ಮಂಜೇಶ್ವರ ನವಂಬರ್ 15: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾಲೂಕಿನ  ಕಬಡ್ಡಿ ಸ್ಪರ್ಧೆಯು ಮೀಯಪದವು ಅಯ್ಯಪ್ಪ ಭಜನಾ ಮಂದಿರದಲ್ಲಿ ನವಂಬರ್ 15 ರ ಭಾನವಾರದಂದು ಜರಗಿತು. ಈ ಕಬಡ್ಡಿ ಸ್ಪರ್ಧೆಯ ಉದ್ಘಾಟನಯನ್ನು ಶ್ರೀ ಚಂದ್ರಶೇಖರ್ ನಾಯಕ್ (ನಿವೃತ್ತ ಅಧ್ಯಾಪಕರು) ಹಾಗೂ ಡಾ|| ಶಿವನಾರಾಯಣರವರು ದೀಪ ಪ್ರಜ್ವಲಿಸಿ, ಭಾರತ ಮಾತೆಯಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನಡೆಸಿದರು. ನಂತರ ನಡೆದ ಕಬಡ್ಡಿ  ಸ್ಪರ್ಧೆಯಲ್ಲಿ ಮಂಜೇಶ್ವರ ತಾಲೂಕಿನ ಒಟ್ಟು   13 ತರುಣರ ತಂಡ ಹಾಗೂ ಬಾಲಕರ 6 ತಂಡಗಳು ಭಾಗವಹಿಸಿದ್ದವು.

IMG-20151115-WA0053

ತರುಣ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ವರ್ಕಾಡಿ ಮಂಡಲದ ಪಾವೂರು ಶಾಖೆ ಮತ್ತು ಮಂಜೇಶ್ವರ ಮಂಡಲದ ಕುಂಜತ್ತೂರಿನ ಮಹಾಲಿಂಗೇಶ್ವರ ಶಾಖೆಯ ಸ್ವಯಂಸೇವಕರು ಪಡೆದುಕೊಂಡರು. ಅದೇ ರೀತಿ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಮೀಂಜ ಮಂಡಲ ಬೇರಿಕೆ ಮತ್ತು ಕುಂಜತ್ತೂರಿನ ಮಹಾಲಿಂಗೇಶ್ವರ ಶಾಖೆಯ ಸ್ವಯಂಸೇವಕರು ಪಡೆದರು. ಕೊನೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕಾರ್ಯಕರ್ತರಾದ ಶ್ರೀ ದಿನಕರ ಭಟ್ ಬಹುಮಾನ ವಿತರಿಸಿದರು ಹಾಗೂ ಶ್ರೀ ಲೋಕೇಶ್ ಜೋಡುಕಲ್ಲು ಸಮಾರೋಪ ಭಾಷಣ ಮಾಡಿದರು.

IMG-20151115-WA0050 IMG-20151115-WA0055 IMG-20151115-WA0064 IMG-20151115-WA0083