ಮಂಗಳೂರು Sept 9 : ಸಂಘನಿಕೇತನದ 66ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 5 ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀರಾಮಕ್ಷೇತ್ರ, ನಿತ್ಯಾನಂದ ನಗರ, ಧರ್ಮಸ್ಥಳ ಇವರು ಉದ್ಘಾಟಿಸಿದರು. ವಂದೇಮಾತರಂನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಕೆ. ಪ್ರವೀಣ್ ಕುಮಾರ್, ಉಪಾಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೆ.ಪಿ. ಟೈಲರ್, ಕಾರ್ಯದರ್ಶಿಗಳಾದ ಎಂ. ಸತೀಶ್ ಪ್ರಭು, ಸಹಕಾರ್ಯದರ್ಶಿಗಳಾದ ಹರ್ಷವರ್ಧನ್, ಸುರೇಶ್, ಜೀವನ್ ರಾಜ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
Sri Ganesh Chaturthi Fsetival at SANGHANIKETAN, RSS Regional Headquarters, Mangalore

Sri Ganesh Chaturthi Fsetival at SANGHANIKETAN, RSS Regional Headquarters, Mangalore

ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಸಾರ್ವಜನಿಕ ಗಣೇಶೋತ್ಸವದ ಮಹತ್ವವನ್ನು ತಿಳಿಸಿದರು.

Photo and Report by Manju Neereshwalya