.

KS Sudarshan, RSS Former Sarasanghachalak
ಕಳೆದ 3 ದಿನಗಳಿಂದ ಸುದರ್ಶನ್ ರವರು ಖಾಸಗಿ ಭೇಟಿಗಾಗಿ ಮೈಸೂರಿನ ಅವರ  ತಮ್ಮ ರಮೇಶ್ ರ ಮನೆಗೆ ಬಂದಿದ್ದರು. ಇವತ್ತು ಬೆಳಗ್ಗೆ 5.00ರ ಸುಮಾರಿಗೆ ಅವರು ವಾಯು ವಿಹಾರಕ್ಕೆ ಹೊರಟರು. ವಾಯು ವಿಹಾರಕ್ಕೆ ಹೊರಟು ನಿಗದಿತ ಸಮಯಕ್ಕೆ ವಾಪಸ್ಸಾಗದಿದ್ದ ಸುದ್ದಿ ರಾಷ್ಟ್ರೀಯ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಮುನ್ನ, ಬೆಳಗ್ಗೆ 5.00ಕ್ಕೆ ಒಬ್ಬಂಟಿಯಾಗಿ ವಾಯುವಿಹಾರಕ್ಕೆ  ತೆರಳಿದ ಸುದರ್ಶನ್ ರವರು ವಾಕಿಂಗ್ ವೇಳೆ ಬಳಲಿದ್ದರಿಂದ ರಸ್ತೆಯಲ್ಲಿನ ಅಶೋಕ್ ಎಂಬವರ ಮನೆಯಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದಿದ್ದರು. ಚಾಮುಂಡಿ ಬೆಟ್ಟದ ಬಳಿಯ ಹೋಟೆಲ್ ಲಲಿತ್ ಮಹಲ್ ಪರಿಸರದ ರಸ್ತೆಯೊಂದರ ಬಳಿ ಸುದರ್ಶನ್ ಜೀ ಕುಳಿತಿದ್ದರು.  ಸುದರ್ಶನ್ ಜೀಯವರನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Former Chief KS Sudarshan returned, safe.

Fri Aug 3 , 2012
RSS Press Release: Mysore August 3: Former RSS Sarasanghachalak K S Sudarshan went for a morning walk, but now  returned safely, said RSS Office press release. Sudrashan went for a Morning walk, alone at 5.20am. Since he returned late, there a tensed atmosphere as the news was on national headlines. He […]