ಗೋವಿಂದರಾವ್ ಗಾಡ್ಗೀಳ ನಿಧನ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು, ನಗರದ ಗಣ್ಯ ಆಯುರ್ವೇದ ಔಷಧಿ ಉತ್ಪಾದಕರಾದ ಗೋವಿಂದರಾವ್ ಗಾಡ್ಗೀಳ ಬುಧವಾರ  ಮುಂಜಾನೆ ಸ್ವರ್ಗಸ್ಥರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಶ್ರೀಯುತರು ಪತ್ನಿ, ಪುತ್ರ, ಪುತ್ರಿ ಅಳಿಯಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಾಲ್ಯದಿಂದಲೂ ಸಂಘದ ಗರಡಿಯಲ್ಲಿಯೇ ಬೆಳೆದ ಗೋವಿಂದರಾವ್ ಗಾಡ್ಗೀಳ ಱಅಣ್ಣಾಱಎಂದೇ ಚಿರಪರಿಚಿತರು. ಬೆಳಗಾವಿಯ ಸಂಘದ ಕಾರ್ಯದ ಬೆಳವಣಿಗೆಯಲ್ಲಿ ಅಪಾರ ಕೊಡುಗೆಯನ್ನು ನೀಡಿರುವ ಅಣ್ಣಾ ಗಾಡ್ಗೀಳ ತುರ್ತು ಪರಿಸ್ಥಿಯಲ್ಲಿ ಮಾಡಿದ ಕಾರ್ಯ ಸದಾ ಸ್ಮರಣೀಯ.

ಇಂದು ನಡೆದ ಅಂತ್ಯಸಂಸ್ಕಾರದ ಕಾರ್ಯಕ್ರಮದಲ್ಲಿ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕರಾದ ಶಂಕರಾನಂದ, ಪ್ರಾಂತ ಸಹಕಾರ್ಯವಾಹ ಶ್ರೀಧರ ನಾಡಗೀರ್, ಸಹ ಪ್ರಾಂತ ಬೌದ್ಧಿಕ ಪ್ರಮುಖ ಡಾ.ರವೀಂದ್ರ, ವಿಭಾಗ ಪ್ರಚಾರಕ ನರೇಂದ್ರ, ವಿಭಾಗ ಕಾರ್ಯವಾಹ ರಾಘವೇಂದ್ರ ಕಾಗವಾಡ, ನಗರ ಸಂಘಚಾಲಕ ಬಾಳಣ್ಣಾ ಕಗ್ಗಣಗಿ, ಮಾಜಿ ಶಾಸಕ ಅಭಯ ಪಾಟೀಲ್, ಬಿಜೆಪಿ  ನಗರಾಧ್ಯಕ್ಷ ಎಂ.ಬಿ.ಜಿರಲಿ, ಸೇರಿದಂತೆ ನಗರದ ಗಣ್ಯರು, ವ್ಯಾಪರಸ್ಥರು ಉಪಸ್ಥಿತರಿದ್ದು ಮೃತರಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು.

ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಶಾರೀರಿಕ ಪ್ರಮುಖ್ ಸುಧೀರ ಗಾಡ್ಗೀಳ  ಗೋವಿಂದ ಗಾಡ್ಗೀಳ ಇವರ ಪುತ್ರರಾಗಿದ್ದಾರೆ.