ವ್ಯೂಹಾತ್ಮಕ ವ್ಯಹವಾರ ಇಂದಿನ ಅಗತ್ಯ: ರಾಮ್ ಮಾಧಮ್

ಹುಬ್ಬಳ್ಳಿ: ಭಾರತದ ರಾಜಕೀಯ ನಾಯಕತ್ವ ರೋಮ್ಯಾಂಟಿಕ್ ಮೂಡ್ ನಿಂದ ಹೊರಬಂದು ತನ್ನ

ನೆರೆ ರಾಷ್ಟ್ರಗಳೊಂದಿಗೆ ವ್ಯೂಹಾತ್ಮಕವಾಗಿ ವ್ಯವಹರಿಸಿದಾಗ ಮಾತ್ರ ಚೀನಾ, ಪಾಕಿಸ್ಥಾನದಂತಹ ನೆರೆ ರಾಷ್ಟ್ರಗಳಿಂದ ಗೌರವದ ವ್ಯವಹಾರ ಅಪೇಕ್ಷಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖರಾದ ರಾಮ್ ಮಾಧವ್ ಅಭಿಪ್ರಾಯಪಟ್ಟರು.

RSS Akhil Bharatiya Sah Sampark pramukh Ram Madhav speaks at Hubli, March-03-2013

RSS Akhil Bharatiya Sah Sampark pramukh Ram Madhav speaks at Hubli, March-03-2013

ನಗರದಲ್ಲಿಂದು ಸೇವಾ ಭಾರತೀ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಸುರಕ್ಷತೆಗೆ ಚೀನಾದ ಸವಾಲುಗಳ ಕುರಿತಾಗಿ ಅವರು ಉಪನ್ಯಾಸ ನೀಡುತ್ತಿದ್ದರು.

ಜಗತ್ತಿನ ಎಲ್ಲ ದೇಶಗಳು ಕೂಡ ಬೇರೆ ದೇಶಗಳೊಂದಿಗೆ ವ್ಯವಹರಿಸುವಾಗ ವ್ಯೂಹಾತ್ಮಕವಾಗಿ ತನ್ನ ಹಿತಾಸಕ್ತಿಗಳನ್ನು ಬಲಿ ಕೊಡದಂತೆ ವ್ಯವಹಾರ ನಡೆಸುವುದು ವಾಡಿಕೆ. ಆದರೆ ಭಾರತದಲ್ಲಿ ನೇತ್ರತ್ವ ಮಾತ್ರ ಈ ವಿಷಯದಲ್ಲಿ ಸದಾ ಎಡವಿದೆ. ಕೇವಲ ಕೇಳಲು ಇಂಪಾದ ಘೋಷಣೆಗಳಿಂದಾಗಲಿ, ನಯ ವಿನಯದ ಮಾತುಗಳಿಂದಾಗಲಿ ನೆರೆ ದೇಶಗಳಿಂದ ನಮ್ಮ ಹಿತ ಬಯಸುವ ಮಾನಸಿಕತೆ ಸಲ್ಲದು. ಈ ಮಾನಸಿಕತೆಯಿಂದ ನಾವು ಹೊರ ಬರಬೇಕಿದೆ ಎಂದು ಅವರು ನುಡಿದರು.

DSC_6891

 

ನೆರೆ ರಾಷ್ಟ್ರ ಚೀನಾ ಟಿಬೇಟನ್ನು ಆಕ್ರಮಿಸುವ ಮುನ್ನ ನಮ್ಮ ನೆರೆ ರಾಷ್ಟ್ರವೇ ಆಗಿರಲಿಲ್ಲ. ಆದರೆ ನಮ್ಮ ನಿರ್ಲಕ್ಷ್ಯತನದಿಂದಾಗಿ ಚೀನಾ ಟಿಬೇಟನ್ನು ಆಕ್ರಮಿಸಿ ನಮ್ಮ ನೆರೆ ರಾಷ್ಟ್ರದ ಪಟ್ಟ ಪಡೆಯಿತು. ಇಷ್ಟಕ್ಕೆ ನಿಲ್ಲದ ಚೀನಾ ಇಂದು ಅನೇಕ ಪ್ರಕಾರದ ಉಪಕ್ರಮಗಳಿಂದ ಭಾರತವನ್ನು ಹಣಿಯಲು ಸಿದಟಛಿತೆ ನಡೆಸಿದೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರ, ಬರ್ಮಾದ ಕೋಕೋ ದ್ವೀಪ, ಶ್ರೀಲಂಕಾ ಅಲ್ಲದೇ ಇತ್ತೀಚಿಗೆ ಮಾಲ್ಡೀವ್ಸ ದೇಶದಲ್ಲಿ ಚೀನ ತನ್ನ ನೆಲೆಗಳನ್ನು ಸ್ಥಾಪಿಸುವ ಮೂಲಕ ಭಾರತವನ್ನು ಸುತ್ತುವರೆದಿದೆ. ತನ್ನ ಲ್ಲಿನ ತಂತ್ರಜ್ಞರ ಹಾಗೂ ತಂತ್ರeನ ಸಹಾಯದಿಂದ ಭಾರತವನ್ನು ಆರ್ಥಿಕವಾಗಿ ಹಾಗು ತಾಂತ್ರಿಕವಾಗಿ ಆಕ್ರಮಣ ನಡೆಸುತ್ತಿದೆ. ಭಾರತ ವಿರೋಧಿ ಶಕ್ತಿಗಳಿಗೆ ಸದಾ ಬೆಂಬಲಿಸುತ್ತ ಅವುಗಳಿಗೆ ಬೇಕಾಗುವ ಎಲ್ಲ ಸಹಕಾರ ನೀಡುತ್ತಿದೆ. ಭಾರತದಲ್ಲಿ ಚೀನಾದ ವೈಭವೀಕರಣಕ್ಕಾಗಿ ಭಾರತೀಯ ಚಿಂತಕರ ಪಡೆಯೊಂದನ್ನು ಸಿದ್ದಪಡಿಸುವಲ್ಲಿ ಯಶಸ್ವಿಯಾಗಿರುವ ಚೀನಾ ಅವರುಗಳ ಮೂಲಕ ಚೀನಾದ ಅಭಿವೃದಿಟಛಿಯ ಸುಂದರ ಕಥನಗಳನ್ನು ಪ್ರಚಾರ ಮಾಡುವ ಮೂಲಕ ತನ್ನ ಹಿರಿಮೆಯನ್ನು ಭಾರತದಲ್ಲಿ ಬೆಳೆಸುತ್ತಿದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಭಾರತವೂ ಕೂಡ ಚಿಂತನ ಮಾಡಬೇಕಾದ ಅವಶ್ಯಕತೆ ಇದೆ ಎಂದ ರಾಮ್ ಮಾಧವ್ ೧೯೬೨ರ ಸೋಲಿನಿಂದ ಪಾಠ ಕಲಿಯಬೇಕಿದೆ. ಈ ಘಟನೆಗೆ ೫ ದಶಕಗಳಾಗಿದ್ದರೂ ಕೂಡ ನಾವು ಇನ್ನು ಕೂಡ ಅದರ ಭ್ರಮಾ ಲೋಕದಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಇದರಿಂದ ಹೊರಬಂದಲ್ಲಿ ಮಾತ್ರ ನಾವು ಬೆಳೆಯುತ್ತಿರುವ ದೈತ್ಯ ರಾಷ್ಟ್ರ ಚೀನಾವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿವಿಬಿ ಇಂಜೀನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಶೋಕ ಶೆಟ್ಟರ್‌ವಹಿಸಿದ್ದರು. ಸೇವಾಭಾರತೀ ಟ್ರಸ್ಟ್ ಅಧ್ಯಕ್ಷ ಡಾ. ರಘು ಅಕ್ಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಮೃತ/ಹುಬ್ಬಳ್ಳಿ/ ೦೩-೦೩-೨೦೧೩