ನೇರನೋಟ: ಸತ್ಯ ಬಿಚ್ಚಿಟ್ಟಿದ್ದಕ್ಕೆ ಸುಷ್ಮಿತಾಗೆ ಸಿಕ್ಕ ಉಡುಗೊರೆ – ಸಾವು!

ನೇರನೋಟ: ಸತ್ಯ ಬಿಚ್ಚಿಟ್ಟಿದ್ದಕ್ಕೆ ಸುಷ್ಮಿತಾಗೆ ಸಿಕ್ಕ ಉಡುಗೊರೆ – ಸಾವು!

Sushmita Banerjee Datta
Sushmita Banerjee Datta

‘ನನಗನಿಸುತ್ತಿದೆ – ಈ ಮುಲ್ಲಾಗಳು ತಾಲಿಬಾನರೇ ಆಗಿದ್ದರಲ್ಲವೆ? ಇಸ್ಲಾಂ ಧರ್ಮದಲ್ಲಿಯೂ ಒಂದು ಸಂಸ್ಕಾರವನ್ನು ಉಂಟುಮಾಡಬೇಕೆಂದು ಯಾರ‍್ಯಾರು ಬಯಸುತ್ತಾರೋ ಅವರೆಲ್ಲರನ್ನೂ ‘ಕಾಫಿರ್’ ಎಂಬ ಬಣ್ಣ ಬಳಿದು ಆಚೆಗೆ ತಳ್ಳುತ್ತಾರೆ. ಹಾಗಾಗಿಯೇ ಇಸ್ಲಾಂ ಎಂಬ ಸಾಮಾನ್ಯ ಸಮಾಜದಲ್ಲಿ ಶೈಕ್ಷಣಿಕ ವಿಕಾಸ ಆಗುತ್ತಿಲ್ಲ. ಆಗುವುದೂ ಇಲ್ಲ. ಏಕೆಂದರೆ ಅದರಿಂದ ಮುಲ್ಲಾವಾದಿಗಳಿಗೆಲ್ಲ ಭಾರೀ ಧಕ್ಕೆ ಉಂಟಾಗುತ್ತದೆ. ಜನರು ಕುಸಂಸ್ಕಾರ ಮತ್ತು ರೂಢಿವಾದಿಗಳ ನಾಗಪಾಶದಿಂದ ಮುಕ್ತರಾಗಿಬಿಟ್ಟರೆ ಈ ಮುಲ್ಲಾಗಳಿಗೆ ನಿತ್ಯದ ರೊಟ್ಟಿಗೇ ಗತಿಯಿಲ್ಲದಂತಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಹಜರತ್ ಮುಹಮ್ಮದ್ ಸ್ವತಃ ಧರ್ಮಗುರುಗಳಿಗಿಂತ ಹೆಚ್ಚು ರಾಜನೀತಿಜ್ಞನಾಗಿದ್ದ ಅನಿಸುತ್ತಿದೆ…’

‘… ತಾಲಿಬಾನಿಗಳು ಇಲ್ಲಿ ವಿದೇಶಿಯರು. ಪಾಕಿಸ್ಥಾನ ಮತ್ತು ಅರಬ್ ಸಹಾಯದಿಂದಲೇ ತಾಲಿಬಾನಿಗಳು ಅರಳಿದ್ದಾರೆ, ಫಲ ಪಡೆದಿದ್ದಾರೆ. ಇಡೀ ವಿಶ್ವದಲ್ಲೆಲ್ಲ ಇಸ್ಲಾಂ ಧರ್ಮವನ್ನು ಸ್ಥಾಪಿಸುವ ಅಮಲಿನಲ್ಲಿ ಮದೋನ್ಮತ್ತರಾಗಿದ್ದಾರೆ. ಸಹಾನುಭೂತಿ, ಕೃತಜ್ಞತೆ ಎಂಬ ಪದಗಳನ್ನೇ ಕೇಳಿರದವರು ಇವರು. ದಬ್ಬಾಳಿಕೆ, ಜಬರ್‌ದಸ್ತಿಯ ತಾಕತ್ತಿನಿಂದಲೇ ರಾಜಸತ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ಗಣತಂತ್ರ ಎಂಬುದನ್ನೇ ಅರಿಯದವರಿವರು. ಅನ್ಯರ ಮಾತೃಭೂಮಿಯ ಮೇಲೆ ಆಕ್ರಮಣ ಮಾಡುವುದರಲ್ಲೇ ತಮ್ಮ ಸಭ್ಯತೆಯನ್ನು ಕಾಣುತ್ತಾರೆ. ಮಹಿಳೆಯರನ್ನೆಲ್ಲ ಮನೆಯಲ್ಲಿ ಬಂಧಿತರನ್ನಾಗಿರಿಸುವುದೇ ತಮ್ಮ ಪೌರುಷದ ದ್ಯೋತಕವೆಂದು ಭಾವಿಸುತ್ತಾರೆ ಈ ತಾಲಿಬಾನಿಗಳು… ಈ ತಾಲಿಬಾನಿಗಳನ್ನು ವಿಶ್ವಾಸದ್ರೋಹಿಗಳು, ಗದ್ದಾರರು ಎಂದು ಹೇಳುವುದೇ ಸರಿಯಾದ ವಿಶ್ಲೇಷಣೆ. ಬೇರಾವ ಶಬ್ದಾಲಂಕಾರ ನನಗೆ ಕಾಣದು…’

‘…ಮುಸ್ಲಿಂ ದೇಶದಲ್ಲಿ ಹಿಂದುಗಳ ಬಗ್ಗೆ ಯಾವುದೇ ಮಾನ ಮರ್ಯಾದೆ ಇರುವುದಿಲ್ಲ. ಅಪ್ಪಿತಪ್ಪಿ ಯಾರಾದರೂ ಹಿಂದುಗಳು ಆ ದೇಶದಲ್ಲಿ ಉಳಿದಿದ್ದರೆ ಅವರಿಗಾಗಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಅವರದೇ ಪ್ರತ್ಯೇಕ ದೇವಸ್ಥಾನ ಇರುವುದಕ್ಕೂ ಅವಕಾಶವಿಲ್ಲ. ಒಂದು ವೇಳೆ ಎಲ್ಲಿಯಾದರೂ ಅದನ್ನು ಕಂಡರೆ ಒಡೆದು ಹಾಕಲಾಗುತ್ತದೆ. ಪೂಜೆ, ಅರ್ಚನೆಗಳನ್ನು ಕದ್ದುಕದ್ದು ಕಳ್ಳರ ಹಾಗೆ ಆಚರಿಸಬೇಕಾಗುತ್ತದೆ. ಹಿಂದುಗಳ ದೇವದೇವತೆಗಳ ಮೂರ್ತಿಗಳನ್ನು ಕಂಡರೆ ಕಾಲಿನಿಂದ ಒದ್ದು ಉರುಳಿಸುವುದು ಅಥವಾ ಅವನ್ನು ಒಡೆದು ಚೂರು ಮಾಡಿ ಹಾಕುವುದು ಮುಸಲ್ಮಾನರಿಗೆ ಒಂದು ಪುಣ್ಯ ಕಾರ್ಯ. ಮುಸ್ಲಿಂ ದೇಶದೆಲ್ಲೆಡೆ ಹಿಂದುಗಳನ್ನು ಕಾಫಿರ್ ಎಂದು ಕರೆಯಲಾಗುತ್ತದೆ. ಮುಸ್ಲಿಮರೊಂದಿಗೆ ಗೌರವದಿಂದ ಬಾಳುವೆ ಮಾಡುತ್ತಿರುವ ಹಿಂದೂ ಜನರು ಕೂಡ ಅವರ ಲೆಕ್ಕದಲ್ಲಿ ಕಾಫಿರರೆ!..’

– ಹೀಗೆ ತಾಲಿಬಾನಿಗಳ ಬಗ್ಗೆ, ಮುಸ್ಲಿಮರ ಬಗ್ಗೆ ದಿಟ್ಟವಾಗಿ ಬರೆದ ಲೇಖಕಿ ಸುಷ್ಮಿತಾ ಬ್ಯಾನರ್ಜಿ. ‘ತಾಲಿಬಾನ್, ಅಫಘನ್ ಔರ್ ಮೈ’ (ತಾಲಿಬಾನ್, ಅಫಘನ್ ಮತ್ತು ನಾನು) ಎಂಬ ತನ್ನ ಸ್ವಾನುಭವದ ಸತ್ಯಕಥೆಯಲ್ಲಿ ಸುಷ್ಮಿತಾ ಬ್ಯಾನರ್ಜಿ ದಿಟ್ಟತನದಿಂದ ಮೇಲಿನ ಬರಹ ದಾಖಲಿಸಿದ್ದಾಳೆ. ಈ ಕೃತಿ ಬಂಗಾಳಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪ್ರಕಟವಾಗಿ ಅತ್ಯಧಿಕ ಮಾರಾಟ ಕೃತಿಯೆಂಬ ಹೆಗ್ಗಳಿಕೆ ಪಡೆದಿದೆ.

ಆದರೆ ಈಗ ಸುಷ್ಮಿತಾ ಬ್ಯಾನರ್ಜಿ ಜೀವಂತವಾಗಿಲ್ಲ. ಹೀಗೆ ದಿಟ್ಟತನದಿಂದ ಬರೆದ ಕಾರಣಕ್ಕಾಗಿಯೇ ಆಕೆ ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ. ಇತ್ತೀಚೆಗೆ ಅಫಘನ್ ತಾಲಿಬಾನಿಗಳಿಂದ ಕಾಬೂಲಿನ ಸಮೀಪದ ತನ್ನ ಮನೆಯ ಹೊರಗೆ ಸುಷ್ಮಿತಾ ತಾಲಿಬಾನಿಗಳ ಗುಂಡೇಟಿನಿಂದ ಕೊಲೆಗೀಡಾಗಬೇಕಾಯಿತು. ತಾಲಿಬಾನಿಗಳು ಆಕೆಯನ್ನು ಪಕ್ತಿಕಾ ಪ್ರಾಂತದಲ್ಲಿರುವ ಅವರ ಮನೆಯಿಂದ ಹೊರಗಡೆ ಎಳೆದುತಂದು ಆಕೆಯ ದೇಹದ ಮೇಲೆ ೨೦ ಬಾರಿ ಗುಂಡು ಹಾರಿಸಿ, ತಲೆಯ ಕೂದಲನ್ನು ಕಿತ್ತು ಎಳೆದಾಡಿ ಬರ್ಬರ ರೀತಿಯಲ್ಲಿ ಸಾಯಿಸಿ, ನಂತರ ದೇಹವನ್ನು ಸಮೀಪದಲ್ಲೇ ಇದ್ದ ಧಾರ್ಮಿಕ ಶಾಲೆಯೊಂದರ ಬಳಿ ಎಸೆದು ಹೋಗಿದ್ದಾರೆ. ಸುಷ್ಮಿತಾ ಅವರ ಹತ್ಯೆಯ ಹೊಣೆಯನ್ನು ಈವರೆಗೂ ಯಾವುದೇ ಉಗ್ರರ ಗುಂಪು ಹೊತ್ತಿಲ್ಲವಾದರೂ ಅದು ತಾಲಿಬಾನಿಗಳದೇ ಕೃತ್ಯ ಎಂಬುದು ಬಹುತೇಕ ಎಲ್ಲರ ಶಂಕೆ. ಸುಷ್ಮಿತಾ ಅವರು ಬರೆದ ಕೃತಿಗಳ ಯಾವುದೇ ಪುಟಗಳನ್ನು ತೆರೆದರೂ ಅಲ್ಲಿ ದಾಖಲಾಗಿರುವುದು – ತಾಲಿಬಾನಿಗಳ ಕ್ರೌರ್ಯ, ಮುಸ್ಲಿಂ ಮುಲ್ಲಾಗಳ ಸಂವೇದನಾರಹಿತ ವರ್ತನೆ, ಮುಸ್ಲಿಂ ಸಮಾಜದಲ್ಲಿ ಮಹಿಳೆಯರನ್ನು ದಾಸಿಯರಂತೆ ಕಾಣುವ ಹೀನ ಪರಿಸ್ಥಿತಿ… ಇಂತಹ ಚಿತ್ರಣಗಳೇ. ಸುಷ್ಮಿತಾ ಬರೆದ ‘ಸಮ್‌ಟೈಮ್ ಇನ್ ಅರ್ಲಿ ೧೯೯೪’ ಮತ್ತು ‘ಕಾಬೂಲಿವಾಲರ್ ಬೆಂಗಾಲಿ ಪತ್ನಿ’ ಕೃತಿಗಳಲ್ಲೂ ಅಫಘಾನಿಸ್ಥಾನದ ಭೀಕರ ಚಿತ್ರಣಗಳೇ ಹಾದುಹೋಗಿವೆ. ಇವೆರಡೂ ಕೃತಿಗಳು ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗಿದ್ದವು.

ಸುಷ್ಮಿತಾ ಬ್ಯಾನರ್ಜಿ ಹುಟ್ಟಿದ್ದು ಕೋಲ್ಕತ್ತಾದ ಬಂಗಾಲಿ ಕುಟುಂಬವೊಂದರಲ್ಲಿ. ಆದರೆ ೧೯೮೮ರಲ್ಲಿ ಅಫಘನ್ ಉದ್ಯಮಿ ಜಾನ್‌ಬಾಜ್‌ಖಾನ್ ಎಂಬಾತನನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿ, ಅದು ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಮುಸಲ್ಮಾನನೊಬ್ಬನನ್ನು ಮದುವೆಯಾಗಿದ್ದರೂ ಸುಷ್ಮಿತಾ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿರಲಿಲ್ಲ. ಆದರೆ ಕಾಬೂಲಿಗೆ ಸಮೀಪದ ಪಕ್ತಿಕಾದಲ್ಲಿ ಆಕೆಯನ್ನು ಎಲ್ಲರೂ ಸೈಯದ್ ಕಮಲಾ ಎಂದೇ ಕರೆಯುತ್ತಿದ್ದರು. ಮುಸ್ಲಿಮನೊಬ್ಬನನ್ನು ಮದುವೆಯಾಗಿದ್ದರೂ ಸುಷ್ಮಿತಾ ಬ್ಯಾನರ್ಜಿಯ ಒಳಗಿನ ಹಿಂದೂ ಮನಸ್ಸು ಮಾತ್ರ ಮುಸಲ್ಮಾನ ಸಮಾಜದ ಅಪಸವ್ಯಗಳ ಬಗ್ಗೆ, ಬಾನಗಡಿಗಳ ಬಗ್ಗೆ, ಮೃಗೀಯ ವರ್ತನೆಗಳ ಬಗ್ಗೆ ಪದೇಪದೇ ಪ್ರಶ್ನಿಸುತ್ತಲೇ ಇತ್ತು. ಅದು ಕೇವಲ ಮನಸ್ಸಿನೊಳಗೇ ಹುದುಗಿದ ಮೌನದ ಪ್ರಶ್ನೆಯಾಗಿರಲಿಲ್ಲ. ಮನಸ್ಸಿನಾಚೆಗೂ ಆ ಪ್ರಶ್ನೆಗಳು ಸಿಡಿದು ಮಾತುಗಳ ರೂಪದಲ್ಲಿ ಹೊರಬರುತ್ತಿದ್ದವು. ಬರಹಗಳ ರೂಪದಲ್ಲೂ ಪ್ರಕಟವಾಗುತ್ತಿದ್ದವು.

ಅಫಘನ್ ನೆಲದಲ್ಲಿ ಕಂಡಿದ್ದು…

ಜಾನ್‌ಬಾಜ್‌ಖಾನ್‌ರನ್ನು ಮದುವೆ ಮಾಡಿಕೊಂಡು ಅಫಘಾನಿಸ್ಥಾನಕ್ಕೆ ಹೋದಾಗ ಸುಷ್ಮಿತಾಗೆ ಅದೊಂದು ಬೇರೆಯೇ ಪ್ರಪಂಚ ಎನ್ನಿಸಲು ಹೆಚ್ಚು ದಿನಗಳು ಬೇಕಾಗಿರಲಿಲ್ಲ. ಅಲ್ಲಿಗೆ ಹೋಗುವ ಮುನ್ನ ಅಮೆರಿಕೆಗೆ ಹೋಗುವುದು ಅಥವಾ ಅಫಘಾನಿಸ್ಥಾನಕ್ಕೆ ಹೋಗುವುದು ಎರಡೂ ಒಂದೇ ಎಂದುಕೊಂಡಿದ್ದ ಸುಷ್ಮಿತಾಗೆ  ತಾನು ಅಂದುಕೊಂಡಿದ್ದು ಸರಿಯಲ್ಲ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಯಿತು. ಶಿಕ್ಷಣವಿಲ್ಲದ, ಕೇವಲ ಪುರುಷರ ಭೋಗವಸ್ತುವಾಗಿ ಬದುಕಬೇಕಾದ ಅನಿವಾರ್ಯತೆ ಇರುವ ಮುಸ್ಲಿಂ ಮಹಿಳೆಯರು; ಯಾವುದೇ ನಿಶ್ಚಿತ ಕೆಲಸ ಮಾಡದೆ, ಬದುಕಿನಲ್ಲಿ ಯಾವುದೇ ಉದಾತ್ತ ಗುರಿಯನ್ನೂ ಹೊಂದದೆ ಸೋಮಾರಿಗಳಾಗಿ, ಕಾಮುಕರಾಗಿ ಕಾಲಕಳೆಯುವುದೇ ಜೀವಿತೋzಶ ಎಂದು ಭಾವಿಸಿರುವ ಅಫಘನ್ ಗಂಡಸರು; ಮೊದಲು ೧೯೮೯ರಲ್ಲಿ  ಕಾಬೂಲ್ ಪಟ್ಟಣದಲ್ಲಿ ಬೆಳಗಿದ ವಿದ್ಯುತ್ ಬೆಳಕು ತಾಲಿಬಾನ್ ಆಡಳಿತ ಬಂದ ಬಳಿಕ ಅದು ಮಾಯವಾಗಿ ವಿದ್ಯುತ್ ಬೆಳಕಿನ ಜಾಗದಲ್ಲಿ ಲಾಟೀನುಗಳು ತಲೆಯೆತ್ತಿದ್ದು… ಈ ವಾಸ್ತವ ಕಠೋರ ಸಂಗತಿಗಳೆಲ್ಲ ಸುಷ್ಮಿತಾಗೆ ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಕೆಲವೊಮ್ಮೆ ತನ್ನ ತವರು ನೆಲ ಭಾರತಕ್ಕೆ ಓಡಿ ಹೋಗೋಣ ಎಂದೆನಿಸಿದ್ದೂ ಉಂಟು. ಹಾಗೆಂದು ಆಕೆ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾಳೆ. ಆದರೆ ಸುಷ್ಮಿತಾಳ ಒಳಗಿನ ದಿಟ್ಟತನದ ಮನಸ್ಸು ಆಕೆಯನ್ನು ಅದೇ ದೇಶದಲ್ಲೇ ನೆಲಸಿ, ಅಲ್ಲಿನ ಮುಸ್ಲಿಂ ಮಹಿಳೆಯರ ಬದುಕಿನಲ್ಲಿ ಶಿಕ್ಷಣದ ಅರಿವು ಉಂಟು ಮಾಡಬೇಕೆಂದು ಬಯಸಿತು. ಅದಕ್ಕಾಗಿ ಆಕೆ ಆರೋಗ್ಯ ಕಾರ್ಯಕರ್ತೆಯಾಗಿ ಗುಪ್ತವಾಗಿ ಕ್ಲಿನಿಕ್‌ವೊಂದನ್ನು ತೆರೆದಿದ್ದಳು. ಅಲ್ಲಿ ಕೇವಲ ಖಾಯಿಲೆಗಳಿಗೆ ಔಷಧಿ ಕೊಡುವ ಕೆಲಸವಷ್ಟೇ ಅಲ್ಲದೆ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಕ್ರೌರ್ಯ, ಹೊರಗಿನ ಜಗತ್ತನ್ನು ಅರಿಯುವ ಅವರ ಬಯಕೆಯನ್ನು ಹೊಸಗಿ ಹಾಕಿರುವುದು ಇವುಗಳ ಬಗ್ಗೆಯೂ ತಿಳಿವಳಿಕೆ ಮೂಡಿಸುವುದು ಅವಳ ಉzಶವಾಗಿತ್ತು. ಮೊದಮೊದಲು ಅಫಘನ್ ಮಹಿಳೆಯರು ಆ ಕ್ಲಿನಿಕ್‌ಗೆ ಬರಲು ಹೆದರಿಕೊಂಡಿದ್ದರು. ಆದರೆ ಅನಂತರ ಗುಟ್ಟಾಗಿ ಬಂದು, ಗಂಡಸರಿಂದ ತಾವು ಅನುಭವಿಸುತ್ತಿರುವ ಕಿರುಕುಳ, ಚಿತ್ರಹಿಂಸೆ, ಯಮಯಾತನೆಗಳನ್ನು ಸವಿಸ್ತಾರವಾಗಿ ಸುಷ್ಮಿತಾ ಬಳಿ ಹಂಚಿಕೊಳ್ಳತೊಡಗಿದರು. ಸುಷ್ಮಿತಾ ಅವರಿಗೆ ಧೈರ್ಯ ತುಂಬಿ ಪಶುಗಳಂತೆ ಚಿತ್ರಹಿಂಸೆ ಅನುಭವಿಸುವ ಬದಲು ಸಿಡಿದೇಳಲು ಪ್ರೋತ್ಸಾಹಿಸುತ್ತಿದ್ದಳು. ಜೊತೆಗೆ ವಿದ್ಯಾಭ್ಯಾಸ ಮಾಡುವಂತೆ ಆ ಮಹಿಳೆಯರಿಗೆ ಪ್ರೇರಣೆಯನ್ನೂ ನೀಡುತ್ತಿದ್ದಳು.

ಬಡಿಗೆಯಿಂದ ಬಾರಿಸಿದರು

ಆದರೆ ತಾಲಿಬಾನಿಗಳ ದೃಷ್ಟಿಯಲ್ಲಿ ಮುಸ್ಲಿಂ ಮಹಿಳೆಯರು ವಿದ್ಯಾವಂತರಾಗುವುದು ಘೋರ ಅಪರಾಧ! ಇನ್ನು ಗಂಡಸರೆಸಗುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಸಿಡಿದೇಳುವುದಂತೂ ಮತ್ತಷ್ಟು ಘೋರ ಅಪರಾಧ! ಕುರ್ ಆನ್‌ನಲ್ಲಿ ಈ ಬಗ್ಗೆ ಏನು ಹೇಳಿದೆಯೋ ಗೊತ್ತಿಲ್ಲ. ಆದರೆ ತಾಲಿಬಾನಿಗಳ ದೃಷ್ಟಿಯಲ್ಲಿ ಇಂತಹ ಅಪರಾಧವೆಸಗಿದವರಿಗೆ ಮರಣದಂಡನೆಯೊಂದೇ ಗತಿ. ಅಫಘನ್ ಮಹಿಳೆಯರನ್ನು ವಿದ್ಯೆ ಕಲಿಯುವಂತೆ ಪ್ರಚೋದಿಸಿದ, ಗಂಡಸರ ದಬ್ಬಾಳಿಕೆ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸಿದ ಸುಷ್ಮಿತಾ ಬ್ಯಾನರ್ಜಿ ವಿರುದ್ಧ ತಾಲಿಬಾನಿಗಳು  ಸಿಟ್ಟಿಗೇಳದೇ ಇರಲು ಸಾಧ್ಯವೆ? ಅವರು  ಆಕೆಯ ಕ್ಲಿನಿಕ್ ಅನ್ನು ಪತ್ತೆ ಹಚ್ಚಿದರು. ಸುಷ್ಮಿತಾಳನ್ನು ಮನಬಂದಂತೆ ಬಡಿಗೆಯಿಂದ ಬಾರಿಸಿದರು. ಕಂಗಾಲಾದ ಸುಷ್ಮಿತಾ ಆ ದೇಶದಿಂದ ಪರಾರಿಯಾಗುವುದೊಂದೇ ತನಗುಳಿದಿರುವ ಮಾರ್ಗ ಎಂದು ಭಾವಿಸಿ ತಪ್ಪಿಸಿಕೊಳ್ಳಲು ಮೂರು ಬಾರಿ ಪ್ರಯತ್ನಿಸಿ ವಿಫಲಳಾದಳು. ಕೊನೆಗೂ ಹೇಗೋ ತಪ್ಪಿಸಿಕೊಂಡು ದೆಹಲಿಗೆ ಬಂದು, ಮುಂದಿನ ೧೮ ವರ್ಷಗಳ ಕಾಲ ಭಾರತದಲ್ಲೇ ನೆಲೆಸಿ ತನ್ನ ಅಫಘನ್ ದೇಶದ ಭಯಾನಕ ಅನುಭವಗಳ ಕುರಿತು ೩ ಪುಸ್ತಕಗಳನ್ನು ಬರೆದಳು. ಆಕೆ ರಚಿಸಿದ ‘ಂ ಏಚಿbuಟiತಿಚಿಟಚಿ’s ಃeಟಿgಚಿಟi Wiಜಿe’ ಎಂಬ ಕೃತಿ ಅನಂತರ ‘ಇsಛಿಚಿಠಿe ಈಡಿom ಣhe ಖಿಚಿಟibಚಿಟಿ’ ಎಂಬ ಚಲನಚಿತ್ರವಾಗಿ ಪ್ರದರ್ಶನಗೊಂಡಿತ್ತು.

ಸುಷ್ಮಿತಾ ಬ್ಯಾನರ್ಜಿ ಭಾರತದಲ್ಲೇ ನೆಲೆಸಿದ್ದರೆ ಬಹುಶಃ ಇಂತಹ ಬರ್ಬರ ಹತ್ಯೆಗೆ ತುತ್ತಾಗುತ್ತಿರಲಿಲ್ಲವೇನೋ. ಹೆಚ್ಚೆಂದರೆ ಭಾರತದ ‘ಸ್ಥಳೀಯ ತಾಲಿಬಾನಿಗಳು’ ಆಕೆಗೆ ಒಂದಷ್ಟು ಕಿರುಕುಳ ಕೊಡುತ್ತಿದ್ದರೇನೊ. ಆದರೆ ಒಂದು ದಿನ ಆಕೆ ಮತ್ತೆ ಅಫಘಾನಿಸ್ಥಾನದ ತನ್ನ ಪತಿಯ ಮನೆಗೆ ತೆರಳಲು ನಿರ್ಧರಿಸಿz ಆಕೆಯ ಬಾಳಿಗೆ ಮುಳುವಾಗಿ ಪರಿಣಮಿಸಿತು. ಮತ್ತೆ ಅಫಘಾನಿಸ್ಥಾನಕ್ಕೆ ಆಕೆ ತೆರಳಲು ನಿರ್ಧರಿಸಿದ್ದು ತಾಲಿಬಾನಿಗಳ ಆಡಳಿತ ಅಂತ್ಯವಾದ ಬಳಿಕ ಅಫಘಾನಿಸ್ಥಾನದ ಬದಲಾದ ಬದುಕಿನ ಚಿತ್ರಣವನ್ನು ದಾಖಲೀಕರಿಸಬೇಕು ಎಂಬ ಉzಶದಿಂದ. ಆದರೆ ಅಫಘಾನಿಸ್ಥಾನದಲ್ಲಿ ಹಮೀದ್ ಕರ್ಝಾಯಿ ನೇತೃತ್ವದ ಪ್ರಜಾತಾಂತ್ರಿಕ ಆಡಳಿತ ಬಂದಿದ್ದರೂ ತಾಲಿಬಾನಿಗಳ ಪ್ರಾಬಲ್ಯ ಕುಗ್ಗಿರಲಿಲ್ಲ. ಹೆಸರಿಗಷ್ಟೇ ಅಲ್ಲಿ ಪ್ರಜಾತಾಂತ್ರಿಕ ಸರ್ಕಾರ. ಆದರೆ ಜನಜೀವನದಲ್ಲಿ ಯಾವುದೇ ನೆಮ್ಮದಿ ಕಂಡುಬರುತ್ತಿರಲಿಲ್ಲ. ಕ್ರೌರ್ಯ, ಅಟ್ಟಹಾಸ, ಆತಂಕ ಹಿಂದಿನಂತೆಯೇ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಸುಷ್ಮಿತಾ ಬ್ಯಾನರ್ಜಿಯ ಬರ್ಬರ ಕೊಲೆಯೇ ಇದಕ್ಕೆ ದಿವ್ಯಸಾಕ್ಷಿ.

ಪ್ರತಿಭಟಿಸಿದವರಿಗೆ ಸಾವೇ ಗತಿ

ತಾಲಿಬಾನಿಗಳ ವಿರುದ್ಧ ಅಥವಾ ಮತಾಂಧ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾರೇ ಧ್ವನಿಯೆತ್ತಲಿ ಅವರಿಗೆ ಸಾವೇ ಗತಿ. ಪಾಕಿಸ್ಥಾನದಲ್ಲಿ ೨೦೧೨ರ ಅಕ್ಟೋಬರ್ ತಿಂಗಳಲ್ಲಿ ಇದೇ ರೀತಿ ಭಯೋತ್ಪಾದಕರ ವಿರುದ್ಧ ಧ್ವನಿಯೆತ್ತಿದ ಮಲಾಲಾ ಯೂಸುಫ್‌ಝೈ ಎಂಬ ಶಾಲಾ ವಿದ್ಯಾರ್ಥಿನಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಕೊಲ್ಲಲು ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಆಕೆ ಬದುಕಿ ಬಚಾವ್ ಆದಳು. ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಎಲ್ಲರಂತೆ ಅವರೂ ಕೂಡ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ತಜ್ಞರಾಗಬೇಕು ಎಂದು ಎಲ್ಲೆಡೆ ಆಕೆ ಹೇಳಿz ಆಕೆಯ ಹತ್ಯೆಗೆ ಪ್ರಮುಖ ಕಾರಣವಾಗಿತ್ತು. ಅಫಘಾನಿಸ್ಥಾನದ ಪಾರ್ಲಿಮೆಂಟ್ ಸದಸ್ಯೆ ಮಲಾಲಾಯಿ ಜೋಯಾ ಎಂಬಾಕೆಯ ಮೇಲೂ ಹಲವು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದವು. ಹೀಗಿರುವಾಗ ಮುಸ್ಲಿಂ ಮುಲ್ಲಾಗಳನ್ನು , ತಾಲಿಬಾನಿಗಳನ್ನು ತನ್ನ ಕೃತಿಗಳಲ್ಲಿ ಹಿಗ್ಗಾಮುಗ್ಗಾ ಝಾಡಿಸಿದ ಸುಷ್ಮಿತಾ ಬ್ಯಾನರ್ಜಿ ಎಂಬ ಹಿಂದೂ ಮಹಿಳೆಯನ್ನು ಜೀವಂತವಾಗಿರಲು ಆ ದುಷ್ಟ ಶಕ್ತಿಗಳು ಬಿಟ್ಟಾವೆಯೇ? ತಾಲಿಬಾನಿಗಳ ದೃಷ್ಟಿಯಲ್ಲಿ ಸುಷ್ಮಿತಾ ಒಬ್ಬ ಕಾಫಿರ್ ಅಥವಾ ಇಸ್ಲಾಂ ವಿರೋಧಿ ಮಹಿಳೆ. ಆಕೆಗೆ ಬದುಕುವ ಯಾವ ಹಕ್ಕೂ ಇರುವುದಿಲ್ಲ ಎನ್ನುವುದು ಅವರ ತೀರ್ಮಾನ! ಆಕೆ ಕಾಬೂಲ್ ತೊರೆದು ೧೮ ವರ್ಷಗಳಷ್ಟು ದೀರ್ಘಕಾಲವಾದ ಬಳಿಕವೂ ಆಕೆಯ ಮೇಲಿನ ಸೇಡನ್ನು ತಾಲಿಬಾನಿಗಳು ಮರೆತಿರಲಿಲ್ಲ.

ಬುದ್ಧಿಜೀವಿಗಳ ದಿವ್ಯ ಮೌನ!

ಸುಷ್ಮಿತಾ ಬ್ಯಾನರ್ಜಿ ಬರ್ಬರವಾಗಿ ಕೊಲೆಗೀಡಾಗಿದ್ದನ್ನು ಮೊದಲು ಬಿತ್ತರಿಸಿದ್ದು ಬಿಬಿಸಿ ಸುದ್ದಿ ಸಂಸ್ಥೆ. ಆದರೆ ಇಂತಹ ಒಂದು ಭೀಕರ ಪ್ರಸಂಗವನ್ನು ಭಾರತದ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸುಷ್ಮಿತಾ ಹತ್ಯೆಯಾದ ಮರುದಿನ ಬಹುತೇಕ ಪತ್ರಿಕೆಗಳಲ್ಲಿ ಒಳಗಿನ ಪುಟದ ಯಾವುದೋ ಮೂಲೆಯಲ್ಲಿ ಸಣ್ಣ ಸುದ್ದಿಯಾಗಿ ಆ ಹತ್ಯೆ ಪ್ರಕರಣ ವರದಿಯಾಗಿತ್ತು. ಸುದ್ದಿ ಮಾಧ್ಯಮಗಳಿಗೆ ಅದೊಂದು ವಿಶೇಷ ಮಹತ್ವದ ಸುದ್ದಿಯೆಂದು ಏಕೆ ಅನಿಸಲಿಲ್ಲವೋ ಎಂಬುದನ್ನು ಅವರೇ ಹೇಳಬೇಕು. ಎಲ್ಲರೂ ಪೂಜಿಸುವ ಗಣಪನನ್ನು ನಿಂದಿಸಿ ‘ಢುಂಢಿ’ ಎಂಬ ಕೆಟ್ಟ ಕೃತಿಯನ್ನು ಬರೆದ ಯೋಗೇಶ್ ಮಾಸ್ಟರ್‌ಗೆ ವಿಶೇಷ ಪ್ರಚಾರ ನೀಡುವ ಮಾಧ್ಯಮಗಳಿಗೆ, ಸುಷ್ಮಿತಾ ಸೇನ್ ಎಂಬ ದಿಟ್ಟ ಲೇಖಕಿಯ ಹತ್ಯೆಯ ಬಗ್ಗೆ ಪ್ರಚಾರ ನೀಡಬೇಕೆಂದು ಏಕೆ ಅನಿಸಲಿಲ್ಲ? ಅದು ಹೇಗಾದರೂ ಇರಲಿ, ಸುಷ್ಮಿತಾ ಬಂಗಾಲಿ ಹಾಗೂ ಇಂಗ್ಲಿಷ್‌ನಲ್ಲಿ ಅತ್ಯಧಿಕ ಬೇಡಿಕೆಯ ಲೇಖಕಿಯಾಗಿದ್ದರೂ ಆಕೆಯ ಹತ್ಯೆಯನ್ನು ಬುದ್ಧಿಜೀವಿಗಳು ಬೀದಿಗಿಳಿದು ಖಂಡಿಸುವ ಧೈರ್ಯವನ್ನು ತೋರಿಸಲಿಲ್ಲವೇಕೆ? ಎಲ್ಲೋ ಗುಜರಾತ್‌ನಲ್ಲಿ ಇಶ್ರತ್ ಎಂಬ ಭಯೋತ್ಪಾದಕಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಕ್ಕೆ ಕಣ್ಣೀರು ಸುರಿಸುವ, ಪ್ರತಿಭಟಿಸುವ, ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬಾಯಿ ಬಾಯಿ ಬಡಿದುಕೊಳ್ಳುವ, ಗಣಪತಿಯನ್ನು ವಿಕೃತವಾಗಿ ಚಿತ್ರಿಸಿದ ಲೇಖಕ ಯೋಗೇಶ್ ಮಾಸ್ಟರ್ ಬಂಧನವನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡುವ ಈ ಬುದ್ಧಿಜೀವಿಗಳಿಗೆ ಸುಷ್ಮಿತಾ ಬ್ಯಾನರ್ಜಿಯ ಬರ್ಬರ ಹತ್ಯೆ ಕೂಡ ಮಾನವ ಹಕ್ಕು ಉಲ್ಲಂಘನೆಯ ಪೈಶಾಚಿಕ ಕೃತ್ಯವೆಂದು ಏಕೆ ಅನಿಸುತ್ತಿಲ್ಲ?

ಬುದ್ಧಿಜೀವಿಗಳು ಹಿಂದೂ ಧರ್ಮ, ಸಂಸ್ಕೃತಿ ಪರವಾಗಿ ಬರೆಯುವ ಲೇಖಕ- ಲೇಖಕಿಯರು, ಮುಸ್ಲಿಂ ಭಯೋತ್ಪಾದಕರ ಕ್ರೌರ್ಯವನ್ನು ಖಂಡಿಸುವ ಬರಹಗಾರರ ವಿರುದ್ಧ ಎಂದಿಗೂ ತುಟಿ ಬಿಚ್ಚುವುದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಏಕೆಂದರೆ ಅಸಲಿಗೆ ಅದರ ವಿರುದ್ಧ ಧ್ವನಿಯೆತ್ತುವ ಧೈರ್ಯವೇ ಅವರಿಗಿರುವುದಿಲ್ಲ. ಹಾಗೇನಾದರೂ ಧೈರ್ಯವಹಿಸಿದರೆ ಎಲ್ಲಿ ತಮ್ಮ ಜೀವಕ್ಕೆ ಕುತ್ತು ಬರುತ್ತದೆಯೋ ಎಂಬ ಭೀತಿ ಅವರನ್ನು ಕಾಡುತ್ತದೆ. ಅಷ್ಟೇ ಅಲ್ಲ, ತಮಗೆ ಮುಂದೆ ಸಿಗಲಿರುವ ಸರ್ಕಾರದ ಸವಲತ್ತು, ಪ್ರಶಸ್ತಿಗಳಿಗೆ ಕತ್ತರಿ ಪ್ರಯೋಗ ಆಗಬಹುದೆಂಬ ದಿಗಿಲು ಕೂಡ ಅವರನ್ನು ಕಾಡದೇ ಇರದು. ಇಂತಹ ರಣಹೇಡಿಗಳನ್ನು ನಾವು ಬುದ್ಧಿಜೀವಿಗಳೆಂದು ಅಟ್ಟಕ್ಕೇರಿಸಿ, ಅವರಿಗೆ ಪರಾಕು ಹೇಳುತ್ತೇವಲ್ಲ, ನಮ್ಮ ಬುದ್ಧಿಗೆ ಯಾವ ಮಂಕು ಬಡಿದಿದೆ? ಅವರು ನಿಜಕ್ಕೂ ಬುದ್ಧಿಜೀವಿಗಳಲ್ಲ, ಬೇಕಿದ್ದರೆ ಅವರನ್ನು ಲದ್ದಿ ಜೀವಿಗಳೆಂದು ಕರೆಯಬಹುದಷ್ಟೆ! ಅಂತಹ ‘ಜೀವಿ’ಗಳ ಯಾವುದೇ ಅಭಿಪ್ರಾಯಕ್ಕೆ ಬೆಲೆ ಕೊಡಬೇಕಾದ ಅಗತ್ಯ ಕಾಣಿಸುವುದಿಲ್ಲ. ಸಮಾಜಕ್ಕೆ ಇಂತಹವರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.

ಸುಷ್ಮಿತಾ ಬ್ಯಾನರ್ಜಿಯಂತಹ ದಿಟ್ಟ ಲೇಖಕಿಯನ್ನು ಹತ್ಯೆ ಮಾಡಿ ಆಕೆಯ ಪ್ರತಿಭಟನೆಯ ಧ್ವನಿಯನ್ನು ಶಾಶ್ವತವಾಗಿ ಉಡುಗಿಸಿzವೆಂದು ತಾಲಿಬಾನಿಗಳು ಕೇಕೆ ಹಾಕಿ ನಕ್ಕಿರಬಹುದು. ಆದರೆ ಅಂತಹ ಇನ್ನಷ್ಟು ದಿಟ್ಟ ಧ್ವನಿಗಳು ಮತ್ತೆ ಕೇಳಿಬರಲಿವೆ ಎಂಬ ವಾಸ್ತವ ಮಾತ್ರ ಈ ತಾಲಿಬಾನಿಗಳಿಗೆ ಖಂಡಿತ ಗೊತ್ತಿರಲಿಕ್ಕಿಲ್ಲ. ಪಾಕಿಸ್ಥಾನದ ಬಾಲಕಿ ಮಲಾಲಾ ಯೂಸುಫ್‌ಝೈ ತಾಲಿಬಾನಿಗಳ ಗುಂಡೇಟು ತಿಂದು ಆಸ್ಪತ್ರೆ ಸೇರಿ ಬದುಕಿ ಬಂದ ಬಳಿಕವೂ ತನ್ನ ಧೈರ್ಯವನ್ನು ಕಳೆದುಕೊಂಡಿಲ್ಲ. ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಕಡ್ಡಾಯವಾಗಬೇಕು ಎಂಬ ತನ್ನ ಹಕ್ಕೊತ್ತಾಯದಿಂದ ಆಕೆ ಹಿಂದೆ ಸರಿದಿಲ್ಲ. ಆಕೆ ಹೇಳಿಕೇಳಿ ಮುಸ್ಲಿಂ ಬಾಲಕಿ. ಆಕೆಯಂತಹ ಮುಸ್ಲಿಂ ಯುವತಿಯಲ್ಲೇ ಇಂತಹ ಛಲ ಅಡಗಿರಬೇಕಾದರೆ ಇನ್ನಷ್ಟು ಮಲಾಲಾಗಳು, ಮಲಾಲಾಯಿ ಝೋಯಾಗಳು ಅದೇ ನೆಲದಿಂದ ಹುಟ್ಟಿ ಬರದೇ ಇದ್ದಾರೆಯೆ?

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Kochi: Swayamsevaks celebrated Onam in a different way; dedicated a new house Family of Martyr

Tue Sep 17 , 2013
Kochi Kerala Sept 17: RSS Kerala celebrated Onam in a different way this year. RSS remembered 23rd Martyrdom year of RSS activist Anil Kumar who was murdered by anti-national elements in 1991. Few Swayamsevaks now constructed and dedicated a new house to the family of Anil Kumar. Pranth Pracharak PR […]