ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪದವಿ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ನಡೆಯಿತು. ವಿಭಾಗದ ೪೨ ಸ್ಥಾನಗಳಿಂದ ೯೧ ಮಂದಿ ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಗುರುವಾರ ಸಾರ್ವಜನಿಕ ಸಮಾರೋಪ ನಡೆಯಿತು.

ITC-Samarop-Karkala-Nov-2013 (1) ITC-Samarop-Karkala-Nov-2013 (2) ITC-Samarop-Karkala-Nov-2013 (3) ITC-Samarop-Karkala-Nov-2013 (4)

ಸಮಾರಂಭದಲ್ಲಿ ಬೌದಿಟಛಿಕ್ ನೀಡಿದ ಕುಟುಂಬ ಪ್ರಭೋಧನ್‌ನ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪರಮವೈಭವದ ನಮ್ಮ ಗುರಿ ಸಾಧಿತವಾಗಲು ಶಕ್ತಿಯ ವರ್ಧನೆಯಾಗಬೇಕಿದೆ. ಸಂಘಟನಾ ಶಕ್ತಿ ಜಗತ್ತಿಗೆ ದಿಕ್ಕು ತೋರಬೇಕು. ಸಂಘ ಶಕ್ತಿಯ ವರ್ಧನೆಗಾಗಿ ನಿಸ್ವಾರ್ಥ, ಸದ್ಗುಣಶೀಲ ವ್ಯಕ್ತಿಗಳ ಜೋಡಣೆ ಅನಿವಾರ್ಯ ಎಂದರು.

ಕಾರ್ಕಳದ ದಂತ ವೈದ್ಯ ಡಾ. ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ಕೆ.ವಿ. ಸತ್ಯನಾರಾಯಣ ಶಿಬಿರದ ವರದಿ ನೀಡಿದರು. ಶಿಬಿರ ಕಾರ್ಯವಾಹ ಪ್ರವೀಣ್ ಸರಳಾಯ ಸ್ವಾಗತಿಸಿದರು. ಬೌದಿಟಛಿಕ್ ಪ್ರಮುಖ್ ರಾಜೇಶ್ ನಿರೂಪಿಸಿದರು. ಶಿಕ್ಷಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು.