ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಂಗಳೂರು ಮಹಾನಗರದ ಪ್ರಾಥಮಿಕ ಶಿಕ್ಷಾ ವರ್ಗವು ವಾಮಂಜೂರಿನ ಮಂಗಳ ಜ್ಯೋತಿ ಶಾಲೆಯಲ್ಲಿ ಆಕ್ಟೋಬರ್ 5-12 ವರೆಗೆ ನಡೆಯಿತು. ಇದರ ಸಮಾರೋಪ ಕಾರ್ಯಕ್ರಮ oct 12 ರಂದು ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ನಡೆಯಿತು. ಸಮಾರೋಪ ಕಾರ್ಯಕ್ರಮದ ಅದ್ಯಕ್ಷರಾಗಿ ಡಾ. ಜಯರಾಮ್ ಶೆಟ್ಟಿ, HOD Dept of Oncology ,ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜ್, ದೇರಳಕಟ್ಟೆ ವಹಿಸಿದ್ದರು. ಬೌದ್ಧಿಕನ್ನು ಪ್ರಸಾದ್ ಕುಮಾರ್, ನ್ಯಾಯವಾದಿ (ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು) ನಡೆಸಿಕೊಟ್ಟರು. ವೇದಿಕೆಯಲ್ಲಿ ಡಾ. ಸತೀಶ್ ಕುಮಾರ್, ಮಂಗಳೂರು ಮಹಾನಗರ ಸಹ ಸಂಘಚಾಲಕರು ಮತ್ತು ಮಹೇಷ್‌ಮೂರ್ತಿ, ಶಿಭಿರಾಧಿಕಾರಿ ಉಪಸ್ಥಿತರಿದ್ದರು. 169 ಶಿಬಿರಾರ್ಥಿಗಳು ವರ್ಗದಲ್ಲಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ಶಾರೀರಿಕ ಪ್ರಯೋಗಗಳ ಪ್ರದರ್ಶನವನ್ನ ನಡೆಸಿಕೊಟ್ಟರು. ಕಾರ್ಯಕ್ರಮದ ಮೊದಲು ಶಿಬಿರಾರ್ಥಿಗಳಿಂದ ಪಥ ಸಂಚಲನ ನಡೆಯಿತು.2 3 4 5 6 7 8 Mangalore ITCರಾರ್ಥಿಗಳಿಂದ ಪಥಸಂಚಲನವಿತ್ತು.