Doddabalapur Jan 12, 2013: ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ 150ನೇ ವಷರ್ಾಚರಣೆ ಸಮಿತಿಯು ಏರ್ಪಡಿಸಿದ್ದ ಅಭಿಯಾನದ ಉದ್ಘಾಟನೆಯನ್ನು ನಗರದ ಪೋಲಿಸ್ ಆರಕ್ಷಕ ನಿರೀಕ್ಷಕ ಶ್ರೀ ಶಿವಾರೆಡ್ಡಿ, ವಿವೇಕಾನಂದ ವೃತ್ತದಲ್ಲಿನ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಶ್ರೀ ಮುನಿಯಪ್ಪ, ಜಿಲ್ಲಾ ಪ್ರಚಾರಕ ಶ್ರೀ ಬಸರಾಜ್ ಸೇರಿದಂತೆ ವಷರ್ಾಚರಣೆ ಸಮಿತಿಯ ಸದಸ್ಯರುಗಳು, ಪರಿವಾರದ ಕಾರ್ಯಕರ್ತರು ಹಾಗು ವಿವೇಕಾನಂದ ಗೆಳೆಯರ ಬಳಗದ ಸದಸ್ಯರುಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನ ಹಾಜರಿದ್ದರು. ಯುವಜನ ಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾಥಾದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾಥರ್ಿಗಳೂ ಕೂಡ ವಿವೇಕಾನಂದ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ನಂತರ ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ಶಿಕ್ಷಕರ ಸಮಾವೇಶವನ್ನು ಉದ್ದೇಶಿಸಿ ಧರ್ಮ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾದ ಶ್ರೀ ಮುನಿಯಪ್ಪನವರು ಮಾತನಾಡಿದರು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಸವಾಲುಗಳು ಹಾಗು ಶಿಕ್ಷಣ ವ್ಯವಸ್ಥೆಯ ಕುರಿತಂತೆ ವಿವೇಕಾನಂದರ ಚಿಂತನೆಗಳ ಬಗ್ಗೆ ಸಮಾವೇಶದಲ್ಲಿ ಅವರು ಮಾತನಾಡಿದರು. 120 ಶಿಕ್ಷಕರು ಈ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಮಿತಿಯ ಸದಸ್ಯರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಹಲವು ಶಿಕ್ಷಕರು, ಮುನಿಯಪ್ಪನವರ ಉಪನ್ಯಾಸದಿಂದಾಗಿ ಶಿಕ್ಷಣದ ಬಗೆಗಿನ ನಮ್ಮ ಇದುವರೆಗಿನ ಅನಿಸಿಕೆಗಳೇ ಬದಲಾಯಿತು, ಮಕ್ಕಳಿಗೆ ನಾವು ಕಲಿಸಬೇಕಾದ ವಿಷಯಗಳ ಬಗ್ಗೆ ನಮ್ಮಲ್ಲಿ ಹೊಸ ಕಲ್ಪನೆಯೊಂದು ಇದರಿಂದಾಗಿ ಮೂಡಿದೆ, ಅದನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ವ್ಯಕ್ತಪಡಿಸಿದರು