ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನ ಶೈಕ್ಷಣಿಕ ಯೋಜನೆ ’ತಪಸ್’ಗೆ ರಾಜ್ಯದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

tapas_logo_2016

ಬೆಂಗಳೂರಿನಲ್ಲಿರುವ  ರಾಷ್ಟ್ರೋತ್ಥಾನ ಪರಿಷತ್  ತಪಸ್ – ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 30-40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ಮತ್ತು ಐ.ಐ.ಟಿ. ಪ್ರವೇಶ ನೀಡುತ್ತದೆ. ಅಲ್ಲದೇ ಉಚಿತ ಊಟ ಮತ್ತು ವಸತಿಯನ್ನು ವಿದ್ಯಾರ್ಥಿ ನಿಲಯದಲ್ಲಿ ಕಲ್ಪಿಸುತ್ತದೆ.
ಉಚಿತ ವಿದ್ಯಾರ್ಥಿ ನಿಲಯ: ಕ್ಷೇಮಕರ, ಸ್ವಚ್ಛ ಮತ್ತು ಆರೋಗ್ಯದಾಯಕ ಸಸ್ಯಾಹಾರಿ ಆಹಾರವನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಸೌಕರ್ಯ: ತರಗತಿಗಳು, ಪ್ರಯೋಗಾಲಯಗಳು ಮತ್ತು ಸುಸಜ್ಜಿತ ಗ್ರಂಥಾಲಯ ಉತ್ತಮವಾಗಿ ವಿನ್ಯಾಸಗೊಂಡಿದೆ ಮತ್ತು ಕಠಿಣ ಪರಿಶ್ರಮದಿಂದ ಶ್ರೇಷ್ಠರೆನಿಸಲು ಸ್ಫೂರ್ತಿ ನೀಡುವಂತಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಒದಗಿಸಲಾಗುವುದು. ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನ ಮತ್ತು ಬೇಸ್‌ನ ನುರಿತ ಉಪನ್ಯಾಸಕರುಗಳು ತರಬೇತಿ ನೀಡುತ್ತಾರೆ.
ಈ ವಿದ್ಯಾರ್ಥಿಗಳಿಗೆ IIT ಪ್ರವೇಶ ಪರೀಕ್ಷೆಯ ತಯಾರಿ ನಡೆಸಲು ತರಬೇತಿ ನೀಡುವುದರ ಮೂಲಕ ಬೇಸ್ ಸಹಕರಿಸುತ್ತದೆ.
ಅರ್ಹತೆಗಳು
ಪ್ರಸ್ತುತ ಸಾಲಿನಲ್ಲಿ SSLC/10ನೇ ತರಗತಿಯ ಪರೀಕ್ಷೆ ಬರೆಯುವವರಾಗಿರಬೇಕು.
9ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
ಪೋಷಕರ ವಾರ್ಷಿಕ ವರಮಾನ ರೂ. 1,50,000 (ಒಂದು ಲಕ್ಷ ಐವತ್ತು ಸಾವಿರ) ಮೀರಿರಬಾರದು.
ಆಯ್ಕೆಯಾದರೆ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬೆಂಗಳೂರಿಗೆ ತೆರಳಲು ಸಿದ್ಧರಿರಬೇಕು.
’ತಪಸ್’ ಪ್ರಕಲ್ಪ ಬಾಲಕ ವಿದ್ಯಾರ್ಥಿಗಳಿಗೆ ಮಾತ್ರ
ಆಯ್ಕೆ ವಿಧಾನ
ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು
ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಕೆಲವು ನಗರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು
ಪರೀಕ್ಷಾ ದಿನಾಂಕ : 25 ಡಿಸೆಂಬರ್, 2016
ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ
ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಮೌಖಿಕ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ನೀಡಲಾಗುವುದು
ಅರ್ಜಿ ಸಲ್ಲಿಕೆ ಹೇಗೆ?
ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ತಪಸ್‌ನ ಅಂತರ್ಜಾಲ ತಾಣ www.tapasedu.org ಭೇಟಿ ಕೊಟ್ಟು ಡೌನ್‌ಲೋಡ್ ಮಾಡಿಕೊಂಡು ಅವಶ್ಯಕ ವಿವರಗಳನ್ನು ಭರ್ತಿ ಮಾಡಿ ಮುಖ್ಯೋಪಾಧ್ಯಯರ ಸಹಿ ಪಡೆದು ತಪಸ್ ಪ್ರಕಲ್ಪಕ್ಕೆ ಕಳುಹಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 30, 2016 (ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಅಂತರ್ಜಾಲವನ್ನು ತಪ್ಪದೇ ನೋಡುವುದು.)

ಅರ್ಜಿ ಸಲ್ಲಿಸಬೇಕಾದ ವಿಳಾಸ: ಸಂಯೋಜಕರು, ‘ತಪಸ್’ ಪ್ರಕಲ್ಪ
ರಾಷ್ಟ್ರೋತ್ಥಾನ ಪರಿಷತ್ ಕೇಶವಶಿಲ್ಪ ಕೆಂಪೇಗೌಡನಗರ, ಬೆಂಗಳೂರು-೫೬೦ ೦೧೯
ದೂರವಾಣಿ: 080-26612652, 94812 01144
ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ವೆಬ್‌ಸೈಟ್ www.tapasedu.org  ನಲ್ಲಿ ಪ್ರಕಟಿಸ?ಗುವುದು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

JAGRUTHI, 2day conference of Professional College students held at Kochi, RSS Sarasanghachalak Bhagwat addressed valedictory

Tue Sep 27 , 2016
Kochi, Kerala September 24/25, 2016: JAGRUTHI, a two-day conference of professional college students held at Bhaskareeyam of Kochi in Kerala. Nearly 1600 students participated in the conference. RSS Sarasanghachalak Mohan B hagwat delivered then valedictory address. Madhu S. Nair, Chairman and MD of Cochin Shipyard Ltd inaugurated the conference. Attappadi […]