ಸಕಲೇಶಪುರ: ಕೇದಾರನಾಥ್ ನೆರೆ ಸಂತ್ರಸ್ಥರಿಗೆ VHP ಹಾಗೂ ಬಜರಂಗದಳದ ವತಿಯಿಂದ ನಿಧಿ ಸಂಗ್ರಹ

ಕೇದಾರನಾಥ್ ನೆರೆ ಸಂತ್ರಸ್ಥರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಿಧಿ ಸಂಗ್ರಹ

ಸಕಲೇಶಪುರ: ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಕೇದಾರನಾಥ್ ಹಾಗೂ ಬದರಿನಾಥ್‌ನಲ್ಲಿ ಜಲಪ್ರವಾಹದಿಂದ ಉಂಟಾದ ನೆರೆ ಸಂತ್ರಸ್ಥರಿಗೆ ನೆರವು ನೀಡುವ ಸಲುವಾಗಿ ಪಟ್ಟಣದಲ್ಲಿ ನಿಧಿಯನ್ನು ಸಂಗ್ರಹಿಸಲಾಯಿತು.

skp photo 1 (24-06-2013) vhp nidhi sangraha

ವ್ಯಾಪಕ ಮಳೆಯಿದ್ದರೂ ಸಹ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ಸಂತ್ರಸ್ಥರಿಗೆ ನಿಧಿಯನ್ನು ಸಂಗ್ರಹ ಮಾಡಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ ನಿಧಿ ಸಂಗ್ರಹ ಮಾಡಿದರು. ಮಧ್ಯಾಹ್ನ ೧೨ ಗಂಟೆಗೆ ಆರಂಭವಾದ ಕಾರ್ಯಕ್ರಮ ಸಂಜೆ ೪ ಗಂಟೆಗೆ ಮುಕ್ತಾಯಗೊಳಿಸಲಾಯಿತು. ಕೇವಲ ೪ಗಂಟೆಗಳಲ್ಲಿ ಅವಧಿಯಲ್ಲಿ ಕಾರ್ಯಕರ್ತರು ಉತ್ತಮ ಹಣವನ್ನು ಸಂಗ್ರಹಿಸಿರುತ್ತಾರೆ. ಇಡೀ ರಾಜ್ಯದಲ್ಲಿಯೇ ಸಂಘ ಪರಿವಾರದ ಪರ ಮೊಟ್ಟಮೊದಲನೇದಾಗಿ ನಿಧಿ ಸಂಗ್ರಹ ಕಾರ್ಯವನ್ನು ಸಕಲೇಶಪುರದ ವಿಹೆಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಮಾಡಿರುತ್ತಾರೆ. ವಿಹೆಚ್‌ಪಿಯ ಗೌರವ ಅಧ್ಯಕ್ಷರಾದ ಬಾಬುಜೀ ನಗರ್‌ವಾಲ್‌ರವರ ಸಮ್ಮುಖದಲ್ಲಿ ಸಂಗ್ರಹಿಸಿದ ಹಣದ ಲೆಕ್ಕವನ್ನು ಮಾಡಲಾಯಿತು. ಒಟ್ಟು ೩೦,೬೦೮ ರೂ ಸಂಗ್ರಹವಾಗಿದ್ದು ಇದನ್ನು ಆರ್.ಎಸ್.ಎಸ್‌ನ ಪರಿಹಾರ ಸಂತ್ರಸ್ಥರ ನಿಧಿಗೆ ನೀಡಲು ಯೋಜಿಸಲಾಗಿರುತ್ತದೆ. ಹಲವಾರು ಮಾತೆಯರು, ಸಮಾಜದ ದುರ್ಬಲ ವರ್ಗದವರು ಸಹ ಸ್ವಯಂಪ್ರೇರಿತರಾಗಿ ಬಂದು ನಿಧಿಯನ್ನು ಅರ್ಪಿಸಿರುತ್ತಾರೆ. ಇದೇ ಸಂಧರ್ಭದಲ್ಲಿ ನಿಧಿಯನ್ನು ಸಮರ್ಪಿಸಿದ ತಾಲ್ಲೂಕಿನ ನಾಗರಿಕರಿಗೆ ವಿಹೆಚ್‌ಪಿ ವಂದನೆಗಳನ್ನು ಅರ್ಪಿಸಿರುತ್ತದೆ.

skp photo 2 (24-06-2013) vhp nidhi sangraha

ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್, ವಿಹೆಚ್‌ಪಿ ತಾಲ್ಲೂಕು ಕಾರ್ಯದರ್ಶಿ ಸುಧೀರ್, ಬಜರಂಗದಳ ತಾಲ್ಲೂಕು ಸಂಚಾಲಕ ಧರ್ಮೇಶ್, ಬಜರಂಗದಳ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ವಿಹೆಚ್‌ಪಿ ತಾಲ್ಲೂಕು ಪ್ರಮುಖ್ ರಮೇಶ್ ಟೈಲ್ಸ್, ನರೇಂದ್ರ ಮೋದಿ ಯುವಕ ಸಂಘದ ಗಿರೀಶ್, ಸಂದೇಶ್, ರಮೇಶ್, ರಾಜಣ್ಣ,  ಪ್ರದೀಪ್, ಕಾರ್ತೀಕ್, ದೀಪಕ್ ಇನ್ನು ಮುಂತಾದವರು ಹಾಜರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Indian American Youngsters Trace the Footsteps of Swami Vivekananda in America

Tue Jun 25 , 2013
New York: June 25: More than a century after Swami Vivekananda traveled to America, youngsters of Indian origin, are hitting the trail and visiting places where the Swami visited, stayed and delivered lectures. The program named ‘Vivekananda Express’ has been facilitated by the Hindu Swayamsevak Sangh USA, to mark the 150th birth […]