ಕಣ್ಣೂರು ಡಿ ೨: ಆರೆಸ್ಸೆಸ್ ಸ್ವಯಂಸೇವಕ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದ ಶ್ರೀ ವಿನೋದ ಕುಮಾರ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾದರು.

RSS Kerala Pranth Karyavah Gopalankutty Master paid his tributes to Vindo Kumar at Kannur

RSS Kerala Pranth Karyavah Gopalankutty Master paid his tributes to Vindo Kumar at Kannur

ನಡೆದಿದ್ದೇನು?

ವರ್ಷಗಳ ಹಿಂದೆ ಡಿಸೆಂಬರ್ 1, 1999ರಂದು ಹತ್ಯೆಗೀಡಾದ ಆರೆಸ್ಸೆಸ್ ಮುಖಂಡ ಜಯಕೃಷ್ಣನ್ ಮಾಸ್ಟರ್‌ರವರ ನೆನಪಿನಲ್ಲಿ ಸಂಘ ಪರಿವಾರದ ಸಂಘಟನೆಗಳು ಪ್ರತಿವರ್ಷ ಡಿಸೆಂಬರ 1ನ್ನು ಜಯಕೃಷ್ಣನ್ ಮಾಸ್ಟರ್ ಬಲಿದಾನ ದಿವಸ ಎಂದು ಆಚರಿಸುತ್ತಿವೆ. ಅದರ ನಿಮಿತ್ತ ಕಣ್ಣೂರಿನಲ್ಲಿ ಭಾನುವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಸ್ವಯಂಸೇವಕರ ವಾಹನವನ್ನು ತಡೆದ ಸಿಪಿಎಮ್‌ನ ಗೂಂಡಾಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಮತ್ತು ದೇಶೀ ಬಾಂಬುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಮೂಲಗಳು ವರದಿ ಮಾಡಿವೆ. . ಪಯ್ಯನೂರು ಶಾಖಾ ಕಾರ್ಯವಾಹರಾಗಿದ್ದ ವಿನೋದ ಪರಿಯಾರಮ್ ವೈದ್ಯಕೀಯ ಕಾಲೇಜಿನಲ್ಲಿ ಮೃತರಾದರು ಹಾಗೂ ಘಟನೆಯಲ್ಲಿ ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆರೆಸ್ಸೆಸ್ ಕೇರಳದ ಪ್ರಾಂತ ಕಾರ್ಯವಾಹ ಶ್ರೀ ಗೋಪಾಲನ್‌ಕುಟ್ಟಿ ಮಾಸ್ಟರರವರು ಕಣ್ಣೂನಲ್ಲಿರುವ ವಿನೋದರವರ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರು  ತೀವ್ರ ಸಂತಾಪ ಹಾಗೂ ಆಘಾತ ವ್ಯಕ್ತಪಡಿಸುತ್ತ, ಮತ್ತೆ ಮತ್ತೆ ಮುಂದುವರಿಯುತ್ತಿರುವ ಸಮಾಜ ವಿರೋಧಿ ಶಕ್ತಿಗಳ ಬರ್ಬರತೆಯನ್ನು ಬಲವಾಗಿ ಖಂಡಿಸಿದರು.

ಪಕ್ಷದ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿ ಘಟಕವು ಸೋiವಾರ ಮುಂಜಾನೆಯಿಂದ ಮುಸ್ಸಂಜೆಯವರಗೆ ಕಣ್ಣೂರು ಜಿಲ್ಲೆಯಲ್ಲಿ ಹರ್ತಾಳಕ್ಕೆ ಕರೆನೀಡಿತ್ತು.

Vionod Kumar

Vionod Kumar

1452467_447002812066955_469788478_n