ಭಾರತ-ಭಾರತಿ ಪುಸ್ತಕ ಸಂಪದ-2ನೇ ಸರಣಿಯ 50 ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ಭಾರತಭಾರತಿ ಪುಸ್ತಕ ಸಂಪದ೨ನೇ ಸರಣಿಯ ಐವತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ

 Bharata Bharati- Rashtrotthana March 8-2015

Bharata Bharati- Rashtrotthana March 8-2015

ಮಕ್ಕಳಸಾಹಿತ್ಯದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿ, ಇಂದಿಗೂ ಬಹುಜನಪ್ರಿಯವಾಗಿರುವ ಭಾರತ-ಭಾರತಿ ಪುಸ್ತಕ ಸಂಪದ ಮಾಲೆಗೆ ಇನ್ನಷ್ಟುಮಹಾಪುರುಷರ ಬದುಕನ್ನು ಕಟ್ಟಿಕೊಡುವ ಸಲುವಾಗಿ ಸಾಹಿತಿ ’ಚಿರಂಜೀವಿ’ ಅವರ ಸಂಪಾದಕತ್ವದಲ್ಲಿ ೨೦೧೨ ರಲ್ಲಿ ಭಾರತ-ಭಾರತಿ-2 ಕಾರ್ಯ ಪ್ರಾರಂಭಿಸಲಾಗಿದೆ. ಈಗಾಗಲೇ (ಜನವರಿ ೨೦೧೪) ಮೊದಲ ಕಂತಿನ 50 ಶೀರ್ಷಿಕೆಗಳ ಪುಸ್ತಕಗಳು ಪ್ರಕಟಣೆಗೊಂಡಿದ್ದು, ಮುಂದಿನ ೫೦ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 8-3-2015 ಭಾನುವಾರ ಬೆಳಗ್ಗೆ 10.30ಕ್ಕೆ

ಸ್ಥಳ : “ಕೇಶವಶಿಲ್ಪ”, ಕೆಂಪೇಗೌಡನಗರ, ಬೆಂಗಳೂರು -19

ಮಾಹಿತಿಗಾಗಿ : 080 -26612730

ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು – ಎಂಬುದಕ್ಕೆ ಎಳೆಯರಿಗೆ ಮಾರ್ಗದರ್ಶಿಯಾಗಿ; ಆದರ್ಶದ ಕನಸುಕಟ್ಟಬಲ್ಲ ರಾಷ್ಟ್ರೋತ್ಥಾನ ಸಾಹಿತ್ಯದ ಹೆಮ್ಮೆಯ  ಪುಸ್ತಕಮಾಲೆಯೇ ಭಾರತ-ಭಾರತಿ ಪುಸ್ತಕ ಸಂಪದ ಮಾಲೆ.

೭೦ರ ದಶಕದಲ್ಲಿ ಪ್ರೋ|| ಎಲ್.ಎಸ್. ಶೇಷಗಿರಿರಾವ್ ಅವರ ಪ್ರಧಾನ ಸಂಪಾದಕತ್ವದಲ್ಲಿ ’ಭಾರತ-ಭಾರತಿ’ ಪುಸ್ತಕ ಸಂಪದಮಾಲೆಪ್ರಾರಂಭವಾಯಿತು. ನಾಡು-ನುಡಿ-ಸಂಸ್ಕೃತಿಯ ಏಳ್ಗೆಗಾಗಿ ಬದುಕಿದ ಭಾರತೀಯ ಸಾಧನಾಶೀಲ ಹಿರಿಯರ ಜೀವನಚರಿತ್ರೆಗಳನ್ನುಪ್ರಕಟಿಸುವ ಈ ಯೋಜನೆಯಲ್ಲಿ 510 ಶೀರ್ಷಿಕೆಗಳು ಪ್ರಕಟವಾಗಿ ಲಕ್ಷಾಂತರ ಓದುಗರನ್ನು ತಲಪಿ ಇಂದಿಗೂ ರಾಜ್ಯಾದ್ಯಂತಮನೆಮಾತಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

50 new books of much popular 'Bharata-Bharati' series launched in Bengaluru

Sun Mar 8 , 2015
Bengaluru March 08: 50 new books were added to the list of Bharata Bharati series, as newly penned 50 books on different personalities were launched in Bengaluru on Sunday morning. Now the total number of books reached 610. Bharata-Bharati, is a mega project on small books on personalities who contributed […]