ಮೋಹನ ಭಾಗವತರವರು ಬಿಜೆಪಿಗೆ ಯಾವುದೇ ಎಚ್ಚರಿಕೆಯ ಸಲಹೆಯನ್ನು ನೀಡಿಲ್ಲ: RSS ಸ್ಪಷ್ಟನೆ

ನವದೆಹಲಿ ಜ.೧೦: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತರವರು ಆಮ್ ಆದಮಿ ಪಾರ್ಟಿಯನ್ನು ಸುಲಭವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದರಿಂದ ಕಲಿಯುವಂತೆ ಸಲಹೆ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿಯು ಕಾಲ್ಪನಿಕ, ಅಸತ್ಯ ಮತ್ತು ಆಧಾರರಹಿತ. ಜನರನ್ನು ಗೊಂದಲಕ್ಕೀಡುಮಾಡುವ ಸಲುವಾಗಿ ಇಂತಹ ಊಹಾತ್ಮಕ ಟೇಬಲ್ ಸುದ್ದಿ ವರದಿಯನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ತೋರುತ್ತದೆ ಎಂದು ಆರೆಸ್ಸೆಸ್ಸಿನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಡಾ. ಮನಮೋಹನ ವೈದ್ಯ ಹೇಳಿದರು.

b

ಡಾ ವೈದ್ಯರವರು ಹೈದರಾಬಾದಿನಲ್ಲಿ ದೂರವಾಣಿ ಸಂದರ್ಶನದಲ್ಲಿ ಮಾತನಾಡುತ್ತ ವರದಿಗಳು ಉಲ್ಲೇಖಿಸುವಂತೆ ಆರೆಸ್ಸೆಸ್ಸಿನ ಪ್ರಮುಖರು ಯಾವುದೇ ಹೇಳಿಕೆಯನ್ನು ನೀಡಿದ್ದಾರೆ ಎನ್ನುವದನ್ನು ಸಂಪೂರ್ಣವಾಗಿ ಅಲ್ಲಗಳೆದರು. ಡಾ. ಭಾಗವತರವರು ಈ ವಿಷಯಕ್ಕೆ ಸಂಭಂಧಿಸಿದಂತೆ ಯಾವುದೇ ಮಾಧ್ಯಮ ಪ್ರತಿನಿಧಿಯೊಡನೆ ಮಾತನಾಡಲಿಲ್ಲ ಎಂದು ಆರೆಸ್ಸೆಸ್ ಪ್ರಚಾರ ಪ್ರಮುಖರು ಸ್ಪಷ್ಟೀಕರಿಸಿದರು.

ಡಾ. ಭಾಗವತರವರು ಆಪ್ ಪಕ್ಷದ ಬಗ್ಗೆ ಉಲ್ಲೇಖಿಸುತ್ತ ಅದರಿಂದಾಗಬಹುದಾದ ಹಾನಿಯ ಬಗ್ಗೆ ಎಚ್ಚರಿಕೆಯಿಂದಿರುವಂತೆ ಬಿಜೆಪಿಗೆ ಸಲಹೆ ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಇಲ್ಲಿ ಗಮನಿಸಿಬಹುದು. ಬಿಜೆಪಿ ಆಮ್ ಆದಮಿ ಪಾರ್ಟಿಯ ಸವಾಲನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ ಭಾಗವತ ಹೈದರಾಬಾದಿನ ಮೀಟಿಂಗ್ ಒಂದರಲ್ಲಿ ಹೇಳಿದರು ಎಂದು ಐಬಿಎನ್ ಲೈವ್ ಉಲ್ಲೇಖಿಸಿದೆ.

ಇದು ಟೇಬಲ್ ನ್ಯೂಸ್‌ಗಳನ್ನು ತಯಾರುಮಾಡಿ ಪ್ರಸಾರ ಮಾಡುವುದರಲ್ಲಿ ಪ್ರವೀಣರಾದ ಕೆಲವು ಮಾಧ್ಯಮ ವ್ಯಕ್ತಿಗಳ ಕೈಚಳಕವೆಂದು ತೋರುತ್ತದೆ ಎಂದು ಡಾ. ವೈದ್ಯ ಅಭಿಪ್ರಾಯಪಟ್ಟರು.

ಡಾ. ಭಾಗವತರವರು ಹೈದರಾಬಾದಿನಲ್ಲಿ ಸಂಘದ ಪಧಾಧಿಕಾರಿಗಳು ಮತ್ತು ಬೇರೆ ಬೇರೆ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ವಾಡಿಕೆಯಂತೆ ನಡೆಯುವ ಅವಲೋಕನ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಆರೆಸ್ಸೆಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಅಭಾವಿಪ, ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷತ್, ಬಿಎಮ್‌ಎಸ್, ಭಾರತೀಯ ಕಿಸಾನ ಸಂಘ ಮುಂತಾದ ಸಂಘಟನೆಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದರು.

ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್, ನಿಕಟಪೂರ್ವ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಸಂಘಟನಾ ಕಾರ್ಯದರ್ಶಿ ರಾಮ ಲಾಲ್‌ರವರು ಒಂದು ದಿವಸ ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಡಾ. ವೈದ್ಯ ಹೇಳಿದರು.

ಇಂತಹ ಬೈಠಕ್‌ಗಳು ವರ್ಷಕ್ಕೆರಡು ಬಾರಿ ಸೆಪ್ಟೆಂಬರ್ ಮತ್ತು ಜನವರಿಯಲ್ಲಿ ನಿಯಮಿತವಾಗಿ ನಡೆಯುತ್ತವೆ, ಬೈಠಕ್ ಸಂದರ್ಭದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತುರುವ ಸಂಘಟನೆಗಳ ಪದಾಧಿಕಾರಿಗಳ ನಡುವೆ ವಿಷಯ ವಿನಿಮಯ ನಡೆಯುತ್ತದೆ ಮತ್ತು ರಾಷ್ಟ್ರೀಯ ಹಾಗೂ ಸಾಮಾಜಿಕ ಸ್ತರಗಳಲ್ಲಿ ನಡೆಯುತ್ತಿರುವ ಅನೇಕ ಅಭಿಯಾನ, ಕಾರ್ಯಕ್ರಮ ಮತ್ತು ಯೋಜನೆಗಳ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಸಮನ್ವಯ ಬೈಠಕ್ ಸಂಘಕಾರ್ಯದ ಸಮೀಕ್ಷೆಗಾಗಿ ನಡೆಯತ್ತದೆ ಹಾಗೂ ಬೈಠಕ್ ನಂತರ ಯಾವುದೇ ಅಧಿಕೃದ ಹೇಳಿಕೆ ಅಥವಾ ನಿರ್ಣಯಗಳ ಮಾಹಿತಿ ನೀಡಲಾಗುವುದಿಲ್ಲ ಎಂದು ಡಾ. ವೈದ್ಯ ನುಡಿದರು.

ಸರಸಂಘಚಾಲಕರು ಆಮ್ ಆದಮಿ ಪಾರ್ಟಿಗೆ ಸಂಭಂಧಿಸಿದಂತೆ ಬಿಜೆಪಿಗೆ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಡಾ. ವೈದ್ಯ ಸ್ಪಷ್ಟಪಡಿಸಿದರು.

 

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'ವಿಕಾಸಕ್ಕಾಗಿ ವಿದ್ಯಾರ್ಥಿ': ABVP has launched a new project, 'Vidyarthi for Vikas'

Fri Jan 10 , 2014
Tumkaur January 10: ABVP has launched a new project, ‘Vidyarthi for Vikas’ (Student for Development) in Tumkur in Karnataka. ಪರಿಸರದ ಉಳಿವಿಗಾಗಿ ಗ್ರಾಮಗಳತ್ತ ಮುಖಮಾಡಿ  – ಅ. ಶ್ರೀ. ಆನಂದ್ Tumkur Jan 10: ಪರಿಸರ ಉಳಿಯಬೇಕೆಂದರೆ ಗ್ರಾಮಗಳು ಉಳಿಯಬೇಕು, ಗ್ರಾಮಗಳ ಉಳಿವು ಎಂದರೆ ಕೃಷಿಯ ಉದ್ದಾರ. ಹಾಗಾಗಿ ಕೃಷಿ, ರೈತ ಮತ್ತು ಗ್ರಾಮಗಳ ರಕ್ಷಣೆಯಿಂದ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ […]