Hubli June 12: A Sad news. RSS Bellary Vibhag Pracharak Sri Ganesh Kamath (44) died in a road accident near Javalagere Cross, near Sindhanoor of Raichur District this evening at 7.15pm.

Ganesh Kamath (RSS Pracharak)

Ganesh Kamath (RSS Pracharak)

 

Ganesh Kamath hails from Kundapura of Udupi district, serving as Pracharak since 18years. Ganesh Kamath was a dedicated-well known Social Worker, became RSS Pracharak in 1995.

Senior RSS Functionaries expressed their condolences on sad demise of Ganesh Kamath.

ಆರ್ ಎಸ್ ಎಸ್ ವಿಭಾಗ ಪ್ರಚಾರಕ್ ಗಣೇಶ ಸಾವು

ರಾಯಚೂರು: ಲಾರಿ ಹಾಗೂ ಕಾರ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರ್ ಎಸ್ ಎಸ್ ನ ಬಳ್ಳಾರಿ ವಿಭಾಗ ಪ್ರಚಾರಕ ಗಣೇಶ ಕಾಮತ್(44) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರರು ಗಾಯಗೊಂಡಿದ್ದಾರೆ.

Ganesh Kamath

ಸಿಂಧನೂರಿನಲ್ಲಿ ಸಂಘದ ಬೈಠಕ್ ಮುಗಿಸಿ ರಾಯಚೂರಿನತ್ತ ಕಾರಿನಲ್ಲಿ ಮರುಳುತ್ತಿದ್ದಾಗ ಸಿಂಧನೂರು ಸಮೀಪದ ಜವಳಗೇರಾ ಕ್ರಾಸ್ ನಿಂದ ಸುಮಾರು ಮೂರು ಕಿಮಿ ದೂರದಲ್ಲಿ ಈ ಅವಘಾತ ಸಂಭವಸಿದೆ.

ಲಾರಿಯೊಂದು ಇವರು ಪ್ರಯಾಣಿಸುತ್ತಿದ್ದ  ಕಾರಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಮುಗುಚಿಕೊಂಡು ಪಕ್ಕದ ಗುಂಡಿಗೆ ಬಿದ್ದಿದೆ. ಗಣೇಶ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ರಾಯಚೂರು ಜಿಲ್ಲಾ ಕಾರ್ಯವಾಹ ಸುಧೀರ ದೇಶಪಾಂಡೆ, ಸಂಪರ್ಕ ಪ್ರಮುಖ ರಾಘವೇಂದ್ರ ಹಾಗೂ ನಾಗರಾಜ್ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಧ್ಯಕ್ಕೆ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾಗಿದ್ದ ಗಣೇಶಜೀ ಕಳೆದ 18 ವರ್ಷಗಳಿಂದ ಸಂಘದ  ಪ್ರಚಾರಕರಾಗಿದ್ದರು. ಅನಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿ, ಕಳೆದ ಒಂದುವರೆ ವರ್ಷದಿಂದ ಬಳ್ಳಾರಿ ವಿಭಾಗದ ವಿಭಾಗ ಪ್ರಚಾರಕರಾಗಿದ್ದರು.