ಬೆಂಗಳೂರು : ಹಿಂದೂ ಧರ್ಮ ಅತ್ಯಂತ ಪವಿತ್ರವಾದದ್ದು, ಅದು ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುತ್ತದೆ, ಸೇವೆಯೇ ಹಿಂದೂ ಧರ್ಮದ ಮೂಲ ಧ್ಯೇಯವಾಗಿದೆ, ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕೆಂದು ಜಗದ್ಗುರು ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮೀಜಿ ಕರೆ ನೀಡಿದರು.

IMG_6816
ನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಭಾರತದಲ್ಲಿ ಧಾರ್ಮಿಕ ಆಚರಣೆ ಮತ್ತು ಸೇವೆಯನ್ನು ಪ್ರತ್ಯೇಕವಾಗಿ ನೋಡಲ್ಲ, ಸೇವೆಯಲ್ಲೇ ಧರ್ಮವನ್ನು ಕಾಣುವವರು ಭಾರತೀಯರು ಎಂದು ಅಭಿಪ್ರಾಯಪಟ್ಟರು.
ನಮ್ಮಲ್ಲಿರುವ ಕೆಲ ಸಾಹಿತಿಗಳು ಬದುಕಿರುವಾಗ ಹಿಂಧೂ ಧರ್ಮವನ್ನು ಟೀಕಿಸಿ, ಸತ್ತಾಗ ಮಾತ್ರ ಹಿಂದೂ ಧರ್ಮವನ್ನು ಅನುಸರಿಸುವ ಸಾಹಿತಿಗಳು ಹಲವರಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವವರು ಒಮ್ಮೆ ಈ ಆಧ್ಯಾತ್ಮಿಕ ಮೇಳವನ್ನು ಭೇಟಿ ನೀಡಿ ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲಿ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡುತ್ತ ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ಮಕ್ಕಳಿಗೆ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ತಿಳಿಸದೆ ಮಕ್ಕಳಿಗೆ ಧರ್ಮದ ವಿಚಾರಗಳು ತಿಳಿಯದೆ ತಪ್ಪು ಹಾದಿಯತ್ತ ತುಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ನಮ್ಮ ದೇಶದ, ಗ್ರಂಥಗಳ ಬಗ್ಗೆ ವಿದೇಶಿಯರು ಅಭಿಪ್ರಾಯಪಟ್ಟಿರುವ ಒಳ್ಳೆಯ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು, ಇತರರು ಮೆಚ್ಚುವಂತಹ ಸಂಸ್ಕೃತಿ ನಮ್ಮದಾಗಿದೆ ಎಂದರು, ಜಾಗತೀಕರಣದ ಈ ಯುಗದಲ್ಲಿ ಧರ್ಮವನ್ನು ಪ್ರಚಾರ ಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಮಾತನಾಡಿ ಭಾರತದ ಆಧ್ಯಾತ್ಮಿಕತೆಯು ಅತ್ಯಂತ ಶೇಷ್ಠವಾದದು, ಪ್ರಮುಖ ಐದು ವಿಚಾರಗಳಾದ ಆಧ್ಯಾತ್ಮಿಕತೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ವನ್ಯ ಸಂರಕ್ಷಣೆ ಕುರಿತು ಈ ಮೇಳದಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಇಂದು ಆಧುನಿಕ ವಿಜ್ಞಾನ ಎಷ್ಟೇ ಬೆಳೆದರು ಅವೆಲ್ಲವನ್ನು ಗಟ್ಟಿಯಾಗಿ ನಿಲ್ಲುವ ಸಂಸ್ಕೃತಿ ಎಂದರೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ನಮ್ಮ ಭಾರತೀಯ ಸಂಸ್ಕೃತಿ ಎಂದು ತಿಳಿಸಿದರು.
ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪ್ರಿಚುವಲ್ ಪದವನ್ನು ಸೇರಿಸುವಂತೆ ಸಲಹೆ ತಿಳಿಸಿದ್ದರು, ರಾಜಕೀಯ ಕಾರಣಗಳಿಗಾಗಿ ಅದನ್ನು ಸೇರಿಸಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಹಿಂದೂ ದೇವಸ್ಥಾನಗಳನ್ನು ಸರ್ಕಾರಿಕರಣ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಯ ಸಾಧಿಸಿದ್ದೇವೆ, ದೇವಸ್ಥಾನಗಳ ವಿಚಾರಗಳಲ್ಲಿ ಕಾನೂನು ಅವಶ್ಯಕ ,ಆದರೆ ಎಲ್ಲಾ ಧಾರ್ಮಿಕ ಮುಖಂಡರ ಸಲಹೆ ಪಡೆದು ಸ್ವಾಯತ್ಥ ಸಂಸ್ಥೆ ರಚಿಸಬೇಕು.
ಹಿಂದೂ ಸಂಸ್ಕೃತಿ ಪ್ರಕೃತಿಯನ್ನು ಆರಾಧಿಸುವ , ಪಾಲನೆ ಮಾಡುವ ಸಂಸ್ಕೃತಿಯಾಗಿದೆ, ಇಂದು ನಗರೀಕರಣದ ಭರದಲ್ಲಿ ಅಂತರ್ಜಲ ಸಮಸ್ಯೆ, ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ, ಪ್ರತಿಯೊಬ್ಬರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಮತ್ತು ಸೌರ ಶಕ್ತಿ ಘಟಕಗಳನ್ನು ಅಳವಡಿಸಿಕೊಂಡರೆ ನೀರು ಮತ್ತು ವಿದ್ಯುತ್ ಅಭಾವ ಕಡಿಮೆಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯಪಾಲ ವಜುಭಾಯಿ ವಾಲ ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಸುಧೈವ ಕುಟುಂಬಂ ಎಂಬ ಪದ್ದತಿ ಇದೆ, ಹಿಂದೂ ಸಂಸ್ಕೃತಿಯಲ್ಲಿ ವಿಶಾಲ ಮನೋಭಾವವಿದೆ, ಹಿಂಸೆಯನ್ನು ನಮ್ಮ ಸಂಸ್ಕೃತಿ ವಿರೋಧಿಸುತ್ತದೆ, ಸಾಧು ಸಂತರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಬೇಕಾಗಿದೆ, ಇಂದು ಎಲ್ಲ ಧರ್ಮಗಳಿಗೂ ಸಮಾನವಾದ ಗೌರವಿದೆ, ಇಂದು ಎಲ್ಲಾ ಸಾಧು, ಸಂತರು ಶೈಕ್ಷಣಿಕ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಎಚ್‌ಎಸ್‌ಎಸ್‌ಎಫ್ ಸಂಸ್ಥೆಯ ನಿರ್ವಾಹಕ ಎಸ್.ಗುರುಮೂರ್ತಿ ಮಾತನಾಡಿ ಎಲ್ಲಾ ಹಿಂದೂ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ, ಸೇವಾ ಮನೋಭಾವವನ್ನು ಅಳವಡಿಸಿಕೊಂಡಿರುವ ಧರ್ಮ ನಮ್ಮ ಹಿಂದೂ ಧರ್ಮ, ನಿಸ್ವಾರ್ಥತೆಯಿಂದ ಸೇವೆಯನ್ನು ಹಲವರು ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಇಸ್ಕಾನ್‌ನ ಅಧ್ಯಕ್ಷ ಮಧುಪಂಡಿತ ದಾಸ್, ಕನಕಗಿರಿ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಲ್ಬುರ್ಗಿ ಭೌದ್ದ ವಿಹಾರದ ಸಂಗಾನಂದ ಬಂತೆ, ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯ ಸಂಕೇಶ್ವರ, ಕಾರ್ಯಾಧ್ಯಕ್ಷರಾದ ನಾಗನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೇಳದ ವಿಶೇಷತೆ:
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದಲ್ಲಿ ಹಲವು ವೈಶಿಷ್ಟತೆಗಳು ಕೂಡಿತ್ತು, ಮೇಳದಲ್ಲಿದ್ದ ಮಠಗಳ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ, ರಾಜ್ಯದ ಪ್ರಮುಖ ಧಾರ್ಮಿಕ ಮಠಗಳಾದ ಶ್ರೀ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೊಂದ ಸ್ವರ್ಣವಲ್ಲಿ ಮಠ, ಶ್ರೀ ಗುರುರಾಘವೇಂದ್ರ ಮಠ, ಯೋಗಿ ನಾರೇಯಣ ಮಠ ಕೈವಾರ, ರಾಮಕೃಷ್ಣ ಮಠ, ಇಸ್ಕಾನ್ ಸೇರಿದಂತೆ ಅನೇಕ ಧಾರ್ಮಿಕ ಮಠಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿವೆ,
ಇನ್ನೊಂದು ವಿಶೇಷವೆಂದರೆ ಎಲ್ಲರ ಗಮನ ಸೆಳೆಯುತ್ತಿರುವ ಸಾನತನ ಮರವೊಂದನ್ನು ಪ್ರತಿಷ್ಠಾಪಿಸಿದ್ದು, ಇದ್ದರ ಮೂಲ ಉದ್ದೇಶ ವನ ಹಾಗೂ ವನ್ಯ ಜೀವಿ ಸಂರಕ್ಷಣೆ, ಪರಿಸರ ಕಾಳಜಿ, ರಾಷ್ಟ್ರ ಭಕ್ತಿ, ಸ್ತ್ರೀ ಗೌರವ, ಮಾಲಿನ್ಯ ನಿಯಂತ್ರಣ ತಡೆಗಟ್ಟುವುದು, ಕುಟುಂಬ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಆಗಿದೆ,
ಮತ್ತೊಂದು ಆಕರ್ಷಿಸುವ ಸಾಧನ ಮಂಟಪವೊಂದಿದ್ದು, ಅಲ್ಲಿ ಪ್ರಾಚೀನ ಭಾರತದ ದಿಗ್ಗಜರಾದ ಆರ್ಯಭಟ, ಭಾಸ್ಕರಚಾರ್ಯ, ಯೋಗ ಪಿತಾಮಹ ಪತಂಜಲಿ ಮಹರ್ಷಿ ಹಾಗೂ ಭಾರತದ ಅದ್ಬುತ ವಾಸ್ತು ಶಿಲ್ಪಗಳಾದ ಅಜಂತಾ ಎಲ್ಲೋರ ಗುಹಾಂತರ ದೇವಾಲಯ, ಹಂಪಿ ಬಗ್ಗೆ ವಿಸ್ತೃತ ಮಾಹಿತಿ ನೀಡುತ್ತದೆ, ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಂಗೊಳ್ಳಿರಾಯಣ್ಣ, ಮಹಾತ್ಮ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ಮಹಿಳಾ ಸಾಧಕಿಯರಾದ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಮಹಿಳಾ ಸಂತರಾದ ಮೀರಾ ಬಾಯಿ, ಶಾರದಾ ದೇವಿ ಸೇರಿದಂತೆ ಮುಂತಾದವರ ಜೀವನ ಚರಿತ್ರೆ ಮತ್ತು ಸಾಧನೆ ಕುರಿತ ಸಮಗ್ರ ಮಾಹಿತಿ ನೀಡುವ ಕೆಲಸವನ್ನು ಸಾಧನ ಮಂಟಪ ಮಾಡುತ್ತಿದೆ.
ಅಷ್ಟೇ ಅಲ್ಲದೆ ಮೇಳದಲ್ಲಿ ಸಾವಯವ ಆರೋಗ್ಯ ಪದ್ದತಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಾವಯವ ಪಧಾರ್ಥ, ಗೋ ಉತ್ಪನ್ನಗಳನ್ನು ಒಳಗೊಂಡ ಮಳಿಗೆಗಳು ಇಲ್ಲಿವೆ.