ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಪೂರ್ವ  ಪ್ರಾಂತ ಸಂಘಚಾಲಕರಾದ ವೆ.ಯಾ. ಸೋಮಯಾಜಲು (75) ಬೆಂಗಳೂರಿನ ಗಾಯತ್ತಿನಗರದ ಸ್ವಗ್ರಹದಲ್ಲಿ ಮೇ 7, 2014ರ ಬುಧವಾರದಂದು ಮಧ್ಯಾಹ್ನ ಕೊನೆಯುಸಿರೆಳೆದರು. ಬೆಂಗಳೂರು ನಗರದ ಶೈಕ್ಷಣಿಕ ಜಗತ್ತಿನಲ್ಲಿ ದಶಕಗಳ ಕಾಲ ಸೇವೆಸಲ್ಲಿಸಿದ್ದ ಸೋಮಯಾಜಲು ಅವರು ಅಗ್ರಗಣ್ಯ ಸಾಮಾಜಿಕ ನೇತಾರರಲ್ಲೊಬ್ಬರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದು ಪರಿಷತ್ ಸೇರಿದಂತೆ ಅನೇಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ಸೋಮಯಾಜಲು ಅವರು ಜನಸೇವಾ ವಿದ್ಯಾಕೇಂದ್ರ, ಮಿಥಿಕ್ ಸೋಸೈಟಿ, ಸೇರಿದಂತೆ ಅನೇಕ ವೈಚಾರಿಕ ಸಂಸ್ಥೆಗಳ ಆಢಳಿತ ಮಂಡಳಿ ಪ್ರಮುಖ ಪಧಾಧಿಕಾರಿಯಾಗಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಸ್ವತಃ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ  ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಸೋಮಯಾಜುಲು ಅವರು ಅಪಾರ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳನ್ನು ಹೊಂದಿದ್ಧಾರೆ.

BKR_3171

ಅವರ ಜೀವನದ ಕೊನೆಯ ಕ್ಷಣಗಳವರೆಗೂ ಸಮಾಜ ಜೀವನಕ್ಕೆ ಮುಡಿಪಾಗಿರಿಸಿದ ಸೋಮಯಾಜಲು ಅವರ ನಿಧನಕ್ಕೆ ಆರೆಸ್ಸೆಸ್ ಮುಖಂಡರುಗಳಾದ ದತ್ತಾತ್ರೇಯ ಹೊಸಬಾಳೆ, ಮೈ.ಚ. ಜಯದೇವ್, ಮಂಗೇಶ್ ಭೇಂಡೆ, ಕೃ. ಸೂರ್ಯನಾರಾಯಣ ರಾವ್, ಕೃ. ನರಹರಿ, ನ. ಕೃಷ್ಣಪ್ಪ, ವಿ. ನಾಗರಾಜ್, ಕಲ್ಲಡ್ಕ ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್  ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.