ವಿವೇಕಾನಂದ 150: ‘ವಿವೇಕ ವಿಜಯ’ ತಾಳಮದ್ದಲೆ ಪ್ರಥಮ ಪ್ರದರ್ಶನ

ವಿವೇಕಾನಂದರ ಆಧ್ಯಾತ್ಮಿಕ ಸಂದೇಶ- ಪಶ್ಚಿಮದ ದಿಗ್ವಿಜಯ

ಮಂಗಳೂರು Feb-10: ವಿವೇಕಾನಂದರ 150 ನೇ ಜನ್ಮದಿನಾಚರಣೆಯ ವೈವಿಷ್ಟ್ಯಪೂರ್ಣ ಹಲವು ಕಾರ್ಯಕ್ರಮಗಳ ಸಾಲಿನಲ್ಲಿ ಮತ್ತೊಂದು ಸೇರ್ಪಡೆಯಾಗಿದೆ. ನಾರಾಯಣ ಭಟ್ ಕಂಜರ್ಪಣೆ ರಚಿಸಿದ ನೂತನ ಪ್ರಸಂಗ ‘ವಿವೇಕ ವಿಜಯ‘ದ ತಾಳಮದ್ದಲೆ ಪ್ರಥಮ ಪ್ರಯೋಗ ಭಾನುವಾರ ನಗರದ ಶಾರದಾ ಕಾಲೇಜಿನಲ್ಲಿ ನಡೆಯಿತು.

Kumble Sundara Rao at Viveka Vijaya Tala MADDALAE-Feb-10-2013
Kumble Sundara Rao at Viveka Vijaya Tala MADDALAE-Feb-10-2013

ವಿವೇಕಾನಂದರ ವಿಶ್ವಮಾನವ ಧರ್ಮದ ಆಧ್ಯಾತ್ಮಿಕ ಸಂದೇಶವನ್ನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸುವ ನೂತನ ಸಾಹಸ ಇದಾಗಿದೆ. ನಾರಾಯಣ ಭಟ್ ಕಂಜರ್ಪಣೆ ಅವರು ಬರೆದ ‘ವಿವೇಕ ವಿಜಯ’ ಸ್ವಾಮಿ ವಿವೇಕಾನಂದ ೧೫೦ ನೇ ವರ್ಷಾಚರಣೆ ಸಮಿತಿ ಮಂಗಳೂರು ಕಾರ್ಯಕ್ರಮ ಪ್ರಾಯೋಜಿಸುವ ಮೂಲಕ ಯಶಸ್ವಿಯಾಗಿದೆ.

ಕೊಂಚಾಡಿ ಲ್ಯಾಂಡ್‌ಲಿಂಕ್ಸ್‌ನ ಯುಗಾದಿ ಸಂಸ್ಕೃತಿ ಸಮಿತಿ ಕಲಾತಂಡ ಮತ್ತು ಹವ್ಯಾಸಿ ಕಲಾವಿದರುಗಳಾದ ಪ್ರಭಾಕರ ಜೋಷಿ, ನಾರಾಯಣ ಯಾಜಿ ಹಾಗೂ ಕುಂಬ್ಳೆ ಸುಂದರರಾವ್ ಮೂಲಕ ಪ್ರಥಮ ಪ್ರಯೋಗದೊಂದಿಗೆ ರಂಗಕ್ಕಿಳಿಯಿತು.

ಶ್ರೀಕೃಷ್ಣ ಭಟ್ ಸುಮಂಗುಳಿ (ಭಾಗವತಿಕೆ), ಸತ್ಯ ನೆಲ್ಲಿತ್ತಾಯ ಹಾಗೂ ಮಧುಸೂದನ ಅಲೆವೂರಾಯ (ಚಂಡೆ-ಮದ್ದಳೆ), ಪಾತ್ರವರ್ಗದಲ್ಲಿ ನಾರಾಯಣ ಯಾಜಿ (ರಾಮ-ಕೃಷ್ಣ ಪರಮಹಂಸ), ಶಾರಾದಾದೇವಿ (ರವಿಅಲೆವೂರಾಯ), ವಿವೇಕಾನಂದ (ಪ್ರಭಾಕರ ಜೋಷಿ, ಪಶ್ಚಿಮದ ದಿಗ್ವಿಜಯದಲ್ಲಿ ಕುಂಬ್ಳೆ ಸುಂದರರಾವ್) ಆಳಸಿಂಗ ಪೆರುಮಾಳ (ಗಿರೀಶ್ ಬಲ್ಲಾಳ್), ಬೆಸ್ತ (ವೇಣುಗೋಪಾಲ ಭಟ್) ನಾರಾಯಣ ಭಟ್ ಕಂಜರ್ಪಣೆ (ಗುರು) ತಮ್ಮ ಪಾತ್ರದಲ್ಲಿ ಯಶಸ್ವಿಯಾಗಿ ಪ್ರಸ್ತುತಪಡಿಸಿದರು.

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವಮಾನವ ಸಂದೇಶ ಸಾರಿದ ವೀರಸನ್ಯಾಸಿ ವಿವೇಕಾನಂದರ ವಿಜಯದ ಕಥೆಯೇ ಪ್ರಸಂಗದ ಹೈಲೈಟ್ಸ್. ಭಾರತೀಯ ಆಧ್ಯಾತ್ಮಿಕ ಹಿನ್ನೆಲೆಯ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಮುಖವನ್ನು ತೋರಿಸುವುದು ಕಾರ್ಯಕ್ರಮದ ಉದ್ದೇಶ. ಆ ಹಿನ್ನೆಲೆಯಲ್ಲಿ ತಾಳಮದ್ದಲೆಯ ಮೂಲಕ ವಿವೇಕಾನಂದರ 150 ನೇ ವರ್ಷದ ಸಂಭ್ರಮಾಚರಿಸಿಕೊಳ್ಳುವುದು. ಒಟ್ಟು ಅವರ ಆಧ್ಯಾತ್ಮ ಸಂದೇಶವನ್ನೇ ಪ್ರಸಂಗರಚನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಕಲಾ ಪ್ರದರ್ಶನಕ್ಕೆ ತಂಡ ಸಿದಟಛ್ದಿಗೊಂಡಿದೆ. ತೀರಾ ಹೊಸತನ ಹಾಗೂ ಸಾಮಾಜಿಕ ಪ್ರಸಂಗವಾಗಿರುವ ‘ ವಿವೇಕ ವಿಜಯ’ಕ್ಕೆ ತಾಳಮದ್ದಲೆಗೆ ಪೌರಾಣಿಕ ಚೌಕಟ್ಟು ಒದಗಿಸುವುದು ಕಠಿಣವಾಗಿತ್ತು. ಆದರೂ ಎಲ್ಲಾ ಕಲಾವಿದರು ಅವೆಲ್ಲ ಕ್ಲಿಷ್ಟತೆಗಳನ್ನು ನಿಭಾಯಿಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಮರ್ಥವಾಗಿಯೇ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮ ಆಯೋಜಿಸುವವರು ಸಮಿತಿಯ ನಾರಾಯಣ ಭಟ್ ಕಂಜರ್ಪಣೆ (ಮೊ.: 9845213722) ನ್ನು ಸಂಪರ್ಕಿಸಬಹುದು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

DOWNLOAD: Soorya Namaskar Poster

Tue Feb 12 , 2013
On February 18th, 2013, nation goes for a mega SOORYA NAMASKAR campaign, salutes to the eternal and universal source of energy, Surya Bhagwan. On Rathasaptami Day, Across India, the Soorya Namaskar Yajna will be practiced, crores of Citizens to participate. Be one among them. Inform your friends. DOWNLOAD THE POSTER: […]