ಪುತ್ತೂರು Nov 1: ಸಂತರ, ಧಾರ್ಮಿಕ ಗ್ರಂಥಗಳ, ಗೋಮಾತೆಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಜನಜಾಗೃತಿಗಾಗಿ ಜಾಗೃತ ಹೃದಯಗಳ ‘ಧರ್ಮ ಜಾಗೃತಿ ಸಮಾವೇಶ’ ನ. 1ರಂದು ತೆಂಕಿಲ ವಿವೇಕಾನಂದ ಶಾಲಾ ವಠಾರದಲ್ಲಿ ನಡೆಯಿತು. ಉದ್ಯಮಿ, ಧರ್ಮ ಜಾಗೃತಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಧ್ಯಕ್ಷತೆ ವಹಿಸಿದ್ದರು. ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ರವೀಶ ತಂತ್ರಿಗಳು ಪ್ರಾಸ್ತಾವಿಕ ಮಾತನಾಡಿ ಸಾಧು ಸಂತರ ಮೇಲಿನ ದೌರ್ಜನ್ಯವನ್ನು ಹಿಂದೂ ಧರ್ಮ ಸಹಿಸೋದಿಲ್ಲ ಎಂದರು.

IMG-20151101-WA0072

ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, , ಮಾಜಿ ಶಾಸಕ ರಾಮ ಭಟ್ ಉರಿಮಜಲು, ಸಂಸದ ನಳೀನ್ ಕುಮಾರ್ ಕಟೀಲು, ಸುಳ್ಯ ಶಾಸಕ ಎಸ್. ಅಂಗಾರ, ಬಂಗಾರಡ್ಕ ವಿಶ್ವೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಾಳೆಕೋಡಿ ಕನ್ಯಾನ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ ಆಶಿರ್ವಚನ ನೀಡಿದರು. ಯುವಭಾರತ್ ರಾಜ್ಯ ಪ್ರಭಾರಿ ನಿಕೇತ್ ರಾಜ್ ಮೌರ್ಯ ಪ್ರಧಾನ ಭಾಷಣಗೈದರು.

IMG-20151101-WA0064 (1)

IMG-20151101-WA0069