ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ

952228_orig

ರಿಗೆ,                                                               ದಿನಾಂಕ : ೨೬.೦೩.೨೦೧೪

      ಮಾನ್ಯ ರಾಷ್ಟ್ರಪತಿಗಳು,

      ಭಾರತ ಸರ್ಕಾರ,

ನವದೆಹಲಿ.

ಮಾನ್ಯರೇ,

ಆಧಾರ್ ಕಾರ್ಡ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ (೨೪.೦೩.೨೦೧೪) ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರಪತಿಗಳಿಗೆ ಮನವಿ

ಈಗಾಗಲೇ ಅನೇಕ ವರ್ಷಗಳಿಂದ ಚರ್ಚಿತವಾಗುತ್ತಿರುವ ಆಧಾರ್ ಕಾರ್ಡ್‌ನ್ನು ಅಕ್ರಮವಾಗಿ ನಮ್ಮ ವಿದೇಶಿಯರಿಗೂ ಅಂದರೆ ಬಾಂಗ್ಲಾದೇಶ, ನೇಪಾಳ್, ಪಾಕಿಸ್ತಾನ್ ಮತ್ತು ಅನೇಕ ದೇಶಗಳಿಗೆ ಸೇರಿದ ವಲಸಿಗರಿಗೆ ((immigrants)  ನೀಡಿರುವ ಬಗ್ಗೆ ದೇಶದ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವಿಪರೀತವಾಗಿ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಪಡೆಯಲು ದೇಶದ ದೆಹಲಿ, ಕೋಲ್ಕತ್ತ, ಅಸ್ಸಾಂ, ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಕಂಡು ಬಂದಿರುವಂತೆ ಭಾರತದವರೆಂದು ಹೇಳಿಕೊಳ್ಳಲು ಯಾವುದೇ ಆಧಾರಗಳನ್ನು ಒದಗಿಸದೆ ಬರೀ…. ಫೋಟೋವನ್ನು ನೀಡಿ ೫೦೦ ರಿಂದ ೫೦೦೦ ರೂ.ಗಳವರೆಗೆ ಲಂಚ ಕೊಟ್ಟು ಆಧಾರ್ ಕಾರ್ಡ್ ನಂಬರ್ ಪಡೆದಿರುವ ಬೇಕಾದಷ್ಟು ಉದಾಹರಣೆಗಳು ದೇಶದುದ್ದಗಲಕ್ಕೂ ಲಭ್ಯವಾಗಿವೆ. ಆಧಾರ್ ಕಾರ್ಡ್‌ನ ನಂಬರ್ ಪಡೆಯಲು ಬಯೋಮೆಟ್ರಿಕ್ ಮಾಹಿತಿಯನ್ನೂ ನೀಡದೆ ಯಾರದೋ ಕೈ ಬೆರಳಿನ ಬೆರಳಚ್ಚನ್ನು ಇನ್ನಾರಿಗೋ ನೀಡಿ, ಯಾರದೋ ಕಣ್ಣಿನ ಮಾಹಿತಿಯನ್ನು ಇನ್ನಾರಿಗೋ ನೀಡಿ, ಆಧಾರ್ ಕಾರ್ಡ್ ನಂಬರ್ ನೀಡಲಾಗಿದೆ. ಇದರಲ್ಲಿ ಬಾಂಗ್ಲಾ, ಪಾಕಿಸ್ಥಾನ್, ನೇಪಾಳ ಮುಂತಾದ ದೇಶಗಳಿಗೆ ಸೇರಿದ ಲಕ್ಷಾಂತರ ಸಂಖ್ಯೆಯಲ್ಲಿ ವಲಸಿಗರು ಭಾರತದಲ್ಲಿ ನೆಲೆಸಿದ್ದಾರೆ. ಇದರಿಂದ ಭಾರತದ ಸುರಕ್ಷತೆಗೆ ಭಾರೀ ದೊಡ್ಡ ಸವಾಲು ನಮ್ಮೆದುರಿಗಿದೆ.

 ಅತ್ಯಂತ ಗಂಭೀರವಾದ ಮತ್ತೊಂದು ಸಂಗತಿಯೆಂದರೆ ಆಧಾರ್ ಕಾರ್ಡ್‌ನ ನಂಬರ್ ವಿತರಣೆ ಸಂಪೂರ್ಣ ಯೋಜನೆಯನ್ನು ವಿದೇಶಿ ಕಂಪನಿ L-1 Identity Solutions ಗೆ ಕೊಟ್ಟಿರುವುದರಿಂದ ಇಷ್ಟು ದೊಡ್ಡ Data Bank ನ ಮಾಹಿತಿಯ ಗೌಪ್ಯತೆ ಹಾಗೂ ಸುರಕ್ಷತೆಯ ಬಗ್ಗೆ ಬಹುದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಈ ಯೋಜನೆಗೆ ಪತ್ರಿಕೆಗಳಲ್ಲಿ ಸುದ್ದಿಯಾಗಿರುವಂತೆ ೧೮,೦೦೦ ಕೋಟಿ ದೇಶದ ಸಾರ್ವಜನಿಕರ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ವಾಗತ: ದಿನಾಂಕ ೨೪ ಮಾರ್ಚ್ ೨೦೧೪ ರಂದು ತ್ರಿ ಸದಸ್ಯರ ಪೀಠ ಮೇಲಿರುವ ಎಲ್ಲಾ ಸಂಗತಿಗಳು ಹಾಗೂ ಕೋರ್ಟ್‌ನಲ್ಲಿ ಆಧಾರ್ ಕಾರ್ಡ್‌ನ ಬಗ್ಗೆ ವಾದಗಳನ್ನು ಆಲಿಸಿ ದೇಶಕ್ಕೆ ಸುರಕ್ಷೆ, ದೇಶದ ನಾಗರೀಕರು ಸುರಕ್ಷತೆ, ದೇಶದ ಸಾರ್ವಭೌಮತ್ವದ ಸುರಕ್ಷೆಯಿಂದ ನೀಡಿರುವ ಮಧ್ಯಂತರ ಆದೇಶವನ್ನು ಅತ್ಯಂತ ಗೌರವಪೂರ್ಣವಾದದ್ದು ಮತ್ತು ಐತಿಹಾಸಿಕವಾದದ್ದೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನತೆ ಸ್ವಾಗತಿಸುತ್ತದೆ.

ರಾಷ್ಟ್ರಪತಿಗಳು ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವಿರುದ್ಧ ಕ್ರಮ ತೆಗೆದುಕೋಳ್ಳಲು ಒತ್ತಾಯಿಸಿ ಮನವಿ:

      ಆಧಾರ ಗುರುತಿನ ಚೀಟಿಯ ಪ್ರಸ್ತುತತೆಯ ಬಗ್ಗೆ ಚನ್ನೈ, ಮುಂಬಯಿ, ಬೆಂಗಳೂರು, ಚಂಡೀಗಢ, ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೂ ಪ್ರಶ್ನಿಸಲಾಗಿದೆ.

      ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಇದು ಕೂಡ ಒಂದು. ಸರ್ಕಾರದ ಕಲ್ಯಾಣಕಾರಿ ಯೋಜನೆಗಳನ್ನು ಜನರಿಗೆ ನೇರ ತಲುಪಿಸುವುದು. ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಸೌಲಭ್ಯವನ್ನು ಪಡೆಯಬಹುದು, ವಾಹನ ಚಾಲನಾ ಪರವಾನಿಗೆ, ರೇಷನ್ ಕಾರ್ಡ್, ನೇರವಾಗಿ ಬಳಕೆದಾರರ ಖಾತೆಗೆ ಹಣ ಪಡೆಯಬಹುದಾದದ ವಿವಿಧ ಅನುಕೂಲತೆಗಳನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದರೆ ಇವುಗಳೆಲ್ಲಾ ವಿದೇಶಿಯರಿಗೆ ತಲುಪಬೇಕೆ?

      ಕೇಂದ್ರ ಸರ್ಕಾರದ ಈ ಆಧಾರ್ ಯೋಜನೆಯ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ. ದೇಶದಲ್ಲಿರುವ NPR (National Population Register)   ರಾಷ್ಟ್ರೀಯ ಜನಸಂಖ್ಯಾ ನೊಂದಣಿ ದಾಖಲೆ ಅಂದರೆ ಪೌರತ್ವದ ದಾಖಲೆವಿರುವಾಗ ಮತ್ತೆ ಇದು ಬೇಕೆ? ಬೇಕೆಂದಾದರೆ  ಆಧಾರ್‌ನ ಕಾರ‍್ಯವೇನು? ಈ ಎಲ್ಲ ವಿಷಯಗಳು ಸಂಸತ್‌ನಲ್ಲಿ ಚರ್ಚೆಯೇ ನಡೆಯಲಿಲ್ಲವೇಕೆ?

      ಈ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಸರ್ಕಾರಿ ಯೋಜನೆಗಳು, ಅನುಕೂಲತೆಗಳನ್ನು ಜನರಿಗೆ ನೇರವಾಗಿ ತಲುಪಿಸಬಹುದು. ಆದರೆ ಅರ್ಹರಿಗೆ ತಲುಪಿಸುತ್ತಿದೆಯೇ ಎಂಬ ಪ್ರಶ್ನೆ ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ಅನರ್ಹರಿಗೆ ವಿದೇಶಿಯರಿಗೆ, ಪಕ್ಕದ ರಾಷ್ಟ್ರಗಳ ಜನರಿಗೆ  ಆಧಾರ್ ಗುರುತಿನ ಚೀಟಿ ಲಭ್ಯವಾಗಿರುವ ಬಗ್ಗೆ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವರಿದಿಯಾಗಿದೆ. ಇದಕ್ಕೆ ಹೊಣೆಗಾರರು ಯಾರು? ಈ ಬಗ್ಗೆ  ಸರ್ಕಾರ ಮೌನವೇಕೆ ವಹಿಸಿದೆ?

   ಆಧಾರ್ ಯೋಜನೆ ಜಾರಿಯಾದಂದಿನಿಂದ ಸಂವಿಧಾನ ತಜ್ಞರು, ಅನೇಕ ಸಂಘಟನೆಗಳು ಇದನ್ನು ಪ್ರಶ್ನಿಸಿವೆ. ಭಾರತದ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ಕದಿಯಲು ಅವಕಾಶ ನೀಡುವ ಈ ಯೋಜನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ಯೋಜನೆ ಕಾನೂನಿನ ಅಡಿಪಾಯವಿಲ್ಲ ಇತ್ಯಾದಿ ಸಂಗತಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಅವರು ಆಧಾರ್‌ನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದ್ದಾರೆ. ಈಗ ವಿಭಾಗೀಯ ಪೀಠ ಕಡ್ಡಾಯಗೊಳಿಸಬಾರದು ಎಂದು ಆದೇಶ ನೀಡಿದೆ.

      ಆಧಾರ್ ಯೋಜನೆಗೆ ಕಾನೂನಿನ ಬಲವಿಲ್ಲ ಕಾರ‍್ಯಾಂಗದ ಮೂಲಕ ಆದೇಶ ಹೊರಡಿಸಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಅಗತ್ಯವಿರುವ ಮಸೂದೆಯನ್ನು ಸಂಸತ್ತಿನಲ್ಲಿ ರೂಪಿಸಿ ಒಪ್ಪಿಗೆ ಪಡೆದುಕೊಂಡು ಜಾರಿಗೊಳಿಸಬೇಕಾಗಿತ್ತು. ಅಲ್ಲದೇ ಆಧಾರ್ ಗುರುತಿನ ಚೀಟಿ ಪಡೆಯಬೇಕಾದರೆ ವ್ಯಕ್ತಿಯ ಬಯೋಮೇಟ್ರಿಕ್ (ಜೈವಿಕ ಮಾಹಿತಿ) ಮಾಹಿತಿಯನ್ನು ಈಗ ವಿದೇಶಿ ಕಂಪೆನಿಗೆ ನೀಡಬೇಕಾಗಿದೆ. ಇದು ಎಷ್ಟು ನ್ಯಾಯೋಚಿತವಾದದ್ದು?

ಆದ್ದರಿಂದ ಸುಪ್ರೀಂಕೋರ್ಟ್ ನೀಡಿರುವ  ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂಬ ಆದೇಶವನ್ನು ಜಾರಿಗೊಳಿಸಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಈ ಯೋಜನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಸಾರ್ವಜನಿಕರ ೧೮,೦೦೦ ಕೋಟಿ ಹಣವನ್ನು (ಈ ಯೋಜನೆಗೆ ಖರ್ಚಾದ ಹಣ) ಸರ್ಕಾರದ ಬೊಕ್ಕಸಕ್ಕೆ ಹಿಂತಿರುಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನತೆ ವಿನಂತಿಸಿಕೊಳ್ಳುತ್ತದೆ.

ವಂದನೆಗಳೊಂದಿಗೆ,

ರವಿಕುಮಾರ್.ಎನ್

ರಾಷ್ಟ್ರೀಯ ಸಹಸಂಚಾಲಕರು, Youth Against Corruption

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Audio: RSS Prarthana 'Namaste Sada Vatsale Mathrubhoome'

Wed Mar 26 , 2014
Audio: RSS Prarthana ‘Namaste Sada Vatsale Mathrubhoome’ http://rss.org/resources.aspx SCRIPT is Given Below: नमस्ते सदावत्सले मातृभूमे त्वया हिन्दुभूमे सुखं वर्धितोहम् । महामङ्गले पुण्यभूमे त्वदर्थे पतत्वेष कायो नमस्ते नमस्ते ।।१।। प्रभो शक्तिमन् हिन्दुराष्ट्राङ्गभूता इमे सादरं त्वां नमामो वयम् त्वदीयाय कार्याय बद्धा कटीयं शुभामाशिषं देहि तत्पूर्तये । अजय्यां च विश्वस्य देहीश शक्तिं सुशीलं […]