‘ವಿಕಾಸಕ್ಕಾಗಿ ವಿದ್ಯಾರ್ಥಿ’: ABVP has launched a new project, ‘Vidyarthi for Vikas’

Tumkaur January 10: ABVP has launched a new project, ‘Vidyarthi for Vikas’ (Student for Development) in Tumkur in Karnataka.

Dr AS Anand speaks
Dr AS Anand speaks

ಪರಿಸರದ ಉಳಿವಿಗಾಗಿ ಗ್ರಾಮಗಳತ್ತ ಮುಖಮಾಡಿ  – ಅ. ಶ್ರೀ. ಆನಂದ್

Tumkur Jan 10: ಪರಿಸರ ಉಳಿಯಬೇಕೆಂದರೆ ಗ್ರಾಮಗಳು ಉಳಿಯಬೇಕು, ಗ್ರಾಮಗಳ ಉಳಿವು ಎಂದರೆ ಕೃಷಿಯ ಉದ್ದಾರ. ಹಾಗಾಗಿ ಕೃಷಿ, ರೈತ ಮತ್ತು ಗ್ರಾಮಗಳ ರಕ್ಷಣೆಯಿಂದ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ನಿನ ನಿಕಟಪೂರ್ವ ರಾಜ್ಯ ಅಧ್ಯಕ್ಷರು ಮತ್ತು ಕರ್ನಾಟಕ ಕೃಷಿ ಪ್ರಯೋಗ ಪರಿವಾರದ ಸಂಚಾಲಕರಾದ ಶ್ರೀ ಆ ಶ್ರೀ ಆನಂದ ಅವರು ಹೇಳಿದರು. ಅವರು ದಿನಾಂಕ ೧೦ / ೦೧ / ೨೦೧೪ ರಂದು ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರು ಘಟಕ ಪ್ರಾರಂಭಿಸಿರುವ ವಿಕಾಸಕ್ಕಾಗಿ ವಿದ್ಯಾರ್ಥಿ (STUDENT FOR DEVELOPMENT) ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ರಕ್ಷಣೆಯೆಂದರೆ ಗಿಡ ನೆಡುವ ಕಾರ್ಯಕ್ರಮ, ಮಾಲಿನ್ಯ ನಿಯಂತ್ರಣ, ಪ್ಲಾಷ್ಟಿಕ್ ನಿಯಂತ್ರಣಕ್ಕಷ್ಟೆ ಸೀಮಿತವಾಗಿರದೆ, ವಿಶಾಲ ಅರ್ಥವನ್ನು ಒಳಗೊಂಡಿರಬೇಕು. ಇವತ್ತು ಕೃಷಿಯಿಂದ ಯುವಪೀಳಿಗೆ ದೂರವಾಗುತ್ತಿರುವುದರ ಪರಿಣಾಮ ಗ್ರಾಮೀಣ ಭಾಗದ ಫಲವತ್ತಾದ ಭೂಮಿ ಬಳಕೆಯಾಗುತ್ತಿಲ್ಲ. ಇನ್ನೊಂದು ಕಡೆ ನಗರ ಪ್ರದೇಶದಲ್ಲಿ ಜನಸಾಂದ್ರತೆ ಜಾಸ್ತಿಯಾಗಿ ಪರಿಸರ ಹಾಳಾಗುತ್ತಿದೆ. ಅನಾರೋಗ್ಯ, ನಿರುದ್ಯೋಗ ಸೃಷ್ಟೀಯಾಗುತ್ತಿದೆ. ರೈತನಿಗೆ ನೀರಿನ ಸಮಸ್ಯೆ, ಬೆಳೆ ಸಮಸ್ಯೆ ಮಾರುಕಟ್ಟೆ ಸಮಸ್ಯೆಗಿಂತ ಯುವ ಪೀಳಿಗೆಯನ್ನು ಕೃಷಿಯೆಡೆಗೆ ಆಕರ್ಷಿಸಿ, ಉಳಿಸಿ, ಬೆಳೆಸಿಕೊಳ್ಳುವುದೆ ದೊಡ್ಡ ಸವಾಲಾಗಿ ಉಳಿದಿದೆ. ನಗರದ ಆಕರ್ಷಣೆಯಿಂದ ಯವಕರು ಬದುಕಿನ ಮಟ್ಟ (ಖರ್ಚಿನ ಮಟ್ಟ) ಹೆಚ್ಚಿಸಿಕೊಂಡಿದ್ದಾರೆ. ಕೃಷಿ ಸಾಧಕನ ಸ್ವತ್ತು. ಇಂದು ರೈತನ ದಿನಚರಿ ರೂಡಸಿಕೊಳ್ಳಲು ಬಹುತೇಕ ಎಲ್ಲರಿಗೂ ಕಷ್ಟ. ದಿನದ ಹೆಚ್ಚಿನ ಸಮಯವನ್ನು ಕಾಯಕದಲ್ಲೆ ಕಳೆಯುವ ಕಾಯಕ ಯೋಗಿ ರೈತ. ಬೆಳೆಯನ್ನು ಯಾವ ಸಮಯದಲ್ಲಿ ಬೆಳೆಯಬೇಕು, ಯಾವ ಮಣ್ಣಿಗೆ ಯಾವ ಬೆಳೆ ಇತ್ಯಾದಿ ಯಾವ ಪುಸ್ತಕದಿಂದಲೂ ಓದದೆ ತಿಳಿದಿರುವ ವಿಜ್ಞಾನಿ ರೈತ. ಬೆಳೆಗಳ ನಡುವಿನ ಅಂತರ, ಹೊಲದಲ್ಲಿ ಗಿಡಗಳ ನಡುವಿನ ಅಂತರ ಇತ್ಯಾದಿಗಳನ್ನು ಅವುಗಳ ಬೆಳವಣಿಗೆಗೆ ಪೂರಕವಾಗಿ ಅತ್ಯಂತ ವೈಜ್ಞಾನಿಕವಾಗಿ ಲೆಕ್ಕ ಹಾಕುವ ಗಣಿತಜ್ಞ ರೈತ. ಆದರೆ ಇಂದಿನ ಸಮಾದಲ್ಲಿ ರೈತನ ಮಗ ನಾನು ಎನ್ನಲು ಅನೇಕ ಯುವ ಪೀಳಿಗೆ ಹಿಂಜರಿಯುತ್ತಿರುವುದು ಪರಿಸರಕ್ಕೆ ಅಪಾಯಾಕಾರಿ. ಆದ್ದರಿಂದ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು, ಕೃಷಿಗೆ ಸಂಭಂದಿಸಿದಂತೆ ಸಂಶೋಧನೆಗೆ ವಿದ್ಯಾರ್ಥಿಗಳು ಒತ್ತು ನೀಡಬೇಕು ಎಂದರು.

ವಿಕಾಸಕ್ಕಾಗಿ ವಿದ್ಯಾರ್ಥಿ ಪರಿಸರದ ಬಗ್ಗೆ ಯುವಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಅಭಾವಿಪ ಪ್ರಾಂಭಿಸಿರುವ ಒಂದು ಪ್ರಕಲ್ಪಪವಾಗಿದ್ದು ಅದರ ಮೂಲಕ ೫ ’ಜ’ ಗಳಿಗೆ ಸಂಬಂಧಿಸಿದಂತೆ ಚಟುವಟಿಕೆ ನಡೆಸಲಾಗುತ್ತಿದೆ. ಜನ – ಜಂಗಲ್ – ಜಾನುವಾರು – ಜಮೀನು – ಜಲ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗುತ್ತಿದೆ. ನರ್ಮದ ನದಿಯ ಮಾಲಿನ್ಯವನ್ನು ತಡೆಗಟ್ಟಲು ಇತ್ತೀಚಿಗೆ ಮಧ್ಯಪ್ರದೇಶ ರಾಜ್ಯಗಳಲ್ಲಿ ಸುಮಾರು ೧೨೦೦ ಕಿ.ಮಿ ಜಲಯಾತ್ರೆ ನಡೆಸಲಾಯಿತು. ಇದರ ಪರಿಣಾಮ ಇಂದು ಆ ನದಿಯ ದಂಡೆಗಳಲ್ಲಿ ನಿರ್ಮಾಣಗೊಂಡಿರುವ ಸುಮಾರು ೯೨ ಕೈಗಾರಿಕೆಗಳಿಗೆ ಅಲ್ಲಿನ ನ್ಯಾಯಾಲಯ ನೋಟೀಸ್ ನೀಡಿದೆ. ಇಂತಹ ಅನೇಕ ಅರ್ಥಪೂರ್ಣ ಚಳುವಳಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ’ವಿಕಾಸಕ್ಕಾಗಿ ವಿದ್ಯಾರ್ಥಿ’ ಪ್ರಕಲ್ಪದ ಮೂಲಕ ನಡೆಸಲಾಗುತ್ತಿದೆ ಎಂದು ಅಭಾವಿಪ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ವೆಂಕಟೇಶ್. ಕೆ. ಮುದೂರುರವರು ತಿಳಿಸಿದರು.

ಆರ್ಯನ್ ಹೈಸ್ಕೂಲ್ ಅಸೋಸಿಯೇಷನ್ (ರಿ) ತಮಕೂರು ಇದರ ಅಧ್ಯಕ್ಷರೂ ಮತ್ತು ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ನರಸಿಂಹ ಮೂರ್ತಿ. ಕೆ ಅಧ್ಯಕ್ಷತೆ ವಹಿಸಿದ್ದರು, ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಅಂಜನಯ್ಯನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಆರ್. ಅಶೋಕ್ ಸ್ವಾಗತಿಸಿದರು. ಅಭಾವಿಪ ನಗರ ಕಾರ್ಯದರ್ಶಿ ಶ್ರೀ ಅಮರೇಶ್ ನಿರೂಪಿಸಿ, ನಗರ ಅಧ್ಯಕ್ಷರು ಶ್ರೀ ಜಿ. ಹನುಂತಯ್ಯನವರು ವಂದಿಸಿದರು. ಕಾಲೇಜಿನ ಉಪನ್ಯಾಸಕ ಮತ್ತು ಬೋದಕೇತರ ವೃಂದ, ಅಭಾವಿಪ ಜಿಲ್ಲಾ ಸಹ ಸಂಚಾಲಕ್ ಶ್ರೀ ರವಿಕುಮಾರ್, ವಿದ್ಯಾರ್ಥಿ ನಾಯಕರುಗಳಾದ ಶ್ರೀ ರೂಪೇಶ್, ಶ್ರೀ ವಿನಯ್ ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಆರೆಸ್ಸೆಸ್ ನಾಗಪುರ ಕೇಂದ್ರ ಕಚೇರಿಗೆ ದಲಾಯಿ ಲಾಮಾ ಭೇಟಿ

Fri Jan 10 , 2014
ನಾಗಪುರ ಜ:೧೦: ಟಿಬೇಟಿಯನ್ನರ ಪರಮೋಚ್ಛ ಧಾರ್ಮಿಕ ನಾಯಕ, ನೋಬಲ್ ಪ್ರಶಸ್ತಿ ವಿಜೇತ ದಲಾಯಿ ಲಾಮಾ ಇಂದು ಇಲ್ಲಿನ ರೇಶಮ್ ಭಾಗ್ ಪ್ರದೇಶದಲ್ಲಿನ ಆರೆಸ್ಸೆಸ್ಸ್ ಮುಖ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿರುವ ಸಂಘ ಸ್ಥಾಪಕ ಡಾ. ಹೆಡಗೇವಾರ ಹಾಗೂ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜೀ ಅವರ ಸಮಾಧಿಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಾಯಿ ಲಾಮಾ, ಭಾರತ ಮತ್ತು ಟಿಬೇಟ್ ನಡುವಿನ ಸಂಬಂಧ ಐತಿಹಾಸಿಕ ಹಾಗೂ ಪ್ರಾಚೀನವಾದುದು. ದೇಶಭ್ರಷ್ಟರಾಗಿ […]