ಹಿಂದುಗಳು ಭಯೋತ್ಪಾದಕಲ್ಲ. ದೇಶದ ಆರಾಧಕರು: ಭಾನುಪ್ರಕಾಶ್

Bangalore: ರಾಷ್ತ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕೇಂದ್ರ ಗೃಹ ಮಂತ್ರಿಗಳಾದ ಸುಶೀಲ್ ಕುಮಾರ್ ಶಿಂದೆಯವರ ಹೇಳಿಕೆಯನ್ನು ಖಂಡಿಸಿ ಬೃಹತ್ತ್‌ ಪ್ರತಿಭಟೆನೆಯು, ಕೋರಮಂಗಲದ ಫೋರಂ ಮಾಲ್ ಬಳಿ ನಡೆಯಿತು.

Bangalore: Protest against Home Minister Shinde at FORUM Mall, Koramangala.
Bangalore: Protest against Home Minister Shinde at FORUM Mall, Koramangala.

ಕರ್ನಾಟಕ ರಾಜ್ಯದ ಎಂ ಎಲ್ ಸಿ   ಭಾನುಪ್ರಕಾಶ್ ರವರು ಮಾತನಾಡಿ ಗೃಹ ಮಂತ್ರಿಗಳು ದೇಶದಲ್ಲಿ ಬ್ರಿಟಷರಂತೆ ಪ್ರಜೆಗಳ ಮಧ್ಯದಲ್ಲಿ ಬಿರುಕು ಮೂಡಿಸುವ ಯತ್ನವನ್ನು ಮಾಡುತ್ತಿದ್ದಾರೆ. ಯಾವ ದೇವಸ್ಥಾನಗಳಲ್ಲಾಗಲಿ, ಮಠ ಮಂದಿರಗಳಲ್ಲಾಗಲಿ ಶಸ್ತ್ರಾಸ್ತ್ರಗಳ ಅಥವಾ ಭಯೋತ್ಪಾದನೆಯ ತರಬೇತಿಯನ್ನು ಕೊಡುತ್ತಿಲ್ಲ, ಅವೆಲ್ಲವು ಮಸೀದಿಗಳು ಹಾಗು ಇತರೆ ಜಾಗಗಳ್ಳಿ ನಡೆಯುವ ಕೆಲಸ, ಇದನ್ನು ಅವರು ಅರಿತು ಸರಿಯಾಗಿ ತನಿಖೆ ಮಡಲು ಮುಂದಾಗಬೇಕು. ಹಿಂದುಗಳಿಗೆ ಇರುವುದು ಒಂದೇ ದೇಶ ಅನ್ಯ ಧರ್ಮೀಯರಿಗೆ ಹಲವು ದೇಶಗಳು ಲಭ್ಯ ಹಾಗಾಗಿ ಹಿಂದುಗಳು ಹೋಗುವುದಾದರು ಯೆಲ್ಲಿಗೆ? ಎಂದು ಪ್ರಶ್ನಿಸಿದರು.

ಭಾರತದಲ್ಲಿ ಅನೇಕ ವೀರ ಪುರುಷರು ಜನ್ಮತಾಳಿ ದೇಶದ ರಕ್ಷಣೆ, ಸಂಸ್ಕೃತಿಯ ಪಾಲನೆ ಹಾಗು ಧರ್ಮದ ಅನುಸಾರ್ವಾಗಿ ದೇಶವನ್ನು ಉಳಿಸಿ ಬೆಳೆಸಿದ್ದಾರೆ, ಇಂತಹ ನಾಡಲ್ಲಿ ಸುಶೀಲ್ ಕುಮಾರ್ ಶಿಂದೆ ಹಾಗು ಸೋನಿಯಾಗಾಂಧಿಯಂತಹವರ ಸಾರಥ್ಯದ ಕೇಂದ್ರದ ಕಾಂಗ್ರೆಸ್ಸ್ ಸರಕಾರವು ಅತ್ಯಂತ ನಾಚೀಗೇಡಿನ ಕಾರ್ಯದಲ್ಲಿ ತೊಡಗಿದೆ. ಶಿಂದೆಯವರು ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದು ಎಲ್ಲಾ ಹಿಂದುಗಳಲ್ಲಿ ಕ್ಷಮೆಯಾಚಿಸಬೇಕೆಂದು ಭಾನುಪ್ರಕಾಶ್ ರವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದರು.

ಈ ಸಂದರ್ಭದಲ್ಲಿ ಶಿಂದೆಯವರ ಪ್ರತಿಕೃತಿಯನ್ನು ದಹನ ಮಾಡಿ ತಮ್ಮ ಆಕ್ರೋಶವನ್ನು ನೆರೆದಿದ್ದ ಎಲ್ಲಾ ಹಿಂದುಗಳು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ  ಜನಾರ್ಧನ್, ಅರ್.ಎಸ್.ಎಸ್‌ನ ಬೆಂಗಳೂರು ಮಹಾನಗರದ ಅಧಿಕಾರಿಗಳು,  ಸುಧಾಕರ್, ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು,  ಮಹೇಶ್ ಬಾಬು ಹಾಗು ಶ್ರೀ ಜಿ.ಮಂಜುನಾಥ್ ಬಿಬಿಎಂಪಿ ಸದಸ್ಯರು ಉಪಸ್ಥಿತರಿದ್ದರು.

Report by: Pruthvi Kapoor

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Congress MLA inaugurates RSS organised Event

Fri Jan 25 , 2013
Bangalore : Congress MLA of Bangalore, Dinesh Gundurao, Inaugurated Swamy Vivekananda 150th Birth celebrations at Ckikkapet, Bangalore recently on January 12. RSS Pranth Karyavah N Tippeswamy, Swamiji of Beli Mutt, Local BJP MP PC Mohan, local BJP corporator Shivakumar and several other leaders were present. The programme was organisesd by […]