ರಾಷ್ಟ್ರೀಯ ಸ್ವಯಂಸೇವಕ ಸಂಘ

ಕೇಶವ ಕುಂಜ, ಝಂಡೇವಾಲನ್, ದೇಶಬಂಧು ಗುಪ್ತಾ ಮಾರ್ಗ, ನವದೆಹಲಿ-110055

ಪ್ರಕಟಣೆ:

ಹೆಚ್ಚಿನ ಮೌಲ್ಯದ ಚಲಾವಣಾ ನೋಟುಗಳ ಅಪನಗದೀಕರಣ ಕುರಿತಂತೆ ಡಾII ಮನಮೋಹನ ವೈದ್ಯರವರು ನೀಡಿದ ಹೇಳಿಕೆ.

ಹೆಚ್ಚಿನ ಮೌಲ್ಯದ ಚಲಾವಣಾ ನೋಟುಗಳನ್ನು ಅಪನಗದೀಕರಣಗೊಳಿಸಲು ಭಾರತ ಸರ್ಕಾರವು ಕೈಗೊಂಡ ನಿರ್ಧಾರವು ದೇಶದ ಹಿತಕ್ಕೆ ಪೂರಕವಾಗಿದೆ ಮತ್ತು ದೇಶದಲ್ಲಿ ಸ್ವಚ್ಛ ಹಾಗೂ ಪಾರದರ್ಶಕ ವಿತ್ತೀಯ ವ್ಯವಹಾರ ಮತ್ತು ರೂಢಿಗಳನ್ನು ಸ್ಥಾಪಿಸುವ ಪ್ರಾಮಾಣಿಕ ಉದ್ಧೇಶವನ್ನು ಹೊಂದಿದೆ. ಎಲ್ಲ ಕಡೆ ಇದರ ಪರಿಣಾಮ ಗೋಚರವಾಗತೊಡಗಿದೆ.

ದೇಶದಲ್ಲಿನ ಎಲ್ಲ ರಾಷ್ಟ್ರವಿರೋಧಿ, ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ಒಮ್ಮೆಲೆ ಸ್ಥಗಿತಗೊಂಡಂತೆ ಕಂಡುಬರುತ್ತಿವೆ, ದೀರ್ಘಕಾಲದ ನಂತರ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಸ್ಥಿತಿ ಪುನರ್‌ಸ್ಥಾಪನೆಗೊಂಡಿದೆ.

ದೇಶದ ಅರ್ಥವ್ಯವವಸ್ಥೆಯನ್ನು ಸುರಕ್ಷಿತ ಮತ್ತು ಗತಿಶೀಲಗೊಳಿಸುವ ಸಲುವಾಗಿ ವಿತ್ತೀಯ ಸಮಗ್ರತೆ ಮತ್ತು ಹೊಣೆಗಾರಿಕೆಗೆ ಸಂಭಂಧಿಸಿದ ಈ ಹಠಾತ್ ನಿರ್ಧಾರದಿಂದ ಆರಂಭದಲ್ಲಿ ಸಾಮಾನ್ಯ ಜನರು ಸ್ವಲ್ಪ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದ್ದು ಸಹಜವೇ ಆಗಿದೆ.

ತಾತ್ಕಾಲಿಕ ಆದರೆ ಅನಿವಾರ್ಯವಾದ ಅನಾನುಕೂಲತೆಗಳ ಹೊರತಾಗಿಯೂ ಈ ಘನ ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ನಾವು ನಾಗರಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಭಾರತದ ದೇಶಪ್ರೇಮಿ ನಾಗರಿಕರು ದೇಶದ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರದೊಂದಿಗೆ ಸಹಕರಿಸುತ್ತಾರೆಂದು ನಮಗೆ ಸಂಪೂರ್ಣ ವಿಶ್ವಾಸವಿದೆ.

22, ನವಂಬರ್ 2016

ಡಾII ಮನಮೋಹನ ವೈದ್ಯ

ಅಖಿಲ ಭಾರತೀಯ ಪ್ರಚಾರ ಪ್ರಮುಖ.

 www.samvada.org