ಕೊಚ್ಚಿ ನ ೨೮: ಕಂಚೀ ಶ್ರೀಗಳ ವಿರುದ್ಧ ನಡೆದ ಷಡ್ಯಂತ್ರದ ಹಿಂದಿರುವ ಎಲ್ಲ ಶಕ್ತಿಗಳು ಹಾಗೂ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಕಟ್ಟುನಿಟ್ಟಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಚಿಂತಕ ಮತ್ತು ಕೇರಳದ ಭಾರತೀಯ ವಿಚಾರ ಕೇಂದ್ರದ ನಿರ್ದೇಶಕ ಶ್ರೀ ಪಿ ಪರಮೇಶ್ವರನ್‌ರವರು ಆಗ್ರಹಸಿದ್ದಾರೆ.

Kanchi Sankaracharya Sri Jayendra  Saraswathi Swamiji

Kanchi Sankaracharya Sri Jayendra Saraswathi Swamiji

’ಕಂಚೀ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತೀ ಮತ್ತು ಇತರರನ್ನು ಪಿತೂರಿ ಮತ್ತು ಕೊಲೆಯ ಆರೋಪದ ಪ್ರಕರಣದಿಂದ ನ್ಯಾಯಾಲಯವು ಮುಕ್ತಗೊಳಿಸಿದೆ. ಇದು ಮಠ ಮತ್ತು ಭಕ್ತರಿಗಷ್ಟೇ ಅಲ್ಲದೇ ಇಡೀ ಹಿಂದೂ ಸಮಾಜಕ್ಕೆ ಬಹುದೊಡ್ಡ ಸಮಾಧಾನದ ವಿಷಯವಾಗಿದೆ. ಆದರೆ ಅದು ಒಂದು ಭಾಗವಷ್ಟೇ. ಒಂಭತ್ತು ವರ್ಷಗಳಿಗೂ ಅಧಿಕ ಕಾಲಹರಣ ಮಾಡಿದ ಇಡೀ ಪ್ರಕರಣದ ಅವಧಿಯು ಮಠದ ಭಕ್ತರಿಗೆ ಮತ್ತು ಇತಿಹಾಸ ಕಂಡ ಶ್ರೇಷ್ಠ ಆಧ್ಯಾತ್ಮಿಕ ವ್ಯಕ್ತಿತ್ವಗಳಿಂದ ಸ್ಥಾಪಿತ ನಿಷ್ಕಳಂಕ ಪರಂಪರೆಯಲ್ಲಿ ಶ್ರದ್ಧೆಯಿಟ್ಟ ಲಕ್ಷಾಂತರ ಜನರಿಗೆ ಅತೀ ಸಂಕಟದ ಸಮಯವಾಗಿತ್ತು.’ ಎಂದು ಅವರು ನುಡಿದರು.

P Parameswaran

P Parameswaran

’ಪೂಜನೀಯ ಸ್ವಾಮಿಗಳು ಮತ್ತು ಶತಮಾನಗಳ ಪರಂಪರೆಯುಳ್ಳ ಕಂಚಿಯ ಶಂಕರ ಮಠದ ವಿರುದ್ಧ ಒಳಸಂಚನ್ನು ರೂಪಿಸಿದವರು ಯಾರು ಮತ್ತು ಅವರ ಉದ್ಧೇಶಗಳೇನು? ಈ ವಿಷಯದ ತನಿಖೆಯಾಗಬೇಕು. ಇದರ ಹಿಂದಿರುವವರು ಯಾರೇ ಆಗಿರಲಿ ಹಾಗೂ ಅವರು ಎಷ್ಟೇ ಶಕ್ತಿವಂತರಾಗಿರಲಿ ಮತ್ತು ಯಾವ ಹಿರಿಯ ಸ್ಥಾನದಲ್ಲೇ ಇರಲಿ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಭವಿಷ್ಯದಲ್ಲಿ ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಪೂಜನೀಯ ಆಚಾರ್ಯರುಗಳ ವಿರುದ್ಧ ಮಿಥ್ಯಾರೋಪ ಮಾಡಲು ಮತ್ತು ಅಪಖ್ಯಾತಿಗೊಳಿಸಲು ಯಾರೂ ಧೈರ್ಯತೋರದ