ಬಾಯಾರು ನವಂಬರ್ 22 : ಸಂಘ ಪ್ರಾರಂಭವಾದಾಗ ಹೆಚ್ಚಿನವರೆಲ್ಲಾ ಅಪಹಾಸ್ಯ ಮಾಡಿದವರೇ. ಆದರೆ ಇಂದು ಅವೆಲ್ಲವನ್ನೂ ದಾಟಿ ಎಲ್ಲರೂ ಸಂಘವನ್ನು ಸ್ವೀಕಾರ ಮಾಡುವ ಮಟ್ಟಿಗೆ ಸಂಘ ಬೆಳೆದು ವಿಶ್ವವ್ಯಾಪಿಯಾಗಿ ನಿಂತಿದೆ.  ವ್ಯಕ್ತಿ ನಿರ್ಮಾಣ ಸಂಘದ ಮುಖ್ಯ ಧ್ಯೇಯ. ತನ್ಮೂಲಕ ದೇಶದಲ್ಲಿ ಸುದೃಢ ಯುವಕರನ್ನು, ಜನಾಂಗವನ್ನು ತಯಾರಿಸುವ ಪ್ರಯತ್ನ ಮಾಡುವುದೇ ಸಂಘದ ಗುರಿ ಎಂದು ನವಂಬರ್ 22 ರ ಭಾನುವಾರ ಬಾಯಾರು ಮಂಡಲದಲ್ಲಿ ವಿಜಯದಶಮಿಯ ಪ್ರಯುಕ್ತ ಮುಳಿಗದ್ದೆ ಶಾಲೆಯಿಂದ ಪೆರುವೋಡಿ ಶಾಲೆಯ ತನಕ ಸಂಘದ ಸ್ವಯಂಸೇವಕರ  ಪಥಸಂಚಲನದ ನಂತರ  ಮಂಗಳೂರು ವಿಭಾಗದ ಸಹಕಾರ್ಯವಾಹ  ಜನಾರ್ಧನ ಪ್ರತಾಪನಗರ ಹೇಳಿದರು.

ಕಾರ್ಯಕ್ರಮದ ಕೊನೆಗೆ ಇತ್ತೀಚಿಗೆ ಸ್ವರ್ಗಾಧೀನರಾದಂತಹ ವಿಹಿಂಪದ ಮುಖ್ಯ ಆಧಾರಸ್ತಂಭದಂತಿದ್ದ ಶ್ರೀ ಅಶೋಕ್ ಸಿಂಘಲ್ ಜೀ ಅವರಿಗೆ ಪುಷ್ಪಾರ್ಚನೆಯ  ಮೂಲಕ  ಶ್ರದ್ಧಾಂಜಲಿಯನ್ನು  ಸಲ್ಲಿಸಲಾಯಿತು. ಅವರ ಜೀವನದ ಹಾದಿಯ ಕುರಿತಾಗಿ ಮನಮುಟ್ಟುವಂತೆ ಜನಾರ್ಧನ ಪ್ರತಾಪನಗರ ಅವರು  ವಿವರಿಸಿದರು.

IMG-20151122-WA0061

IMG-20151122-WA0057 IMG-20151122-WA0064