ಬೆಂಗಳೂರು ನವೆಂಬರ್ 8: ಸಮಾಜಸೇವಾಸಕ್ತ ಯುವಕರು ನಿರೂಪಿಸಿರುವ ‘ಸಂಜೀವಿನಿ ಭಾರತ’ ಎಂಬ ಹೊಸ ಪ್ರಕಲ್ಪ ಬೃಹತ್ ರಕ್ತದಾನ ಶಿಬಿರದೊಂದಿಗೆ ನಾಳೆ ನವೆಂಬರ್ ಕ್ಕೆ  ಕಾರ್ಯಾರಂಭ ಪಡೆಯಲಿದೆ. ಬೆಂಗಳೂರಿನ ವಿದ್ಯಾಪೀಠ ಬಳಿ ಪೇಜಾವರ ಶ್ರೀಗಳ ಸಾನ್ನಿಧ್ಯದೊಂದಿಗೆ ಉದ್ಘಾಟನೆಗೊಳ್ಳಲಿರುವ ‘ಸಂಜೀವಿನಿ ಭಾರತ’, ಐದು ಆಯಾಮಗಳಲ್ಲಿ ಸಮಾಜಮುಖಿ ಚಟುವಟಿಕೆ ನಡೆಸಲಿದೆ.

1 ಶಿಕ್ಷಣ :
ಅ. ಉಚಿತ ಟ್ಯೂಷನ್ ಸೆಂಟರ್’ಗಳು :
ಆ. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ
ಇ. ದೈಹಿಕ ಶಿಕ್ಷಣ :
ಈ. ನೈತಿಕ ಶಿಕ್ಷಣ
ಉ . ಕಂಪ್ಯೂಟರ್ ಶಿಕ್ಷಣ
ಊ. ಸ್ಪೋಕನ್ ಇಂಗ್ಲೀಷ್ ತರಬೇತಿ
ಋ. ಪಾಠ ಮಾಡಲು ಉತ್ಸಾಹ ಹೊಂದಿರುವವರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು

2 ಆರೋಗ್ಯ :
ಅ. ರಕ್ತದಾನ ಶಿಬಿರ
ಆ. ಆರೋಗ್ಯ ತಪಾಸಣಾ ಶಿಬಿರ
ಇ. ಕಣ್ಣು ದಾನಕ್ಕೆ ಪ್ರೋತ್ಸಾಹ ಹಾಗೂ ಬೇಕಾದ ವ್ಯವಸ್ಥೆಗಳ ನಿರ್ಮಾಣ
ಈ. ಅಂಗಾಂಗ ದಾನಕ್ಕೆ ಪ್ರೋತ್ಸಾಹ ಹಾಗೂ ವ್ಯವಸ್ಥೆ
ಉ. ಆಯುರ್ವೇದಿಕ್ ಔಷಧಗಳ ಹೆಚ್ಚೆಚ್ಚು ಪ್ರಚಾರ ಹಾಗೂ ಬಳಕೆಗೆ ಪ್ರೋತ್ಸಾಹ

3 ಉದ್ಯೋಗ :
ಅ. ವ್ಯಕ್ತಿತ್ವ ವಿಕಸನ
ಆ. ಸಂದರ್ಶನ ಎದುರಿಸಲು ಬೇಕಾದ ಸೂಕ್ತ ಮಾರ್ಗದರ್ಶನ
ಇ. ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಣೆ
ಉ. ನಾಗರೀಕ ಸೇವಾ ಪರೀಕ್ಷೆಗಳು ಹಾಗೂ ಇತರ ಪರೀಕ್ಷೆಗಳಿಗೆ ತರಬೇತಿ
ಊ. ಕೌನ್ಸೆಲಿಂಗ್

4 ಸ್ವಚ್ಛತೆ :
ಆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ
ಇ. ಸಾರ್ವಜನಿಕ ಸಮಾರಂಭಗಳಲ್ಲಿ ಸ್ವಚ್ಛತೆಗೆ ಮಹತ್ವ
ಈ. ಜಲಮಾಲಿನ್ಯ ಕಡಿಮೆ ಮಾಡುವಂತೆ ಹಾಗೂ ಜಲ ಸಂರಕ್ಷಣೆ ಆಂದೋಲನ
ಉ. ವಾಯುಮಾಲಿನ್ಯ ತಡೆಯಲು ಸಾಧ್ಯವಾಗಲು ಬೇಕಾದ ಮಾಹಿತಿ ವಿನಿಮಯ
ಊ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ

5. ಸಂಸ್ಕೃತಿ : 

ಅ. ಭಜನಾ ಸಪ್ತಾಹ

ಆ. ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳು

ಇ. ಸಂಸ್ಕೃತ ಕಲಿಕಾ ಶಿಬಿರಗಳು

ಈ. ಸಂಗೀತ ಹಾಗೂ ಭರತನಾಟ್ಯ ತರಬೇತಿ

ಉ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ

ಊ. ಭಾರತೀಯ ಸಂಸ್ಕೃತಿ ಉಳಿವಿಗಾಗಿ ಕಾರ್ಯಯೋಜನೆಗಳು

1780730_398313326986663_7896615323074658367_n (1)