RSS Mega Convention ‘YUVA SHAKTI SANGAMA’ at Hasan; ಹಾಸನದಲ್ಲಿ ‘ಯುವ ಶಕ್ತಿ ಸಂಗಮ’

Hasan January 27, 2013: RSS Hasan district unit organised special convention ‘YUVA SHAKTI SANGAMA’ to commemorate Swamy Vivekanana’s 150th Birth Anniversary this evening. More than 2000 RSS Swayamsevaks dressed in Sangh Uniform (Ganavesh) participated in the event. RSS Akhil Bharatiya Sah Vyavastha Pramukh Mangesh Bhende, Somashekara Swamiji of Halebeedu Pushpagiri Mutt, RSS Pranth Sanghachalak M Venkaratam, RSS Mysore Vibhag Sanghachalak Dr Vaman Rao Bapat were present on the dais. Earlier to Public function, there  was Path Sanchalan, Route March by RSS Swayamsevaks in streets of Hasan.

RSS Convention at Hasan, January 27, 2013
RSS Convention at Hasan, January 27, 2013

ಭಾವೀ ಭಾರತದ ಬಗ್ಗೆ  ಸ್ವಾಮೀ ವಿವೇಕಾನಂದರಿಗೆ ಯಾವ ಚಿಂತನೆ ಇತ್ತೋ ಅದೇ ಹಾದಿಯಲ್ಲಿ ವ್ಯಕ್ತಿ ನಿರ್ಮಾಣ ಮಾಡುತ್ತಾ ಅವರ ಕನಸನ್ನು ನನಸು ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕೆಲಸ ಮಾಡುತ್ತಿರುವುದಾಗಿ RSS ನ  ಅಖಿಲ ಭಾರತ ಸಹವ್ಯವಸ್ಥಾ ಪ್ರಮುಖರೂ,  ಆಂದ್ರ ಪ್ರದೇಶ ಮತ್ತು ಕರ್ನಾಟಕ ಪ್ರಾಂತಗಳನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕರೂ ಆದ ಮಂಗೇಶ್ ಭೇಂಡೆವರು  ಹಾಸನ ಜಿಲ್ಲಾ RSS ಹಾಸನದ ಸರ್ಕಾರೀ ಹೈಸ್ಕೂಲ್ ಮೈದಾನದಲ್ಲಿ  ಸಂಯೋಜಿಸಿದ್ದ  “ಯುವ ಶಕ್ತಿ ಸಂಗಮದಲ್ಲಿ “ ಪ್ರಧಾನ ಭಾಷಣ ಮಾಡುತ್ತಾ  ತಿಳಿಸಿದರು.

ಮುಂದುವರೆದು ಮಾತನಾಡುತ್ತಾ  “ಒಂದು ಕಾಲದಲ್ಲಿ ಜಗದ್ಗುರುವಾಗಿದ್ದ ಭಾರತವು ಪರಕೀಯರ ಗುಲಾಮರಾಗಿ ನೂರಾರು ವರ್ಷ ಬದುಕುವ ದು:ಸ್ಥಿತಿಗೆ ಕಾರಣ ವನ್ನು ಹುಡುಕಿಕೊಳ್ಳ ಬೇಕೆಂದು ತಿಳಿಸಿದರು.ನಮ್ಮ ದು:ಸ್ಥಿತಿಗೆ ಬೇರೆ ಯಾರನ್ನೂ ನಿಂದಿಸಿ ಪ್ರಯೋಜನವಿಲ್ಲ, ಈ  ದೇಶದಲ್ಲಿ  ಪರಿವರ್ತನೆಯಾಗಬೇಕಾದರೆ ಈ ದೇಶದ ಮಕ್ಕಳಲ್ಲಿ ದೇಶಭಕ್ತಿಯ ಜಾಗೃತಿಯಾಗಬೇಕೆಂದರು. RSS ಕಳೆದ 87ವರ್ಷದಿಂದ ಇದೇ ಕೆಲಸವನ್ನು ಮಾಡುತ್ತಾ ಲಕ್ಷಾಂತರ ಸ್ವಯಂಯಂ ಸೇವಕರಿಗೆ ದೇಶ ಭಕ್ತಿಯ ಸಂಸ್ಕಾರವನ್ನು ನೀಡಿ  ಸಮಾಜದ ಹಲವು ಕ್ಷೇತ್ರಗಳಲ್ಲಿ ಅವರು ಸಕ್ರಿಯರಾಗುವಂತೆ ಮಾಡಿದೆ . ವಿವೇಕಾನಂದರ ಕರೆಯಂತೆ ಸ್ವಯಂ ಸೇವಕರು ತಮ್ಮ ಮನೆದೇವರ ಪೂಜಿಸುವ ಬದಲು ನಿತ್ಯವೂ ಭಾರತ ಮಾತೆಯನ್ನು ಅರ್ಚಿಸುತ್ತಾ  ತಾನು ಮತ್ತು ದೇಶ ಎಂಬ ಎರಡು ಆಯ್ಕೆ ಬಂದಾಗ  ದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಾ  ಸ್ವಾರ್ಥ ತ್ಯಾಗ ಮಾಡಿ ದೇಶಕ್ಕಾಗಿ ತನ್ನನ್ನೇ ಬಲಿದಾನ ಮಾಡಿರುವ ಹಲವು ಸ್ವಯಂಸೇವಕರ ಉಧಾಹರಣೆಗಳಿವೆ, ಎಂದರು.

Mangesj Bhende, RSS Akhil Bharatiya Sah Vyavastha Pramukh speaking
Mangesj Bhende, RSS Akhil Bharatiya Sah Vyavastha Pramukh speaking

ಸಂಘವು ಕ್ರೈಸ್ತ ಅಥವ ಮುಸ್ಲಿಮ್ ವಿರೋಧಿಯಲ್ಲವೆಂದೂ ಆದರೆ ಭಾರತವನ್ನು ವಿರೋಧಿಸುವವರನ್ನು ವಿರೋಧಿಸುತ್ತದೆಂದು ತಿಳಿಸಿದರು. ಅಲ್ಲದೆ ಸಂಘವು ಪ್ರತಿಕ್ರಿಯಾತ್ಮಕವಾಗಿ ಬೆಳೆಯದೆ  ಸಕಾರಾತ್ಮವಾಗಿ ಬೆಳೆಯುತ್ತಾ  ಪ್ರತಿದಿನ ಸುಮಾರು  10 ಲಕ್ಷ ಜನರು ನಿತ್ಯವೂ ಸಂಘದ ಶಾಖೆಗೆ ಬಂದು ಒಳ್ಳೆಯ ಸಂಸ್ಕಾರವನ್ನು ಪಡೆಯುತ್ತಿದ್ದಾರೆಂದರು. ವಿವೇಕಾನಂದರ ಇಚ್ಚೆ ನೆರವೇರಬೇಕಾದರೆ  ಹೆಚ್ಚಿನ ಸಂಖೆಯಲ್ಲಿ ಹಿತೈಷಿ ಬಂಧುಗಳು ಸಂಘ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ತಾಯಿ ಭಾರತಿಯು ಮತ್ತೊಮ್ಮೆ ಜಗದ್ಗುರುವಾಗಲು ತಮ್ಮ ಯೋಗದಾನ ನೀಡ   ಬೇಕೆಂದು ಕರೆ ನೀಡಿದರು.

ಪ್ರತಿ ಮನೆಯಲ್ಲಿ ಒಬ್ಬ ದೇಶಾಭಿಮಾನಿ ಹುಟ್ಟಬೇಕು : ಪೂಜ್ಯ ಸೋಮಶೆಖರ ಸ್ವಾಮೀಜಿ 

ನಮಗೆ ಆಶ್ರಯ ನೀಡಿ ಸಲಹಿರುವ  ಭಾರತಮಾತೆಗೆ ನಾವೇನು ಮಾಡಿದ್ದೇವೆ? ನಾವು ಸ್ವಾರ್ಥಿಗಳಾದರೆ ದೆಶವು ದುರ್ಬಲವಾಗುತ್ತದೆ, ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ದೇಶಾಭಿಮಾನಿ ಹುಟ್ಟಬೆಕೆಂದು, ಹಳೇಬೀಡು ಪುಷ್ಫಗಿರಿ ಮಠದ  ಪೂಜ್ಯ ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಕರೆ ನೀಡಿದರು. ಪೂಜ್ಯರು ಹಾಸನದಲ್ಲಿ RSS ಸಂಯೋಜಿಸಿದ್ದ “ಯುವ ಶಕ್ತಿ ಸಂಗಮದಲ್ಲಿ ಸಾನ್ನುಧ್ಯ ವಹಿಸಿ ಮಾತನಾಡುತ್ತಿದ್ದರು.

ಯುವ ಶಕ್ತಿ ಸಂಗಮದ ಸಾರ್ವಜನಿಕ ಸಮಾರಂಭದಲ್ಲಿ ಸುಮಾರು ಮೂರು ಸಹಸ್ರಕ್ಕೂ ಹೆಚ್ಚು ಗನವೇಷಧಾರಿ ಸ್ವಯಂ ಸೇವಕರು  ಘೋಷ್ ವಾದ್ಯದೊಡನೆ  ಶಾರೀರಿಕ ಪ್ರದರ್ಶನ ನಡೆಸಿದರು. ಸಭೆಯಲ್ಲಿ    ಸಹಸ್ರಾರು ಮಹಿಳೆಯರೂ ಮತ್ತು ಮಹನೀಯರೂ ಸೇರಿದ್ದರು.    ಸಮಾರಂಭಕ್ಕೆ ಮುಂಚೆ  ನಗರದ ಪ್ರಮುಖ ರಸ್ತೆಗಳಲ್ಲಿ ಘೋಷ್ ವಾದ್ಯದೊಡನೆ  ಗಣವೇಶಧಾರೀ ಸ್ವಯಂ ಸೇವಕರ ಆಕರ್ಶಕ ಪಥಸಂಚಲನವು ನಡೆದು ಮೂರು ದಿಕ್ಕುಗಳಿಂದ ಸಾಗಿಬಂದ ಮೂರು ಬೇರೆ ಬೇರೆ ಪಥಸಂಚಲನವು ನರಸಿಂಹ ರಾಜ ವೃತ್ತದಲ್ಲಿ ಮಧ್ಯಾಹ್ನ 3.30 ಕ್ಕೆ ಸಂಗಮ ಗೊಂಡ ದೃಶ್ಯವು ಜನರಲ್ಲಿ ರೋಮಾಂಚನವನ್ನುಂಟು ಮಾಡಿತು.

2.Hasan RSS Convention (3)

4.Hasan RSS Convention (2)

 

3.Hasan RSS Convention (1)

Report by Sridhar Hariharapura

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Naykapu: RSS PATH SANCHALAN

Mon Jan 28 , 2013
As a preparatory event ahead of Feb-3 Manhalore Vibhag Sanghik of RSS, the local RSS unit at Naykapu near Kumble had organised PATH SANCHALAN Yesterday. A total of 126 swayamsevaks participated in the route-march. ಮಂಗಳೂರು ವಿಭಾಗ ಸಾಂಘಿಕ್ ಪೂರ್ವ ಭಾವಿಯಾಗಿ ನಾಯ್ಕಪಿನಲ್ಲಿ ನಡೆದ ಪಥಸ೦ಚಲನದ ಛಾಯಾ ಚಿತ್ರಗಳು. ನಾಯ್ಕಪು ಶಾಸ್ತ ನಾಗರದಿ೦ದ್  ಹೊರಟು ಮುಜು೦ಗಾವು ಕೃಷ್ಣ […]