‘ಪ್ರಕೃತಿ ಸ್ನೇಹಿ ಅಲ್ಲ, ಪ್ರಕೃತಿ ಭಕ್ತರಾಗೋಣ’: ಹಗರಿಬೊಮ್ಮನಹಳ್ಳಿಯ ಸಂಘ ಶಿಕ್ಷಾ ವರ್ಗಗಳ ಸಮಾರೋಪದಲ್ಲಿ ದತ್ತಾತ್ರೇಯ ವಜ್ರಳ್ಳಿ

ಹಗರಿಬೊಮ್ಮನಹಳ್ಳಿ ಮೇ 7, 2016: “ಭೋಗವಾದಿ  ಜೀವನ  ಶೈಲಿಯಿಂದಾಗಿ  ನಾವು ಇಂದು ತಾಯಿ ಭೂಮಿಯ  ಜ್ವರಕ್ಕೆ  ಕಾರಣರಾಗಿದ್ದೇವೆ.  ಇಂದಿನ ಬರಗಾಲ,  ಬಿಸಿಲು, ಇವೆಲ್ಲವೂ ಇದರ ಫಲಗಳೇ ಆಗಿವೆ. ಜೀವನದಲ್ಲಿ  ಸರಳತೆ, ಮರ,ಗಿಡ ಅರಣ್ಯಗಳನ್ನು ಬೆಳೆಸುವ  ಮೂಲಕ ನಾವು ಭೂಮಿಗೆ  ತಂಪೆರೆಯೋಣ” ಎಂದು ಬಳ್ಳಾರಿ  ವಿಭಾಗ ಪ್ರಚಾರಕ ಮತ್ತು  ಸಹ ಪ್ರಾಂತ  ವ್ಯವಸ್ಥಾ ಪ್ರಮುಖರಾದ  ದತ್ತಾತ್ರೇಯ  ವಜ್ರಳ್ಳಿ ಅವರು ಕರೆ ನೀಡಿದರು.

ರಾಷ್ಟ್ರೀಯ  ಸ್ವಯಂಸೇವಕ ಸಂಘದ  ಕರ್ನಾಟಕ ಉತ್ತರ ಪ್ರಾಂತದ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ ಹಾಗೂ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ದ್ವಿತೀಯ ವರ್ಷದ ಸಂಘ  ಸಂಘ ಶಿಕ್ಷಾ ವರ್ಗಗಳ  ಸಮಾರೋಪ ಸಮಾರಂಭದ  ಮುಖ್ಯ ಭಾಷಣಕಾರರಾಗಿ ದತ್ತಾತ್ರೇಯ ವಜ್ರಳ್ಳಿ ಅವರುಮಾತನಾಡಿದರು. 

Dattatreya Vajralli, RSS Pranth Sah Vyavastha Pramukh o Karnataka Uttara addressed at Hagaribommanahalli
Dattatreya Vajralli, RSS Pranth Sah Vyavastha Pramukh o Karnataka Uttara addressed at Hagaribommanahalli

ಹೆಚ್ಚುತ್ತಿರುವ  ಜನ, ಜಾನುವಾರುಗಳ ಬಿಸಿಯುಸಿರಿನಿಂದ, ಎ.ಸಿ.ಫ್ರೀಜ್‌ಗಳು ಹೊರ ಸೂಸುವ  ವಿಷ ಅನಿಲಗಳಿಂದ ನಮ್ಮ ವಾಹನಗಳ ಹೊಗೆ  ದೂಳುಗಳಿಂದ ಭೂಮಿಯ  ಬಿಸಿ  ಏರುತ್ತಿದೆ.  ಇದು ಮನುಕುಲದ ನಾಶಕ್ಕೆ  ಕಾರಣವಾಗಲಿದೆ. ಇದಕ್ಕೆ ಇರುವ ಪರಿಹಾರ ಗಿಡಮರಗಳನ್ನು  ಬೆಳೆಸುವುದು  ಸರಳ ಜೀವನ ನಡೆಸುದೇ ಆಗಿದೆ.

ಪ್ರತಿಯೋಬ್ಬರು ವರ್ಷಕ್ಕೆ ಎರಡು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಕೆಲವೇ ವರ್ಷಗಳಿಂದ  ಈ ಭೂಮಿ ಸುಜಲಾಂ ಸುಫಲಾಂ ಆಗುವುದು  ನಿಶ್ಚಿತ ಎಂದು ಹೇಳಿದರು.

ಇಂದು ನಮ್ಮ ಮನೆ ಮನೆಯಾಗಿ ಉಳಿದಿಲ್ಲ ಎಂದು ಹೇಳಿದ ಅವರು, ನಾಡಿನ ಪ್ರತಿಯೊಬ್ಬರು  ತಮ್ಮ ಮಕ್ಕಳನ್ನು ನಾಡಿಗೆ ಆಸ್ತಿಯಾಗುವ ರೀತಿಯಲ್ಲಿ ಮಕ್ಕಳನ್ನು ತಯಾರು ಮಾಡಬೇಕು. ಅದರಂತೆ ಪ್ರತಿ ಮನೆಯು ಆದರ್ಶ ಹಿಂದು ಮನೆಗಳಾಗಬೇಕು. ಅದರಂತೆ ಈ ಮಾತೃಭೂಮಿಯಿಂದ ಎಲ್ಲವನ್ನೂ  ಪಡೆದು ಬೆಳೆಯುವ ನಾವು ಮಾತೃಭೂಮಿಗೆ ಜೈಕಾರ ಹೇಳೋಣ ಎಂದು ಹೇಳಿದ ಅವರು, ಪ್ರತಿಯೊಂದು ಗ್ರಾಮಗಳ, ಊರು, ನಗರ ಮತ್ತು ಜೋಪಡಿಗಳಿಂದ ಭಾರತ ಮಾತೆಗೆ  ಘೋಷಣೆಗಳು ಮೊಳಗಬೇಕಾಗಿದೆ ಎಂದರು.

ರಾಜಕೀಯ ಕೃಪಾ ಪೋಷಿತರಾಗಿ  ಜೀವನ ನಡೆಸುತ್ತಿರುವ ಸುಳ್ಳು ಜಾತ್ಯಾತೀತ ವಾದಿಗಳು ತಮ್ಮ  ಜೀವನ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂಬ ಕಾರಣಕ್ಕೋಸ್ಕರ  ಅಸಹಿಷ್ಣುತೆಯ  ಕೂಗನ್ನು  ಎಬ್ಬಿಸುತ್ತಿದ್ದಾರೆ.

ಮಂಗಳನ ಅಂಗಳಕ್ಕೆ  ಹೆಜ್ಜೆ ಇಟ್ಟ ನಾವು ನಮ್ಮ ಮನೆಯಂಗಳಕ್ಕೆ  ನಮ್ಮದೇ ಬಂಧುಗಳನ್ನು ಕರೆದು ಕೊಳ್ಳದೇ  ಇರುವ ನಾವು ಕಾಲದಲ್ಲಿದ್ದೇವೆ. ಸೃಷ್ಠಿಯ  ಕಣಕಣಗಳಲ್ಲೂ ಭಗವಂತನನ್ನು ಕಂಡ ನಾವು ಇಂದು  ಜಾತಿ ಬೇದ  ಮೇಲು ಕೀಳು ಆಚರಣೆಗಳನ್ನು ಮಾಡುತ್ತಿರುವುದು ಭಗವಂತನಿಗೆ  ಮಾಡುವ  ಅಪಚಾರ  ಎಂಬುದನ್ನು  ಮರೆಯಬಾರದು ಎಂದರು.

ನಂತರ  ಕೃಷಿ ವಿಜ್ಞಾನಿ  ಹಾಗೂ ಧಾರವಾಡ  ಕೃಷಿ  ವಿಶ್ವವಿದ್ಯಾಲಯ  ನಿವೃತ್ತ ಪ್ರಾಧ್ಯಾಪಕ  ಡಾ. ವಿ.ಎಸ್. ವೀರಣ್ಣ ಮಾತನಾಡಿ, ಇಂದು ನಡೆಯುವ  ಬರ ಪ್ರಕೃತಿ  ನೀಡುವ ಬರವಲ್ಲ. ಆದರೆ ನಾವು ಪರಿಸರ ನಾಶದಿಂದ  ಬರ ಆವರಿಸಿ ಪ್ರಕೃತಿ ವಿಕೋಪಗಳ  ಹೆಚ್ಚಾಗುತ್ತಿವೆ.

ಅಮೇರಿಕ ಅರಣ್ಯ ತಜ್ಷರ ಪ್ರಕಾರ ದೇಶಲ್ಲಿ ಶೇ.35 ರಷ್ಟು ಕಾಡು ಇರಬೇಕು ಎಂದು  ಹೇಳುತ್ತಾರೆ. ಆದರೆ ಭಾರತದಲ್ಲಿ ಶೇ. 12ರಷ್ಟು ಕಾಡು, ಶೇ. 2ರಷ್ಟು ಕೃಷಿ  ಇದ್ದು  ಶೇ.೧೮ರಷ್ಟು  ಜನಸಂಖ್ಯೆ  ಇದೆ ಇದರಿಂದ  ದೇಶದಲ್ಲಿ ಪ್ರಕೃತಿ ವಿಕೋಪ ಹೆಚ್ಚಾಗುತ್ತಾ ಸಾಗಿದೆ ಎಂದು  ಹೇಳಿದರು.

ಅವರು  ಅರಣ್ಯ ನಾಶ ಮಾಡುವ ಉದ್ದೇಶದಿಂದ  ಕಾಡಿನ ಕಡೆಗೆ ಹೋಗುತ್ತಿದ್ದರೆ  ಅದೇ ಪರಿಸರ  ನಾಶದಿಂದ  ಪ್ರಾಣಿಗಳು ಊರೋಳಗೆ  ಲಗ್ಗೆ ಇಟ್ಟಿವೆ. ಇದಕ್ಕೆಲ್ಲ ಪರಿಸರ ನಾಶವೇ ಕಾರಣವಾಗಿದೆ ಆದ್ದರಿಂದ  ಪ್ರತಿಯೋಬ್ಬರು  ಭೂಮಿಯಲ್ಲಿ  ನೀರು ಹಿಂಗುವಂತೆ ಮಾಡಬೇಕು. ಕೆರೆಗಳ ಅಭಿವೃದ್ದಿ ನೀರಿನ ಸಮಸ್ಯೆ  ಹಾಗೂ  ಬರದ ಸಮಸ್ಯೆ  ನಿಬಾಹಿಸುವಲ್ಲಿ ಸಾಧ್ಯ ಎಂದು ಹೇಳಿದರು.

ಪ್ರಥಮ ವರ್ಷ ವರ್ಗಾಧಿಕಾರಿ  ಸಂಗನಗೌಡ ಪಾಟೀಲ್, ದ್ವಿತೀಯ ವರ್ಷ ವರ್ಗಾಧಿಕಾರಿ ಶಿವರಾಜ  ಹಲಶೇಟ್ಟಿ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ  ಭೇಂಡೆ,  ಪ್ರಾಂತ  ಸಂಘಚಾಲಕ ಖಗೇಶನ್  ಪಟ್ಟನಶೆಟ್ಟಿ,  ಪ್ರಾಂತ  ಸಹ ಸಂಘಚಾಲಕರಾದ ಅರವಿಂದರಾವ್ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli
Sangh Shiksha Varg held at Hagaribommanahalli

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Sarasanghachalak Mohan Bhagwat arrives in Indore; meets Bhaiyyu Maharaj

Wed May 11 , 2016
Indore May 11, 2016: RSS Sarasanghachalak Mohan Bhagwat arrived in Indore today. Mohan Bhagwat to attend inaugural of International Religious Conference on May 12, 2016 at Ninora Village to Ujjain, tomorrow. Mohan Bhagwat was welcomed by Madhya Pradesh Chief Minister Shivaraj Sing Sing Chouhan at Indore. Mohan Bhagwat met spiritual […]