ಸೆಪ್ಟೆಂಬರ್ 24 ರಂದು ಹರ್ಯಾಣಕ್ಕೆ ಕಾಲಿರಿಸಲಿರುವ ಭಾರತ ಪರಿಕ್ರಮ ಯಾತ್ರೆ

 ಸೆಪ್ಟೆಂಬರ್ 19, ಜುನ್‌ಜುನ್ ಜಿಲ್ಲೆ ರಾಜಸ್ಥಾನ:   ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಚಾರಕರಾದ ಸೀತಾರಾಮ್ ಕೆದಿಲಾಯ ಅವರ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು ಸೆಪ್ಟೆಂಬರ್ 24ರಂದು ಹರ್ಯಾಣಕ್ಕೆ ಕಾಲಿರಿಸಲಿದೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 26ರ ತನಕ 33 ದಿನಗಳ ಕಾಲ ಯಾತ್ರೆಯು ಹರ್ಯಾಣದ ವಿವಿಧ ಗ್ರಾಮಗಳಿಗೆ ಭೇಟಿ  ನೀಡಲಿದೆ. ಅಕ್ಟೋಬರ್ 27ರಂದು ಯಾತ್ರೆಯು ಪಂಜಾಬ್ ರಾಜ್ಯವನ್ನು ಪ್ರವೇಶಿಸಲಿದೆ.

RSS Chief Mohan Bhagwat meets Sitaram Kedilaya Sept-8-2013-Rajasthan
RSS Chief Mohan Bhagwat meets Sitaram Kedilaya Sept-8-2013-Rajasthan

ಜುಲೈ 3ರಂದು ರಾಜಸ್ಥಾನವನ್ನು ಪ್ರವೇಶಿಸಿದ ಯಾತ್ರೆಯು ಸೆಪ್ಟೆಂಬರ್ 19ರಂದು ರಾಜಸ್ಥಾನದ ಜುನ್‌ಜುನ್ ಜಿಲ್ಲೆಯ ಚನಾನ್ ಗ್ರಾಮವನ್ನು ತಲುಪುವ ಮೂಲಕ ಯಶಸ್ವಿಯಾಗಿ 407 ದಿನಗಳನ್ನು ಪೂರೈಸಿದೆ.  ಯಾತ್ರೆಯ ನೇತೃತ್ವ ವಹಿಸಿದ ಸೀತಾರಾಮ ಕೆದಿಲಾಯರು ಸೆಪ್ಟೆಂಬರ್ 24ರವರೆಗೆ ರಾಜಸ್ಥಾನದ ವಿವಿಧ ಗ್ರಾಮಗಳಿಗೆ ಬೇಟಿಕೊಟ್ಟು ಅಲ್ಲಿನ ಗ್ರಾಮವಾಸಿಗಳೊಂದಿಗೆ ಮುಕ್ತ ಚರ್ಚೆ ನಡೆಸಲಿದ್ದಾರೆ.

ಆರೆಸ್ಸೆಸ್‌ನ ಸರಸಂಘಚಾಲಕ ಮೋಹನ್ ಭಾಗವತ್ ಅವರು ಸೆಪ್ಟೆಂಬರ್ 8 ರಂದು ರಾಜಸ್ಥಾನದ ಸೀಕರ್ ಜಿಲ್ಲೆಯಲ್ಲಿ ಸೀತಾರಾಮ ಕೆದಿಲಾಯ ಅವರನ್ನು ಭೇಟಿ  ಮಾಡಿದರು. ಜಲ, ಮಣ್ಣು, ಗೋ ಸಂಪತ್ತಿನ ಸಂರಕ್ಷಣೆಯ ಗ್ರಾಮೀಣ ಜೀವನದ ಸೊಗಡಿನ ಅಗತ್ಯತೆಯನ್ನು ಸಾರುವ ಉದ್ದೇಶದ ಕೆದಿಲಾಯರ ಭಾರತ ಪರಿಕ್ರಮ ಯಾತ್ರೆಯು ಆರೆಸ್ಸೆಸ್ ಚಿಂತನೆಯೇ ಆಗಿದೆ ಎಂದು ಮೋಹನ್ ಭಾಗವತ್ ಒತ್ತಿ ಹೇಳಿತ್ತಾ ಕೆದಿಲಾಯರ ಯಾತ್ರೆಗೆ ಶುಭ ಹಾರೈಸಿದರು. ಮೋಹನ್ ಭಾಗವತ್‌ರು ಕೆದಿಲಾಯರನ್ನು ಭೇಟಿಯಾಗಿದ್ದು ಇದು 2ನೇ ಬಾರಿ. ಈ ಹಿಂದೆ 2013ರ ಜನವರಿಯಲ್ಲಿ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಭೇಟಿಯಾಗಿದ್ದರು.

ಆರೆಸ್ಸೆಸ್‌ನ ಮಾಜಿ ಸೇವಾ ಪ್ರಮುಖರಾಗಿದ್ದ 66 ವರ್ಷದ ಸೀತಾರಾಮ ಕೆದಿಲಾಯರ ನೇತೃತ್ವದಲ್ಲಿ 2012ರ ಆಗಸ್ಟ್ 9ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ ಪರಿಕ್ರಮ ಯಾತ್ರೆಯು ಭಾರತದ ಗ್ರಾಮೀಣ ಜೀವನದ ಅಗತ್ಯತೆಯನ್ನು ಸಾರುತ್ತಿದೆ. 407ದಿನಗಳನ್ನು ಪೂರೈಸಿರುವ ಈ ಯಾತ್ರೆಯು ಈಗಾಗಲೇ ಸುಮಾರು 4300 ಕಿ.ಮೀ. ದೂರವನ್ನು ಕ್ರಮಿಸಿದೆ.

 ಯಾತ್ರೆಯ ವಿವರ:

  ದಿನಾಂಕ           ಗ್ರಾಮ             ತಾಲೂಕು        ಜಿಲ್ಲೆ    

ಸೆಪ್ಟೆಂಬರ್  19     ಚನಾನ್              ಚೈದಾವ       ಜುನ್‌ಜುನಾ

ಸೆಪ್ಟೆಂಬರ್ 20     ಜಾಸರಾಪುರ          ಖೇತಾಡಿ       ಜುನ್‌ಜುನಾ

ಸೆಪ್ಟೆಂಬರ್ 21     ನಾನುವಾಲೈ  ಬಾವಾಡಿ    ಖೇತಾಡಿ       ಜುನ್‌ಜುನಾ

ಸೆಪ್ಟೆಂಬರ್ 22     ಫೇತ್‌ಪುರ            ಖೇತಾಡಿ       ಜುನ್‌ಜುನಾ

ಸೆಪ್ಟೆಂಬರ್ 23     ಗೋರೇರ್            ಖೇತಾಡಿ       ಜುನ್‌ಜುನಾ

ಸೆಪ್ಟೆಂಬರ್  24     ನಾನ್ಗಾಲ್ ಕಟ್ಟೆ         ಹರ್ಯಾಣಕ್ಕೆ ಪ್ರವೇಶ

ಅಕ್ಟೋಬರ್ 26    ಫತೇಪುರ ಜಂಟುವಳ್ಳಿ    ಹರ್ಯಾಣದಿಂದ ನಿರ್ಗಮನ

ಅಕ್ಟೋಬರ್  27    ಯಾತ್ರೆ ಪಂಜಾಬ್ ಪ್ರವೇಶ

For more details click this link:

http://samvada.org/2013/news/day-407-bharat-parikrama-yatra-to-enter-haryana-on-sept-24-to-travel-for-33days-till-oct-26/

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

3 SDPI activists arrested on charges of attacking RSS workers

Thu Sep 19 , 2013
KOZHIKODE, September 19, 2013: The Nallalam police have arrested three activists of the Social Democratic Party of India (SDPI) in connection with the violence at Olavanna on the outskirts of the city on Monday night. The police said that Shameen Saad, 19; C. Saifulla Ali, 31, and P. Rahees P., 28, were […]