ನಾನು ಭಾಗವಹಿಸಿದ ಮೊದಲ ಸಂಘದ  ಸಭೆ, ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆನ್ನು ಶಾಶ್ವತವಾಗಿ ಬದಲಾಯಿಸಿತು.

ಅಂಕಿತ್ ಜೈನ್

image

(Symbolic image)
ಕೆಲವು ದಿನಗಳ ಹಿಂದೆ ದೆಹಲಿ ರಾಜ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನನಗೆ ದೊರೆಯಿತು. ಈ ಹಿಂದೆ ಭಾಜಪ ಸಂಯೋಜಿಸದ್ದ  ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಆದರೆ ಇದರ ಮೊದಲು ಆರೆಸ್ಸೆಸ್ ಸಭೆಗಳಿಗೆ ಎಂದೂ ಹೋಗಿರಲಿಲ್ಲ. ಈ ಸಭೆಯನ್ನು ಒಂದು  ತೆರೆದ ಮೈದಾನದಲ್ಲಿ ಆಯೋಜಿಸಿದ್ದರು. ಮೈದಾನದ ಕೆಲವು ಭಾಗಗಳು ಡೇರೆಗಳಿಂದ ತುಂಬಿದ್ದವು.
ಇಪ್ಪತ್ತು ದಿನಗಳ ದೀರ್ಘ ಅವಧಿಯ ಶಿಬಿರದಲ್ಲಿ ಸ್ವಯಂಸೇವಕರು ತಾವು ಕಲಿತ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಇದರ ನಂತರ ಆರೆಸ್ಸೆಸ್ಸಿನ ಹಿರಿಯ ಅಧಿಕಾರಿಗಳಾದ ಶ್ರೀ ರಾಮೇಶ್ವರ್ ಅವರ ಭಾಷಣ ಇತ್ತು. ಶ್ರೀ ರಾಮೇಶ್ವರ್ ಅವರು ಭಾಷಣಕ್ಕೆ ಎದ್ದು ನಿಂತಾಗ ಬಲವಾದ ಗಾಳಿ ಬೀಸಲು ಪ್ರಾರಂಭವಾಯಿತು. ಡೇರೆಯನ್ನು ಎಲ್ಲೆಡೆಯಿಂದಲೂ ಕಬ್ಬಿಣದ ಕಂಬಗಳಿಂದ ಕಟ್ಟಲಾಗಿತ್ತು.  ಆದರೆ ಗಾಳಿಯ ಒತ್ತಡದಿಂದ ಮರದ ಎಲೆಗಳಂತೆ ಅದು ಕಂಪಿಸಲು ಪ್ರಾರಂಭವಾಯಿತು. ಆ ಎಲ್ಲ ಕಂಬಗಳೂ ಅಲ್ಲಾಡಲು ಶುರುವಾದವು.  ಇವೆಲ್ಲ ವೇಗದ ಗತಿಯಲ್ಲಿ ಆದವು. ಆ ನುರಿತ ವ್ಯವಸ್ಥಾಪಕರಿಗೂ ಕೂಡ ಇದನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ. ಮತ್ತು ಹೆಚ್ಚಿನ ಸಂಖ್ಯೆಯ ಈ ಸ್ವಯಂಸೇವಕರು ತರಬೇತಿ ಪಡೆಯದ ಯುವಕರು !  ದೃಶ್ಯದ ಹೆದರಿಕೆಯಿಂದ ಈ ಪೆಂಡಾಲಿನಿಂದ ಓಡಿಹೋಗುವ ಯೋಚನೆಯೂ ಒಂದು ಬಾರಿ ಮೂಡಿತು.
ಪ್ರಬಲವಾದ ಗಾಳಿಯಿಂದಾಗಿ ಮುಖ್ಯ ಭಾಷಣಕಾರರು ಮಾತನಾಡಬೇಕಿದ್ದ ವೇದಿಕೆ ತುಂಬ ಅದುರುತ್ತಿತ್ತು. ಭಾಷಣಕಾರರು ತಮ್ಮ ಭಾಷಣವನ್ನು ಬಿಟ್ಟು ಸ್ಥಳದಿಂದ ಹೊರಟು ಹೋಗುವರು ಎಂದು ನನಗೆ ಖಾತ್ರಿಯಾಯಿತು.  ಯಾರು ಒಂದು ಕಾರ್ಯಕ್ರಮಕ್ಕೋಸ್ಕರ ತಮ್ಮ ಜೀವವನ್ನು ಒತ್ತೆ ಇಡುತ್ತಾರೆ  ? 
ಮುಂದಿನ ಕೆಲವು ಕ್ಷಣಗಳಲ್ಲಿ ನಡೆದ ವಿದ್ಯಮಾನಗಳು ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆನ್ನು ಶಾಶ್ವತವಾಗಿ ಬದಲಾಯಿಸಿತು.
ಸ್ವಯಂಸೇವಕರು ತ್ವರಿತವಾಗಿ ತಮ್ಮ ತಮ್ಮ ಸ್ಥಾನಗಳನ್ನು ತೆಗೆದುಕೊಂಡರು. ಕಂಬಗಳ ಹತ್ತಿರವಿದ್ದವರು  ಕಂಬಗಳನ್ನು ಬಿಗಿಯಾಗಿ ಹಿಡಿದುಕೊಂಡರು.  ಮತ್ತು  ಅವರು ಗಾಳಿಯ ಒತ್ತಡ ಕಡಿಮೆ ಮಾಡಲು ಎಲ್ಲ ಡೇರೆಗಳನ್ನು ಕಂಬಗಳಿಂದ ಒಂದುಗೂಡಿಸಿದರು. ವೇದಿಕೆ ಮತ್ತೆ ಅಲ್ಲಾಡಲಾಗದಂತೆ ದೃಢಪಡಿಸಲು ಸುಮಾರು 20 – 25 ಮಂದಿ ಸ್ವಯಂಸೇವಕರು ವೇದಿಕೆಗೆ ಧಾವಿಸಿ ಅಲ್ಲಿನ ಪ್ರತಿ ಕಂಬಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಸಮಾರಂಭ  ಸುಸೂತ್ರವಾಗಿ ನೆರವೇರುವಂತೆ ಆರೇಳು ಸ್ವಯಂಸೇವಕರು ವೇದಿಕೆಗೆ ಹೊಂದಿಕೊಂಡಿರುವ ಕಂಬಗಳನ್ನು ಹಿಡಿದುಕೊಂಡರು.  ಡೇರೆಗಳನ್ನು ಮೈದಾನಕ್ಕೆ ತಂದ ಸಿಬ್ಬಂದಿಯವರು  ಅಲ್ಲಿ ಯಾರೊಬ್ಬರೂ ಇರಲಿಲ್ಲ. ಸ್ವಯಂಸೇವಕರೇ ಅಲ್ಲಿದ್ದ ಎಲ್ಲ ಕಂಬಗಳನ್ನು ಹಿಡಿದುಕೊಂಡು ಕಾರ್ಯಕ್ರಮವು ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು. ಇವೆಲ್ಲವೂ ಕೆಲವು ನಿಮಿಷಗಳಲ್ಲೇ ನಡೆದುಹೋದವು.
ಆದರೆ, ನನಗೆ ಅನಿಸಿದ ಅತಿ ಚಮತ್ಕಾರದ ಸಂಗತಿಯೆಂದರೆ ಮುಖ್ಯ ಭಾಷಣಕಾರರ  ನಡವಳಿಕೆ. ನದಿಯಲ್ಲಿ ಅಲ್ಲಾಡುವ ದೋಣಿಯಂತೆ ವೇದಿಕೆಯು ಕಂಪನಗೊಂಡಿತ್ತು. ವೇದಿಕೆಯ ಮೇಲಿದ್ದ ಒಂದು ಕಂಬವು ಬದಿಗೆ ಬಂದಿದ್ದು , ಭಾಷಣಕಾರರ ಜೀವಕ್ಕೇ ಅಪಾಯಕರವಾಗಿತ್ತು.  ಆದರೆ ಅವರು ಏನೂ ಆಗದಿರುವಂತೆ ನಿಶ್ಚಲವಾಗಿದ್ದರು. ಅವರ ಮುಖದಲ್ಲಿ ಮತ್ತು ಅವರ ಮಾತಿನಲ್ಲಿ ಯಾವ ಭಯದ ಸುಳಿವೂ ಇರಲಿಲ್ಲ. ಗಾಳಿಯ ಆರ್ಭಟದ ಬಗ್ಗೆ ಒಂದುಸಲವೂ ಉಲ್ಲೇಖಿಸದೆ,  ನೀಡಿದ ಅವಧಿಯಂತೆ ಪೂರ್ಣ 40 ನಿಮಿಷಗಳ ಕಾಲ ಮಾತನಾಡಿದರು.
ಸಭೆಯು ಸುಗಮವಾಗಿ ನಡೆಯಲೆಂದು ಈ ಯುವ ಸ್ವಯಂಸೇವಕರು ತೆಗೆದುಕೊಂಡ ಕ್ರಮಗಳು ನಿಜಕ್ಕೂ ಮೂಕವಿಸ್ಮಿತವಾಗಿತ್ತು. ಇಬ್ಬರು ಮೂವರು ಸ್ವಯಂಸೇವಕರು ಕಂಬಗಳಿಗೆ ಸುತ್ತುಹಾಕಿಕೊಂಡಿದ್ದರು.  ಕೆಲವರು ಕಂಬಗಳನ್ನೂ ಹತ್ತಿ ಅವು ಮತ್ತೆ ಅಲ್ಲಾಡದಂತೆ ಮಾಡಿದ್ದರು. ಮುಖ್ಯ ಭಾಷಣಕಾರರ ಹಿಂಬದಿಯಲ್ಲಿದ್ದ ಹಿರಿಯ ಸ್ವಯಂಸೇವಕರೂಬ್ಬರು ಭಾಷಣಕಾರರ ಮೇಲೆ ಉರುಳಿ ಅಪಾಯವಾಗದಂತೆ ಮಾಡಲು ಸತತವಾಗಿ ಮೇಲೆಯೇ ದೃಷ್ಟಿಯಿಟ್ಟಿದ್ದರು. ಅವರು ನಿಂತಿದ್ದ ವೇದಿಕೆಯೇ ಜೋರು ಗಾಳಿಯಿದಾಗಿ ಅಲ್ಲಾಡುತಿತ್ತು. 20-25 ಸ್ವಯಂಸೇವಕರು ಅದನ್ನು ಹಿಡಿದಿದ್ದರು. ಭಾಷಣಕಾರರು ಹಿಂದೆ ಇದ್ದ ಕಾರ್ಯಕರ್ತರ ಮೇಲೆ ಭರವಸೆ ಇಟ್ಟಿದ್ದರು. ಹಿಂದೆ ಇದ್ದ ಕಾರ್ಯಕರ್ತ ಯುವ ಸ್ವಯಂಸೇವಕರ ಮೇಲೆ ಭರವಸೆ ಇಟ್ಟಿದ್ದರು.  ಎಂತಹ ಪರಸ್ಪರ ನಂಬಿಕೆ !!
ಇಂತಹ ಗಾಳಿಯ ಆರ್ಭಟದಲ್ಲಿ ಮುಖ್ಯ ಭಾಷಣಕಾರರು ಹೇಳಿದರು, ” ಸಂಘ ಒಂದು ಮನುಷ್ಯರನ್ನು ನಿರ್ಮಾಣ ಮಾಡುವ  ಒಕ್ಕೂಟ ” ಎಂದು. ಇದನ್ನು ನಾನು ಹಲವಾರು ಬಾರಿ ಕೇಳಿದ್ದೆ.  ಆದರೆ,  ಎತೆಂತಹ ವ್ಯಕ್ತಿಗಳನ್ನು ಸಂಘ ಸೃಷ್ಟಿ ಮಾಡುತ್ತದೆ ಎಂದು ನನಗೆ ಆ ದಿನ ಮನದಟ್ಟಾಯಿತು.  ಭಾಷಣಕಾರರು ದೊಡ್ಡ ಆರೆಸ್ಸೆಸ್ ಅಧಿಕಾರಿಗಳು. ಅವರಿಗೆ ಯಾರು ಯಾರು ವೇದಿಕೆಯನ್ನು ರಕ್ಷಿಸುತ್ತಿದ್ದಾರೆ ಎಂಬುದು ತಿಳಿದಿರುವದಿಲ್ಲ ಎಂಬುದು ನನಗೆ ಗೊತ್ತು. ಆದರೆ ಅವರ ಮೇಲೆ ಪೂರ್ಣ ಭರವಸೆ ಇಟ್ಟಿದ್ದರು, ತಮ್ಮ ಜೀವವನ್ನೇ ಅವರ ಕೈಯಲ್ಲಿ ಇಟ್ಟಂತೆ.
ನಾನು  ಕೆಲವು ಆರೆಸ್ಸೆಸ್ ವ್ಯಕ್ತಿಗಳಿಂದ ಕೇಳಿದ್ದ  ಚಾರಿತ್ರ್ಯ ನಿರ್ಮಾಣ ಎಂಬುದು ಬಹುಷಃ ಇದೇ.  ನನ್ನ ಪ್ರಕಾರ ಇಂತಹ ಸಣ್ಣ ವಿಷಯಗಳು ಈ ಸಂಘವನ್ನು ಉಚ್ಚ  ಸ್ಥಾನಕ್ಕೇರಿಸುತ್ತದೆ.  ಸಂಘದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ಮೊದಲು ನಾವು ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಹೋಗಬೇಕು. ಅವರ ಸಮರ್ಪಣೆ ನಿಮಗೆ ಹಿಡಿಸುವದೆಂಬ ನಂಬಿಕೆ ನನಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ  ನನ್ನ ಅಭಿನಂದನೆಗಳು.
Translation of Ankit Jain’s English article on his first experience at an RSS Event (Original – http://www.opindia.com/2016/06/my-first-visit-to-an-rss-event-changed-my-perception-about-rss/) Translated by Krishna Ravi Kumar.