CHIKKODI RSS Samavesh ನಮ್ಮ ಸಂಸ್ಕೃತಿ-ಪರಂಪರೆಗಳು ಜಗತ್ತಿಗೆ ಮಾದರಿ: ಚಿಕ್ಕೋಡಿ ತಾಲೂಕು ಸಮಾವೇಶದಲ್ಲಿ ಸಂತೋಷ್

Chikkodi Karnataka: Taluk level RSS Samavesh held at TY Kivada Grounds at Chikkodi on Sunday January 18, 2015. RSS Pracharak and BJP National Joint Organizing Secretary BL Santhosh addressed the gathering.

Chikkodi is the FIRST ever place in Karnataka to begin an RSS Shakha. RSS Founder Dr Keshava Baliram Hedgewar visited this Shakha in Chikkodi of Karnataka in 1937.

10927900_10203659180348272_266073809_n

ಚಿಕ್ಕೋಡಿ : ರಾಷ್ಟ್ರೀಯ ಸ್ವಯಂಸೇವಕ  ಸಂಘ ಸ್ಥಾಪನೆಯಾಗಿ 90 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ನಾನೊಬ್ಬ ಹಿಂದೂ ಎಂದು ಲಕ್ಷಾಂತರ ಜನ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಬೆಳೆದು ನಿಂತಿದೆ ಎಂದು ಅಖೀಲ ಭಾರತ ಬಿಜೆಪಿ ಸಹಸಂಘಟನಾ ಕಾರ್ಯದರ್ಶಿ ಸಂತೋಷಜೀ ಹೇಳಿದರು.

ಪಟ್ಟಣದ ಟಿ.ವೈ. ಕಿವಡ ಮೈದಾನದಲ್ಲಿ ರವಿವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಕ್ಕೋಡಿ ತಾಲೂಕು ಸಮಾವೇಶದಲ್ಲಿ ಅವರು ಮಾತನಾಡಿ, ನಮ್ಮ ಸಂಸ್ಕೃತಿ ,ಪರಂಪರೆಗಳು ಜಗತ್ತಿಗೆ ಮಾದರಿಯಾಗಿವೆ ಎಂದರು. ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೇ ದೇಶ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ರಾಷ್ಟ್ರೀಯ ಸ್ವಯಂಸೇವಕ  ಸಂಘ ಯಾವತ್ತೂ ಮುಸ್ಲಿಂ, ಕ್ರೈಸ್ತ ಧರ್ಮದ ಬಗ್ಗೆ ಮಾತನಾಡಿಲ್ಲ. ಅಲ್ಲಿ ನಡೆಯುತ್ತಿರುವ ಮತಾಂತರ ಹಾಗೂ ಷಡ್ಯಂತ್ರಗಳ ಬಗ್ಗೆ ವಿರೋಧವಿದೆ. ಇಂದು ಶೇ. 47ರಷ್ಟು ಕಾಶ್ಮೀರ‌ ಪಾಕಿಸ್ತಾನದ ಪಾಲಾಗಿದೆ. ನಮ್ಮ ಕಾಶ್ಮೀರ ನಮಗೆ ಬೇಕೆಂದರೆ ಆರ್‌.ಎಸ್‌.ಎಸ್‌. ಕೋಮುವಾದಿಯಾಗಿ ಕೆಲವರಿಗೆ ಕಾಣುತ್ತದೆ. ಆರ್‌ಎಸ್‌ಎಸ್‌ ಮುಸ್ಲಿಂ ಮತ್ತು ಕ್ರೈಸ್ತ ವಿರೋಧಿಧಿಯಲ್ಲ. ಆದರೆ ಸಂಘರ್ಷಕ್ಕೆ ಇಳಿದರೆ ಸಂಘ ಅದಕ್ಕೆ ತಕ್ಕ ಉತ್ತರ ನೀಡಲಿದೆ. ನಾವು ಕಳೆದುಕೊಂಡಿರುವ ಕಾಶ್ಮೀರದ ಅರ್ಧ ಭಾಗವನ್ನು ಪಡೆದುಕೊಳ್ಳುವ ಸಲುವಾಗಿ ಮಾತನಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

10904858_10203659180068265_1682177519_n

ದೇಶವನ್ನು ಕೇವಲ ಹಣದ ಆಧಾರದ ಮೇಲೆ ಕಟ್ಟಿ ಬೆಳೆಸಿಲ್ಲ. ನೀರಿನಂತೆ ರಕ್ತ ಹರಿಸಿ ದೇಶವನ್ನು ನಮ್ಮ ಹಿರಿಯರು ಬೆಳೆಸಿದ್ದಾರೆ. ದೇಶಕ್ಕೆ ಕಷ್ಟ ಬಂದಾಗ, ನೆರೆ, ಪ್ರವಾಹ, ಸುನಾಮಿಯಂತಹ ಸಂದರ್ಭಗಳಲ್ಲಿ ನಮ್ಮ ಸಂಘದ ಸ್ವಯಂಸೇವಕರು ಸ್ಪಂದಿಸಿ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮಿಗಳು ಮಾತನಾಡಿ, ಇಂದಿನ ಯುವಕರು ವ್ಯಸನಕ್ಕೆ ಬಲಿಯಾಗುತ್ತಿರುವುದರಿಂದ ಅವರಲ್ಲಿ ಶಕ್ತಿ ಕಳೆಗುಂದುತ್ತಿದೆ. ಪ್ರತಿಯೊಬ್ಬರು ದೇಹಾಭಿಮಾನಕ್ಕಿಂತ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಶಾಸಕ ಉಮೇಶ ಕತ್ತಿ, ಶಶಿಕಾಂತ ನಾಯಿಕ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ದುರ್ಯೋಧನ ಐಹೊಳೆ, ಜಿಪಂ ಸದಸ್ಯ ಮಹೇಶ ಭಾತೆ, ಜಗದೀಶ ಕವಟಗಿಮಠ, ಬಿ.ಎ. ಪೂಜಾರಿ, ಅಪ್ಪಾಸಾಹೇಬ ಚೌಗಲಾ, ಸುರೇಶ ಬೆಲ್ಲದ, ಡಿ.ಜೆ. ಗುಂಡೆ, ವಿ.ಎಸ್‌. ಮಾಂಜರೇಕರ, ಬಿ.ಎಂ. ಸಂಗ್ರೋಳ್ಳಿ, ದುಂಡಪ್ಪ ಬೆಂಡವಾಡೆ, ಸುರೇಶ ಬ್ಯಾಕೂಡೆ, ಮಹಾಂತೇಶ ಭಾತೆ ಶ್ರೀಕಾಂತ ಕುಲಕರ್ಣಿ, ಡಾ| ಆರ್‌.ಕೆ. ಭಾಗಿ, ಆನಂದ ಅರವಾರೆ, ಕಲ್ಮೇಶ ಕಿವಡ, ಸುರೇಶ ಕಟ್ಟಿಕರ, ಗುರು ಕುಲಕರ್ಣಿ ಉಪಸ್ಥಿತರಿದ್ದರು. ‌ಂಜಯ ಅಡಕೆ ಸ್ವಾಗತಿಸಿದರು. ಎ.ಎಸ್‌. ಉದೋಶಿ ನಿರೂಪಿಸಿದರು. ಜಿಲ್ಲಾ ಸಂಘಚಾಲಕ ಎಂ.ವೈ. ಹಾರೂಗೇರಿ ಪರಿಚಯಿಸಿದರು. ಗಿರೀಶ ಅಶ್ವಥಪೂರ ವಂದಿಸಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಬೆಂಗಳೂರು: ABVPಯಿಂದ 'ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ' ಕಾರ್ಯಕ್ರಮ

Wed Jan 21 , 2015
ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮ ಬೆಂಗಳೂರು-Jan 21: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜನವರಿ 12 ರಿಂದ ದೇಶದ್ಯಂತ ಡ್ರಗ್ಸ್, ಮದ್ಯಪಾನ, ಧೂಮಪನ ಮತ್ತು ಪರಿಸರ ಮಾಲಿನ್ಯಗಳಿಂದ ಮುಕ್ತವಾದ  ಸ್ವಚ್ಚ ವ್ಯಕ್ತಿತ್ವ –  ಸ್ವಚ್ಚ ಕ್ಯಾಂಪಸ್ ಗಳ ಮೂಲಕ ಸ್ವಚ್ಚ  ಸಮಾಜ ನಿರ್ಮಾಣ ಮಾಡಲು ಜನಜಾಗೃತಿಯ ಅಭಿಯಾನವನ್ನು ಕೈಗೊಂಡಿದೆ. ಸ್ವಾಮಿ ವಿವೇಕನಂದರ ಜಯಂತಿ ಜನವರಿ 12 ರಿಂದ ಪ್ರಾರಂಭವಾದ ಅಭಿಯಾನವು ಮಹತ್ಮಗಾಂಧಿಜೀಯವರ ಪುಣ್ಯತಿಥಿ ಜನವರಿ 30 […]