Dharwad May 06, 2015: Sri Mumtaj Ali, popularuly known as “Sri M”, today visited the on going RSS summer cadre training camp, Sangh Shiksha Varg of of RSS Karnataka Uttara Prant at Rashtrotthana Vidyakendra near Garag in Dharwad. RSS Prant Karyavah Aravinda Rao Deshapande welcomed Sri M.

Sri M, is on a journey from Kanyakumari to Kashmir, named Manav Ekata Mission.

 

“It was  a casual visit. Sri M interacted with RSS Swayamsevaks  who are participating in this camp”, said an RSS functionary, who is incharge of the camp from Dharwad.

ಧಾರವಾಡ ಮೇ  6, 2015:ಮಾನವ ಏಕತಾ ಮಿಷನ್’ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಹೊರಟಿರುವ, ಕೇರಳ ಮೂಲದ ಆಧ್ಯಾತ್ಮಿಕ ಸಾಧಕ ಶ್ರೀ ’ಎಂ’ರವರು ಗರಗದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದಿರುವ ಕರ್ನಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ’ಸಂಘ ಶಿಕ್ಷಾ ವರ್ಗ’ಕ್ಕೆ ಭೇಟಿ ನೀಡಿ ಶಿಕ್ಷಾರ್ಥಿಗಳಿಗೆ ಸಂದೇಶ ನೀಡಿದರು.

Sri M at RSS Sangh Shiksha Varg, Dharwad May 6-2015

Sri M at RSS Sangh Shiksha Varg, Dharwad May 6-2015

Sri M visits RSS Sangh Shiksha Varg, Dharwad May 6-2015-1

ಈ ಸಂದರ್ಭದಲ್ಲಿ ’ಎಂ’ ಎಂದೇ ಖ್ಯಾತರಾದ ಶ್ರೀಮುಮತಾಜ್ ಅಲಿಯವರು ತಮ್ಮಪಾದಯಾತ್ರೆಯ ಬಗ್ಗೆ ಸಂಘದ ಹಿರಿಯರೊಂದಿಗೆ ನಡೆದ ಸಂವಾದದ ಉಲ್ಲೇಖ ಮಾಡಿ, ಯಾತ್ರೆಯ ಉದ್ದೇಶವನ್ನು ವಿವರಿಸಿದರು.

ಶ್ರೀನಗರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಿದಾಗಲೇ ತಮ್ಮ ಯಾತ್ರೆ ಸಂಪೂರ್ಣವಾಗುತ್ತದೆ. ಈ ನೆಲದ ಅನ್ನ, ನೀರುಗಳನ್ನು ಉಣ್ಣುವ, ಕುಡಿಯುವ ಪ್ರತಿಯೊಬ್ಬರೂ ಇದನ್ನು ತಮ್ಮ ದೇಶ ಎಂದು ಭಾವಿಸಬೇಕೆಂದು ಅವರು ಅಭಿಪ್ರಾಯ ಪಟ್ಟರು.

ಒಂದೆಡೆ ಈ ಬಾಹ್ಯಯಾತ್ರೆ ನಡೆಯುತ್ತಿದ್ದರೆ, ಇನ್ನೊಂದೆಡೆ ಪ್ರತಿಯೊಬ್ಬ ವ್ಯಕ್ತಿ ತನ್ನ ಮನದ ಆಂತರಿಕಯಾತ್ರೆಯ ಮೂಲಕ ತನ್ನ ಜೀವನದ ಅಂತಿಮಲಕ್ಷ್ಯದೆಡೆಗೆ ಸಾಗಬೇಕು. ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಜನರೂ ತಮ್ಮ ಜೀವನದ ಗುರಿಯನ್ನು ಸಾಧಿಸಲು ಮತ್ತೊಮ್ಮೆ ಭಾರತಕ್ಕೆ ಬರುವ ರೀತಿಯಲ್ಲಿ ಈ ದೇಶ ತಲೆಯೆತ್ತಿ ನಿಲ್ಲುತ್ತದೆ ಎಂದು ಅವರುವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹರಾದ ಶ್ರೀ ಅರವಿಂದರಾವ್ ದೇಶಪಾಂಡೆಯವರು ಸೇರಿದಂತೆ ಸಂಘದ ಎಲ್ಲ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರ್ಗದ ವರ್ಗಾಧಿಕಾರಿಗಳಾದ ಡಾ|| ಮಹಾದೇವಪ್ಪ ದಳಪತಿಯವರು ಶ್ರೀ ’ಎಂ’ರನ್ನು ಸ್ವಾಗತಿಸಿ ಗೌರವ ಸಲ್ಲಿಸಿದರು.