Governor VR Vala, BJP Chief Amit Shah, RSS’s Mangesh Bhende attends ‘Jagannath Rao Joshi Smarak Bhavan inaugural at Gadag

Gadag, Karnataka June 23: Karnataka Governor VR Vala, BJP President Amit Shah, RSS AKhil Bharatiya Vyavastha Pramukh Mangesh Bhende attended inaugural ceremony of Jagannath Rao Joshi Smarak Bhavan in Naragunda of Gadaga district in Karnataka on Tuesday. The new building was named after Jagannath Rao Joshi, who was an RSS Pracharak, later took responsibility in BJP, known for his great organisational skills.

DSC_2293

DSC_1930

DSC_1966 DSC_2030 DSC_2194

ಬ್ರಿಟಿಷರಿಗೆ ಹೆದರದ ದೇಶದ ಜನತೆ ಬ್ರಷ್ಟಾಚಾರ, ಭಯೋತ್ಪಾದನೆಗೆ ಹೆದರುತ್ತಿದ್ದಾರೆ: ರಾಜ್ಯಪಾಲ ವಝುಭಾಯಿ ವಾಲಾ

ಗದಗ: ದೇಶಕ್ಕಾಗಿ ಮಡಿದ ಮಹನಿಯರನ್ನು ದೇಶವು ಎಂದು ಮರೆತಿಲ್ಲ. ದೇಶ ಸ್ವರಾಜ್ಯವಾದ ನಂತರ ಸು-ರಾಜ್ಯ ಸಿಗಬೇಕಿದೆ. ಬ್ರಿಟಿಷರಿಗೆ ಹೆದರದ ದೇಶದ ಜನತೆ ಇಂದು ಬ್ರಷ್ಟಾಚಾರ, ಭಯೋತ್ಪಾದನೆಗೆ ಹೆದರುತ್ತಿದ್ದಾರೆ ಎಂದು ರಾಜ್ಯಪಾಲ ವಝುಭಾಯಿವಾಲಾ ಹೇಳಿದರು.

ಅವರು ಜಿಲ್ಲೆಯ ನರಗುಂದ ಪಟ್ಟಣದ ತಾಲೂಕು ಕ್ರೀಡಾಗಣದಲ್ಲಿ ಜಗನ್ನಾಥ ಜೋಷಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಜಗನ್ನಾತ ಜೋಷಿ ಸ್ಮಾರಕ ಭವನ ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಹೆಚ್ಚಾಗುತ್ತಿರುವ ಬ್ರಷ್ಟಾಚಾರ, ಭಯೋತ್ಪಾದನೆ, ನಕ್ಸಲಿಜಂನ್ನು ನಿಯಂತ್ರಿಸುವ ಮೂಲಕ ದೇಶದ ಜನತೆಗೆ ನೆಮ್ಮದಿ ನೀಡಬೇಕಿದೆ. ದೇಶಕ್ಕಾಗಿ ಪ್ರಾಣ ನೀಡಲು ಹೆದರಬಾರದು. ಅಂತಹ ಮನೋಭಾವದಿಂದಲೇ ಇಂದು ಜಗನ್ನಾಥ ಜೋಷಿ ಅವರು ಜನಮಾನಸದಲ್ಲಿ ಉಳಿದಿದ್ದಾರೆ. ಹೆದರುವವರು ಬದುಕಲು ಸಾಧ್ಯವಿಲ್ಲ. ಧೈರ್ಯದ ಪ್ರತೀಕವಾದ ಜಗನ್ನಾಥ ಜೋಷಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾತೃಭೂಮಿಯ ರಕ್ಷಣೆಗೆ ಕಂಕಣ ಬದ್ಧರಾಗಬೇಕು ಎಂದರು.

ತಿಲಕ್ ಕರೋ ಏ ಮಿಠ್ಠಿಕೋ… ಏ ಮಿಠ್ಠಿ ಹೈ ಬಲಿದಾನ ಕೀ ಎಂದು ಹೇಳುವ ಮೂಲಕ ಜಗನ್ನಾಥರ ಜನ್ಮ ಭೂಮಿಯಯನ್ನು  ಕೊಂಡಾಡಿದ ರಾಜ್ಯಪಾಲರು, ದೇಶಕ್ಕೆ ಜಗನ್ನಾಥರ ಕೊಡುಗೆಯನ್ನು ಪ್ರಶಂಶಿಸಿದರು. ಇಂದು ದೇಶವನ್ನು ಬಲಿಷ್ಠ ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಜಗನ್ನಾಥರ ಹೋರಾಟದ ಮನೋಭಾವವನ್ನು ಪ್ರೇರಣೆಯಾಗಿಸಿಕೊಂಡು ರಾಷ್ಟ್ರಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು ಎಂದರು. ಭಾರತ ಬಡವರ ಹಾಗೂ ಭಿಕ್ಷುಕರ ದೇಶವಲ್ಲ. ಸಾಂಸ್ಕೃತಿಕ ಭವ್ಯ ಪರಂಪರೆ ಹೊಂದಿದ ದೇಶವಾಗಿದೆ. ದೇಶ ಭಕ್ತರ ತ್ಯಾಗ ಬಲಿದಾನದ ಪ್ರತೀಕವಾಗಿ ಇಂದುತಿಯೊಬ್ಬ ಪ್ರಜೆಯ ನಾನೂ ಭಾರತಾಂಬೆ ಪುತ್ರ ಎಂದು ಗರ್ವದಿಂದ ಹೇಳಿಕೊಳ್ಳಬೇಕು. ನಾವು ದೇಶಕ್ಕೆ ಸಮರ್ಪಿತರಾಗಿ ದೇಶವನ್ನು ಸಶಕ್ತವಾಗಿಸೋಣ ಎಂದರು.

ಗೋವಾ ವಿಮೋಚನಾ ಹೋರಾಟದಲ್ಲಿ ಪೋರ್ಚಗೀಸರಿಂದ ಚಿತ್ರ ಹಿಂಸೆಗೊಳಗಾದ ಜಗನ್ನಾಥರು, ನ್ಯಾಯಾಲಯದಲ್ಲಿಯೇ ಗೋವಾ ನನ್ನ ಭಾರತ ಮಾತೆಯ ಶರೀರ ಎಂದು ಹೇಳುವ ಮೂಲಕ ಗೋವಾ ವಿಮೋಚನೆಗೆ ನಾಂದಿ ಹಾಡಿದರು ಜಗನ್ನಾಥ ಜೋಷಿ ಅವರ ಸ್ಮಾರಕ ಕೇವಲ ಸ್ಮಾರಕವಲ್ಲ. ಮಾತೃಭೂಮಿಯನ್ನು ಸ್ಮರಿಸುವ ಶಕ್ತಿ ಕೇಂದ್ರವಾಗಿದೆ. ಹಾಗಾಗಿ ಪ್ರತಿಯೊಬ್ಬರು ಜಗನ್ನಾಥ ಜೋಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಜೀವನ ಕಳೆಯುವುದರ ಕುರಿತುನ ಚಿಂತಿಸಬೇಕು ಎಂದರು.

ಸರ್ವಜನಾಂಗದ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಕಂಕಣ ಬದ್ಧ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅಭಿಮತ

ಗದಗ: ದೇಶದ ಸೀಮಾ ಸುರಕ್ಷತೆ ಬಡತನ ನಿರ್ಮೂಲನೆ ಮತ್ತು ಸರ್ವಜನಾಂಗದ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಕಂಕಣ ಬದ್ಧವಾಗಿದ್ದು, ಕನಾಟಕ ಕೇಸರಿ ಜಗನ್ನಾಥ ಜೋಷಿ ಹಾಗೂ ಜನಸಂಘದ ಸಂಸ್ಥಾಪಕ ಆಶಯಗಳನ್ನು ಇಡೇರಿಸುವತ್ತ ಪ್ರಯತ್ನಿಸುತ್ತಿದೆ ಎಂದು ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹೇಳಿದರು.

ಅವರು ಜಿಲ್ಲೆಯ ನರಗುಂದ ಪಟ್ಟಣದ ತಾಲೂಕು ಕ್ರೀಡಾಗಣದಲ್ಲಿ ಜಗನ್ನಾಥ ಜೋಷಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಜಗನ್ನಾತ ಜೋಷಿ ಸ್ಮಾರಕ ಭವನ ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಶಿವಾಜಿ-ರಾಣಾಪ್ರತಾಪರ ಆದರ್ಶಗಳು ಬೇಕು

ಶಿವಾಜಿಮಹಾರಾಜ ಮತ್ತು ರಾಣಾಪ್ರತಾಪಸಿಂಹರ ತತ್ವಾದರ್ಶಗಳು ನಮ್ಮ ದೇಶಕ್ಕೆ ಅವಶ್ಯವಿದೆ. ಭಾರತ ದೇಶವನ್ನು ವಿಶ್ವಗುರು ಸ್ಥಾನದಲ್ಲಿ ಪ್ರತಿಷ್ಠಾಪಿಸಲು ನಾವೆಲ್ಲರೂ ಸಮರ್ಪಣಾಭಾವನದಿಂದ ಕಾರ್ಯಮಾಡಬೇಕಿದೆ. ಇದಕ್ಕೆ ಜಗನ್ನಾಥರಾವ್ ಜೋಷಿಯಂತಹ ಮಹಾನ್ ದೇಶಭಕ್ತರ ಆದರ್ಶಗಳು ನಮಗೆ ದಾರಿದೀಪವಾಗಲಿ ಎಂದರು.

ಜನಪ್ರಶಸ್ತಿ ಪಡೆಯಿರಿ

ನಮ್ಮ ಕಾರ್ಯಸಾಧನೆಗೆ ರಾಷ್ಟ್ರಪತಿಗಳು ಕೊಡುವ ಪ್ರತಿಷ್ಠಿತ ಪ್ರಶಸ್ತಿಗಳು ಬೇಕಿಲ್ಲ. ಬದಲಿಗೆ ಜನರೇ ನಮ್ಮ ವ್ಯಕ್ತಿ ಗುರುತಿಸಿ ನೀಡುವ ಬಿರುದುಬೇಕು. ಈ ನಿಟ್ಟಿನಲ್ಲಿ ಜಗನ್ನಾಥರಾಯರು ಕನಾಟಕದ ಕೇಸರಿ ಎಂದು ಬಿರುದು ಪಡೆದುಕೊಳ್ಳುವ ಮೂಲಕ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ. ಇಂತಹ ಮಹಾನ್ ನಾಯಕನ ಸ್ಮಾರಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.

ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ನೀಡುವವರು ಬೇಕಿತ್ತು. ಜೀವನದ ಕ್ಷಣ-ಕ್ಷಣ, ಶರೀರದ ಕಣಕಣ ದೇಶಕ್ಕಾಗಿ ಅರ್ಪಿಸುವವರು ಬೇಕಿತ್ತು. ಇಂತಹ ಮನೋಬಾವದ ಜಗನ್ನಾಥರಾವ್ ಜೋಷಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು. ಇಂತಹ ಅನೇಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಸ್ವತಂತ್ರ್ಯ ನಂತರ ನೆಹರು ನೇತೃತ್ವದ ಸರ್ಕಾರ ಜನರ ನಂಬಿಕೆಯನ್ನ ಉಳಿಸಿಕೊಳ್ಳಲಿಲ್ಲ ಎಂದರು.

ಜನಸಂಘದ ಸಂಸ್ಥಾಪಕರು ಜಗನ್ನಾಥರು

ದೇಶದಲ್ಲಿ ಜನಸಂಘವನ್ನು ಸ್ಥಾಪಿಸಿದ ಶಾಮಪ್ರಸಾದ ಮುಖರ್ಜಿಯವರನ್ನೊಳಗೊಂಡ ಹತ್ತು ಜನರ ತಂಡದಲ್ಲಿ ಜಗನ್ನಾಥ ಜೋಷಿಯವರು ಕೂಡ ಒಬ್ಬರಾಗಿದ್ದರು ಎಂಬುವುದೇ ಕನಾಟಕದ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ತಮ್ಮನ್ನೆ ಅರ್ಪಿಸಿಕೊಂಡವರು ಜಗನ್ನಾಥರ ಹೆಸರು ಕೇಳಿದರೆ ಇಂದಿಗೂ ಕೂಡ ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ಜನ ರೋಮಾಂಚಿತರಾಗುತ್ತಿದ್ದಾರೆ.

ಗೋವಾ ಸ್ವತಂತ್ರದ ರೂವಾರಿ

ಇಂದು ಗೋವಾ, ಭಾರತದೇಶದ ರಾಜ್ಯವಾಗಿದ್ದರೆ, ಅದರ ಹಿಂದಿನ ಕತೃತ್ವ ಶಕ್ತಿ ಜಗನ್ನಾಥರಾಗಿದ್ದಾರೆ. ೧೯೮೦ರ ದಶಕದಲ್ಲಿ ಗೋವಾ ರಾಜ್ಯವನ್ನು ಭಾರದೇಶಕ್ಕೆ ಸೇರಿಸಬೇಕೆಂದು ಹೋರಾಟ ಮಾಡಿದವರಲ್ಲಿ ಜಗನ್ನಾಥರಾವ ಜೋಷಿ ಅವರ ಹೆಸರು ಮುಂಚೂಣಿಯಲ್ಲಿದೆ. ಜನಸಂಘದ ನಾಯಕತ್ವ ವಹಿಸಿಕೊಂಡು, ಗಾಂಧಿ ಆದರ್ಶಗಳ ಮಾರ್ಗದಲ್ಲಿ ಗೋವರಾಜ್ಯಕ್ಕೆ ಸ್ವತಂತ್ರ್ಯ ಕೊಡಿಸುವ ಮೂಲಕ ಗೋವಾಸ್ವಾತಂತ್ರ್ಯದ ರೂವಾರಿಯಾದರು.

ಇಂದಿನ ದೇಶ ಅಇವೃದ್ಧಿಹೊಂದಲು ರೈತ ಕಲ್ಯಾಣವಾಗಬೇಕು. ಈ ನಿಟ್ಟಿನಲ್ಲಿ ಇಂದಿನ ಸರ್ಕಾರ ರೈತಪರ, ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜಗನ್ನಾಥ ಜೋಷಿ ಅವರ ಅಭೀವೃದ್ಧಿಪರ ಆದರ್ಶಗಳನ್ನು ಸಾಕಾರಗೊಳಿಸುತ್ತಿದೆ ಎಂದರು. ಜಗದೀಶ ಶೆಟ್ಟರ್,

ರಾಜ್ಯಪಾಲ ವಝುಭಾಯಿವಾಲಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಕೇಂದ್ರ ಸಚಿವರಾದ ಅನಂತಕುಮಾರ, ಜಿ.ಎಂ.ಸಿದ್ದೇಶ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಸಾಂಸದ ಪಿ.ಸಿ.ಗದ್ದಿಗೌಡ್ರ, ಶಾಸಕ ಬಿ.ಆರ್.ಯಾವಗಲ್, ವಿಪ ಸದಸ್ಯ ಎಸ್.ವಿ.ಸಂಕನೂರ, ಸ್ಮಾರಕ ಪ್ರತಿಷ್ಠಾನದ ಸದಸ್ಯರಾದ ಸಿ.ಸಿ.ಪಾಟೀಲ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಿ.ಬಿ.ಕುಕರ್ಣಿ, ನಂದಕುಮಾರ, ರಮೇಶಶೆಟ್ಟಿ, ಪರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ ಸೇರಿದಂತೆ, ಮಾಜಿ ಸಚಿವರು ಶಾಸಕರು, ಜನಪ್ರತಿನಿಧಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ವಿಭಾಗದ ಪ್ರಮುಖರು, ಇತರರು ಇದ್ದರು.

 

ಭಾರತೀಯ ಜನಸಂಘದ ಸಂಸ್ಥಾಪಕರಾದ ಶಾಮಪ್ರಸಾದ ಮುಖರ್ಜಿ ಅವರ ನಿಧನಹೊಂದಿದ ದಿನ ಜೂ.೨೩ ಆಗಿದ್ದು, ಜಗನ್ನಾಥ ಜೋಷಿ ಅವರ ಜನ್ಮದಿನಾಚರಣೆ ಕೂಡ ಜೂ.೨೩ ಆಗಿದ್ದು, ಒಂದೇ ವಿಚಾರಧಾರೆ ಇರ್ವರ ಮಹಾನ್ ನಾಯಕರ ವಿಶೇಷ ದಿನ ಒಂದೇ ಆಗಿದ್ದು ವಿಶೇಷ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Swayamsevaks cleaned the premises of the local Creamatorium in Mangaluru

Mon Jun 29 , 2015
Mangaluru June 28: RSS Swayamsevaks cleaned the premises of the local Creamatorium (Smashaan) at Moodushedde in Mangaluru as a part of Seva Sanghik on Sunday June 28, 2015.     email facebook twitter google+ WhatsApp