ಜನವರಿ 7, 2014, ಧರ್ಮಸ್ಥಳ : ವಿಶ್ವ ಹಿಂದೂ ಪರಿಷತ್ದ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಡಿಯಾ ಮಂಗಳವಾರ (ಜನವರಿ 7) ಧರ್ಮಸ್ಥಳಕ್ಕೆ ಬೇಟಿ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು. ದೇವರ ದರ್ಶನದ ಬಳಿಕ ಬೆಳ್ತಂಗಡಿಗೆ ಹೋಗಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ತೊಗಾಡಿಯಾರೊಂದಿಗೆ ವಿಶ್ವ ಹಿಂದು ಪರಿಷತ್ ನ ಮುಖಂಡ ಗೋಪಾಲ್ , ಎಂ.ಬಿ. ಪುರಾಣಿಕ್ ಮುಂತಾದವರು ಜೊತೆಗಿದ್ದರು.

1554401_1453238018229948_515732015_n
ಜ. 8ರಂದು ಉಡುಪಿಗೆ ಭೇಟಿ ನೀಡಿ ಪೂಜ್ಯ ಪೇಜಾವರ ಮಠಾಧೀಶರನ್ನು ಮತ್ತು ಪರ್ಯಾಯ ಸ್ವಾಮೀಜಿ ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡುವರು. ಸಂಜೆ 4.30ಕ್ಕೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಾಗೂ 4. 30ಕ್ಕೆ ಸಂಘನಿಕೇತನದಲ್ಲಿ ಧರ್ಮ ರಕ್ಷಾ ನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

525319_1453238054896611_1868693939_n