ಕನಿಯಾಲ: ಉತ್ತರಾಖಂಡ ಪ್ರವಾಹದಿಂದ ಮಡಿದವರಿಗೆ ಶ್ರದ್ಧಾಂಜಲಿ ಹಾಗೂ ಪರಿಹಾರ ನಿಧಿ

ಬಾಯಾರು(ಮಂಜೇಶ್ವರ ತಾಲೂಕು) July-7:  ಉತ್ತರಾಖಂಡ ಗಂಗಾ ಪ್ರವಾಹದಿಂದ ಮಡಿದವರಿಗೆ ಶ್ರದ್ಧಾಂಜಲಿ ಹಾಗೂ ಪರಿಹಾರ ನಿಧಿ ಸಮರ್ಪಣಾ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಬಾಯಾರು ಮಂಡಲದ ಕನಿಯಾಲದಲ್ಲಿ ನಡೆಯಿತು.   ಈ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾ ಪ್ರಮುಖ್ ನಟರಾಜ್ ರಾವ್  ಅವರು   ಉಪಸ್ಥಿತರಿದ್ದರು. ಪ್ರತಿಯೊಬ್ಬ ಹಿಂದು ಜೀವನದಲ್ಲಿ ಒಮ್ಮೆಯಾದರೂ   ಚತುರ್ಧಾಮಗಳಿಗೆ ಭೇಟಿ ನೀಡಬೇಕು ಎಂಬ  ಆಸೆ ಸಹಜವಾಗಿ ಹೊಂದಿರುತ್ತಾನೆ, ಪ್ರತಿವರ್ಷದಂತೆ ಈ ವರ್ಷವೂ ಅಸಂಖ್ಯಾತ ಭಕ್ತರು ಈ ಸ್ಥಳಗಳಿಗೆ ಭೇಟಿ  ನೀಡಿದ್ದಾರೆ, ಆದರೆ ಈ ಬಾರಿ ನಡೆದ ಭೀಕರ ಪ್ರವಾಹದಿಂದ ಸಹಸ್ರಾರು ಜನರು ತಮ್ಮ ಪ್ರಾಣ ಕಳೆದುಕೊದಿದ್ದಾರೆ,ಉಳಿದವರು ಒಂದು ಹೊತ್ತಿನ ಊಟಕ್ಕಾಗಿ   ಪರದಾಡುವ ಸ್ಥಿತಿ ಬಂದಿದೆ. ಪ್ರವಾಹ ಪೀಡಿತರ  ರಕ್ಷಣಾ ಕಾರ್ಯದಲ್ಲಿ ಭಾರತೀಯ ಸೇನೆಯ ಯೋಧರು ಹಾಗೂ ನಮ್ಮ ಸ್ವಯಂಸೇವಕ ಬಂಧುಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ.  ಆದರೆ ನಮಗೆ  ರಕ್ಷಣಾ ಕಾರ್ಯದಲ್ಲಿ ನೇರವಾಗಿ  ಪಾಲ್ಗೊಳ್ಳಲು ಸಾಧ್ಯವಿಲ್ಲ   ಆದರೆ ನಮ್ಮ ಕೈಲಾದ  ಸಹಾಯ ಮಾಡಲೇ ಬೇಕು ಎಂದು ತಿಳಿಸಿದರು
Sainikaru
 ಉತ್ತರಾಖಂಡದ ಪ್ರವಾಹದಲ್ಲಿ ಉಳಿದವರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು.ಅವರಿಗಾಗಿ ನಮ್ಮ ಕರವನ್ನು ಜೋಡಿಸೋಣ ಎಂದರು.  ಕಾರ್ಯಕ್ರಮದ ಆರಂಭದಲ್ಲಿ  ಚಿತ್ರ , ಹಾಗೂ ದೃಶ್ಯ ಪ್ರದರ್ಶನ ನಡೆಯಿತು. ಇದರಲ್ಲಿ   ಪ್ರವಾಹಕ್ಕೆ ಮೊದಲಿನ ಸಂದರ್ಭಗಳ ಚಿತ್ರ, ಪ್ರವಾಹ ನಂತರದ ಸ್ಥಿತಿ , ಸೇನೆಯ ರಕ್ಷಣಾ ಕಾರ್ಯ, ಹಾಗೂ   ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ರಕ್ಷಣಾ ಕಾರ್ಯಗಳನ್ನು ಪ್ರದರ್ಶಿಸಲಾಯಿತು. ನಂತರ ಮೃತರಾದ ಎಲ್ಲ ಬಂಧುಗಳಿಗೆ ಹಾಗೂ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ  ಸುಮಾರು 70  ಮಂದಿ ಸಜ್ಜನ ಬಂಧುಗಳು  ಹಾಗೂ ಮಾತಾ ಭಗಿನಿಯರು ನಿಧಿ ಸಮರ್ಪಣೆ ಮಾಡಿದರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪತ್ರಿಕೆಗಳು ಸಮಾಜದಲ್ಲಿ ನೈತಿಕತೆ ಎತ್ತಿ ಹಿಡಿಯಬೇಕು : ಮಂಗೇಶ್ ಭೆಂಢೇ

Mon Jul 8 , 2013
Bangalore July 7: ರಾಷ್ಟ್ರನಿರ್ಮಾಣದಲ್ಲಿ ಮಹತ್ವದ  ಪಾತ್ರಹೊಂದಿರುವ ಪತ್ರಿಕೆಗಳು ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕಾದ ಅಗತ್ಯವಿದೆ ಎಂದು  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮಖ್ ಶ್ರೀ ಮಂಗೇಶ್ ಭೆಂಡೇ ಅವರು ಹೇಳಿದ್ದಾರೆ. ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪತ್ರಿಕೆಗಳಿಗೆ ಜನರ ಮನೋಭಾವಗಳನ್ನು ಬದಲಿಸಬಲ್ಲ ಶಕ್ತಿ ಇದೆ. ಸ್ವಾತಂತ್ರ್ಯ ಹೋರಾಟದಲ್ಲೂ ಪತ್ರಿಕೆಯ ಪಾತ್ರ ಮಹತ್ವದ್ದು. ತಿಲಕರ ’ಕೇಸರಿ’ […]