ಬೇಂದ್ರೆ ಗ್ರಂಥಾಲಯ ಉದ್ಘಾಟನೆ

Bendre Granthalaya 2

ಹುಬ್ಬಳ್ಳಿ ದಿನಾಂಕ 23-11-2015, ಸೋಮವಾರದಂದು ಹುಬ್ಬಳ್ಳಿಯ ಲೋಕಹಿತ ಟ್ರಸ್ಟ್ ಸಂಚಾಲಿತ ‘ಬೇಂದ್ರೆ ಗ್ರಂಥಾಲಯ’ವು ಟ್ರಸ್ಟ್‌ನ ಕೇಶವಕುಂಜ ಭವನ (ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಾಲಯ) ದಲ್ಲಿ ಬೆಳಗ್ಗೆ 7.30ಕ್ಕೆ ಸರಸ್ವತಿ ಪೂಜೆಯೊಂದಿಗೆ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಾಲಯ ಪ್ರಮುಖರು ಮತ್ತು ಪ್ರಾಂತ ಭಂಡಾರ ಪ್ರಮುಖರುಗಳ ಅಖಿಲ ಭಾರತೀಯ ಬೈಠಕ್‌ಗಾಗಿ ಆಗಮಿಸಿದ್ದ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಾನ್ಯ ಶ್ರೀ ಮಂಗೇಶ ಭೇಂಡೆ, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸಾಂಕಲ್‌ಚಂದ ಬಾಗ್ರೇಚಾ ಮತ್ತಿತರ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಂಥಾಲಯದಲ್ಲಿ ವೇದ-ಪುರಾಣಗಳು, ಅಧ್ಯಾತ್ಮ, ಯೋಗ, ಆಯುರ್ವೇದ, ಸಂಘ, ಇತಿಹಾಸ, ಸಮಕಾಲೀನ ಸಾಹಿತ್ಯ ಮುಂತಾದ ವೈವಿಧ್ಯಪೂರ್ಣ ವಿಷಯಗಳ ಕುರಿತು ಗ್ರಂಥಗಳನ್ನು ಇರಿಸಲಾಗಿದೆ.

Bendre Granthalaya 1