Malleshwaram Bangalore: ಫ಼ೆಬ್ರವರಿ 17ರ ಭಾನುವಾರದಂದು ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾವರಣೆ ಮತ್ತು ರಥಸಪ್ತಮಿ ಪ್ರಯುಕ್ತ ಮಲ್ಲೇಶ್ವರಂ 18ನೇ ಕ್ರಾಸಿನ ಮೈದಾನದಲ್ಲಿ ಸರ್ಕಲ್ ಮಾರಮ್ಮ ವತಿಯಿಂದ ’ಸೂರ್ಯ ಯಜ್ಞ ಮತ್ತು 108ಸೂರ್ಯ ನಮಸ್ಕಾರ’ದ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 5.15ಕ್ಕೆ ‘ಸೂರ್ಯ ಯಜ್ಞ’ ಪ್ರಾರಂಭವಾಯಿತು, ಪೂರ್ಣಾಹುತಿಯ ನಂತರ ಸಾಮೂಹಿಕ ಸೂರ್ಯನಮಸ್ಕಾರ ಮಾಡಲಾಯಿತು. ಸುಮಾರು ೨೬೦ಕ್ಕೂ ಹೆಚ್ಚಿನ ಜನರು ಭಾಗವಹಿಸಿದರು, ಅದರಲ್ಲಿ 10 ವರ್ಷದ ಬಾಲಕರಿಂದ ಮೊದಲ್ಗೊಂಡು 68 ವರ್ಷದವರೆಗಿನ ಹಿರಿಯರೂ ಇದ್ದರು,ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದರು. ಭಾಗವಹಿಸಿದವರಲ್ಲಿ ಶೇಖಡಾ ೮೦ರಷ್ಟು ಜನ

೧೦೮ ಸೂರ್ಯನಮಸ್ಕಾರಗಳನ್ನೂ ಮಾಡಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯ ಮೇಲೆ ಸರ್ಕಲ್ ಮಾರಮ್ಮ ದೇವಸ್ಥಾನದ ಧರ್ಮದರ್ಶಿಗಳು ಆದ ಶ್ರೀ ಎನ್.ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಕ್ರೀಡಾ ಪಟು ಶ್ರೀ ಅರ್ಜುನ ದೇವಯ್ಯ ಅವರು ಇದ್ದರು.

Malleshwaram: Surya Namaskar perfomed on Ratha Saptami

Malleshwaram: Surya Namaskar perfomed on Ratha Saptami

ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ರಾಜ್ಯ ಸಮಿತಿಯ ಸದ್ಸ್ಯರೂ ಆಗಿರುವ ಶ್ರೀ ಅರ್ಜುನ ದೇವಯ್ಯ ಅವರು ವರ್ಷಾಚರಣೆಯ ಪಂಚಮುಖಿ ಕಾರ್ಯಕ್ರಮಗಳನ್ನು ವಿವರಿಸಿದರು. ಮಲ್ಲೇಶ್ವರಂ ಭಾಗದ ಸಹಕಾರ್ಯವಾಹರಾದ ಶ್ರೀ ಪ್ರಮೋದ್ ಅವರು ರಥಸಪ್ತಮಿ ಮತ್ತು ಸೂರ್ಯನಮಸ್ಕಾರದ ಮಹತ್ತ್ವ ತಿಳಿಸಿಕೊಟ್ಟರು.

OLYMPUS DIGITAL CAMERA

The Coloured Sun!

The Coloured Sun!