‘ಪರಿವರ್ತನೆಗಾಗಿ ಯುವ ಜನತೆ’ ಸಂದೇಶದೊಂದಿಗೆ ABVP ಯ 33 ನೇ ರಾಜ್ಯ ಸಮ್ಮೇಳನಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ

ಉದ್ಘಾಟನಾ ಸಮಾರಂಭದ ವರದಿ

ಹುಬ್ಬಳ್ಳಿ ಜ 31: ಪರಿವರ್ತನೆಗಾಗಿ ಯುವ ಜನತೆ ಎಂಬ ಘೋಷ ವಾಕ್ಯದೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ೩೩ ನೇ ರಾಜ್ಯ ಸಮ್ಮೇಳನಕ್ಕೆ ಇಲ್ಲಿಯ ಬಿವಿಬಿ ಇಂಜೀನಿಯರಿಂಗ್ ಕಾಲೇಜಿನಲ್ಲಿಂದು ಚಾಲನೆ ನೀಡಲಾಯಿತು.

ABVP 33rd State conferecne inaugurated at Hubli January 31, 2014
ABVP 33rd State conferecne inaugurated at Hubli January 31, 2014

ಸುಂದರ ಹಿನ್ನೆಲೆಯ ವಿನ್ಯಾಸದಲ್ಲಿ ಸಜ್ಜುಗೊಂಡಿದ್ದ ದಿ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ , ಪೂಜ್ಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಮೀನಾ ಚಂದಾವರಕರ್, ಮಾನವ ಸಂಪನ್ಮೂಲದಲ್ಲಿ ಎರಡನೇಯ ಸ್ಥಾನದಲ್ಲಿರುವ ಭಾರತ ಅಭಿವೃದ್ಧಿಯಲ್ಲಿ ಮಾತ್ರ ೧೨೮ ಸ್ಥಾನದಲ್ಲಿದೆ. ನಾವು ನಮ್ಮ ಮಾನವ ಸಂಪನ್ಮೂಲವನ್ನು ಸರಿಯಾರಿ ಸದ್ಭಳಿಕೆ ಮಾಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ನೈಸರ್ಗಿಕ ಸಂಪನ್ಮೂಲವಾಗಲಿ, ಮೂಲಭೂತ ಸೌಲಭ್ಯಗಳಾಗಲಿ ದೇಶದ ಆಸ್ತಿಯಲ್ಲ. ಉತ್ತಮ ಕಾರ್ಯಕ್ಷಮತೆ, ಸೃಜನಶೀಲ, ಸಂಸ್ಕಾರಯುತ ಜನತೆಯೇ  ದೇಶದ ನಿಜವಾದ ಆಸ್ತಿ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗ ಯುವ ಸಮುದಾಯದಾಗಿದ್ದು , ಇದರಲ್ಲಿ ಭಾರತದ ಶಕ್ತಿ ಅಡಗಿದೆ. ಸಾತ್ವಿಕ ಜೀವನ, ಸದ್ವಿಚಾರ, ಸತ್ಸಂಗದಿಂದ ಯುವ ಶಕ್ತಿಯನ್ನು ಬೆಳೆಸಬೇಕಿದೆ. ಸಮಾಜದಲ್ಲಿ ಯಾವುದೇ ಭೇದ ಭಾವವಿರಬಾರದು. ನಿಜವಾದ ಮೌಲ್ಯ ಇರುವುದು ಏಕತೆಯಲ್ಲಿ. ಇದರಿಂದಾಗಿ ನಮ್ಮ ಮೌಲ್ಯ ಕೂಡ ಹೆಚ್ಚಲಿದೆ. ಯುವ ಸಮಾಜ ಕೂಡಿಕೊಂಡು ಕೆಲಸ ಮಾಡುವ ಮೂಲಕ ಶಾಶ್ವತ ಯಶಸ್ಸನ್ನು ಕಾಣಬೇಕು.

DSC_0265 DSC_0268 DSC_0273

ಈ ದಶಕವು ಸೃಜನಶೀಲತೆಯ ದಶಕವಾಗಿದೆ. ಸಾಧಾರಣವಾದ ಕೆಲಸವನ್ನು ಅಸಾಧಾರಣವಾಗಿ ಮಾಡುವ ಛಲ ಮೂಡಿದಾಗ ಮಾತ್ರ  ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣ ಸಾಧ್ಯ ಸಿಕ್ಕ ಅವಕಾಶವನ್ನು ಸದ್ವಿನಿಯೋಗಪಡಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ಇತ್ತರು.

ಸಮಾರಂಭದಲ್ಲಿ ದಿವ್ಯ ಸನ್ನಿದ್ಧಿವಹಿಸಿ ಆಶಿವರ್ಚನ ನೀಡಿದ ಹುಬ್ಬಳ್ಳಿಯ ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಸೇವೆ ಮತ್ತು ಆಸ್ತಿಕತೆ ಇವು ಈ ದೇಶದ ಮೌಲ್ಯಗಳು. ಭಾರತದ ಈ ಶಾಶ್ವತ ಮೌಲ್ಯಗಳನ್ನು ಅಳವಡಿಸಿಕೊಂಡು, ಭಾರತ ಮಾತೆಯ ಬಗ್ಗೆ ಭಕ್ತಿ ಭಾವ ಬೆಳೆಸಿಕೊಳ್ಳುವುದರ ಜೊತೆಯಲ್ಲಿ ವ್ಯಸನಮುಕ್ತರಾಗಿ ಯುವ ಸಮಾಜ ಬದುಕು ರೂಪಿಸಿಕೊಳ್ಳಬೇಕು. ಭಾರತದ ಶ್ರೇಷ್ಠ ಸಂಸ್ಕೃತಿ ಪರಂಪರೆಯಲ್ಲಿ ಹುಟ್ಟಿದ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ ಮುಂತಾದ ಆಧ್ಯಾತ್ಮಿಕ ಸಾಧಕರು ತಮ್ಮ ಶ್ರೇಷ್ಠ ಜೀವನದಿಂದಾಗಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇಲ್ಲಿ ಪ್ರಚಲಿತವಿದ್ದ ಉತ್ತಮ ಶಿಕ್ಷಣ ಪದ್ಧತಿಯಿಂದಾಗಿ  ಭಾರತೀಯರನ್ನು ಮತಾಂತರಗೊಳಿಸುವುದು ಸುಲಭ ಸಾಧ್ಯವಲ್ಲ ಸ್ವತಃ ಲಾರ್ಡ ಮೆಕಾಲೆ ಒಪ್ಪಿಕೊಂಡಿದ್ದಾನೆ. ಇಂತಹ ಪವಿತ್ರ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ನಾವು ಆಕೆಯ ಋಣದಲ್ಲಿಯೇ ಬದುಕನ್ನು ನಡೆಸುತ್ತಿದ್ದೇವೆ. ಇದನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ನುಡಿದರು.

ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ರಘು ಅಕ್ಮಂಚಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ರಾಜ್ಯ ಅಧ್ಯಕ್ಷ  ರಾಮಚಂದ್ರ ಶೆಟ್ಟಿ, ಸ್ವಾಗತಿ ಸಮಿತಿ ಅಧ್ಯಕ್ಷ  ಡಾ. ಅಶೋಕ ಶೆಟ್ಟರ್, ಪ್ರಧಾನ ಕಾರ್ಯದರ್ಶಿ ಆನಂದ ಸಂಕೇಶ್ವರ,  ರಾಜ್ಯ ಕಾರ್ಯದರ್ಶಿ ಸುನಿಲಕುಮಾರ, ಸಂಚಾಕರಾದ  ಕೌಸ್ತುಬ್, ಹನುಮಂತ ಶಿಗ್ಗಾಂವ ಉಪಸ್ಥಿತರಿದ್ದರು.

 ಸಮಾರಂಭದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ, ಉಪಾಧ್ಯಕ್ಷ, ಮಾ ನಾಗರಾಜ್, ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಘುನಂದನ, ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಗೀರ ಮುಂತಾದ ಗಣ್ಯರು ಉಪಸ್ಥಿತರಿದರು.

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನೇರನೋಟ: ಗೋಡಂಬಿ ತಿಂದಿದ್ದು ಯಾರೋ! ಎಂಡೋ ಉಂಡಿದ್ದು ಮಾತ್ರ ಈ ನತದೃಷ್ಟರು!

Mon Feb 3 , 2014
by Du Gu Lakshman ಅವರಿಗೆ ಕೈಗಳಿವೆ. ಆದರೂ ಎತ್ತಲಾಗುತ್ತಿಲ್ಲ. ನಮ್ಮ – ನಿಮ್ಮ ಹಾಗೆ ಕಾಲುಗಳಿವೆ. ಆದರೆ ನಡೆಯಲಾಗುತ್ತಿಲ್ಲ. ತಾರುಣ್ಯದ ವಯಸ್ಸಿದೆ. ಆದರೂ ಚುರುಕಾಗಿ ಎzಳಲಾಗುತ್ತಿಲ್ಲ. ಸಂತಾನೋತ್ಪತ್ತಿಯಂತೂ ಸಾಧ್ಯವೇ ಇಲ್ಲ. ಅಸ್ತಮಾ, ಕ್ಯಾನ್ಸರ್, ಮಿದುಳಿಗೆ ಆಘಾತ ಮುಂತಾದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಜೀವಂತವಾಗಿದ್ದರೂ ಜೀವಚ್ಛವದಂತೆ ಬದುಕಬೇಕಾದ ದಯನೀಯ ಸ್ಥಿತಿ. ಆದರೆ ಈ ಸ್ಥಿತಿ ಅವರಿಗೆ ಹುಟ್ಟಿನಿಂದ ಬಂದಿದ್ದಲ್ಲ. ಹುಟ್ಟುವಾಗ ಅವರೆಲ್ಲ ಆರೋಗ್ಯವಂತರಾಗಿಯೇ ಇದ್ದರು. ನಮ್ಮ-ನಿಮ್ಮಂತೆ ಚೈತನ್ಯಪೂರ್ಣ ಶರೀರ ಅವರದಾಗಿತ್ತು. ಆದರೆ […]