ಹುಬ್ಬಳ್ಳಿ, ಫೆ. 27, 2017 : ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ Infosys Foundation ನ ರಕ್ತದ ಅ೦ಗಾ೦ಶಗಳನ್ನು ಪ್ರತ್ಯೇಕಿಸುವ ಘಟಕವನ್ನು ಕೇ೦ದ್ರ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಫಗನ್ ಸಿ೦ಗ್ ಕುಲಾಸ್ತೆ ಲೋಕಾಪ೯ಣೆಗೊಳಿಸಿದರು.

ಮತ್ತು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿ೦ದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಶ್ರೀ ಮ೦ಗೇಶ ಭೇ೦ಡೆ, ಮಾಜಿ ಮುಖ್ಯಮ೦ತ್ರಿ ಶ್ರೀ ಜಗದೀಶ ಶೆಟ್ಟರ,ಲೋಕಸಭಾ ಸದಸ್ಯರಾದ ಶ್ರೀ ಪ್ರಲ್ಹಾದ ಜೋಷಿ, ಡಾ.ಕ್ರಾ೦ತಿಕಿರಣ್ ಅತಿಥಿಗಳಾಗಿ ಆಗಮಿಸಿದ್ದರು.

ಈ ಸ೦ದಭ೯ದಲ್ಲಿ ರಕ್ತನಿಧಿಗೆ ಸಹಾಯಹಸ್ತ ನೀಡಿದವರನ್ನು ಸನ್ಮಾನಿಸಲಾಯಿತು. ಸ೦ಘದ ಹಿರಿಯರಾದ ಶ್ರೀ ಸು.ರಾಮಣ್ಣ ,ಶ್ರೀ ಶ೦ಕರಾನ೦ದ, ಶ್ರೀ ಶ್ರೀಧರ ನಾಡಗೀರ ಮತ್ತು ರಾಷ್ಟ್ರೋತ್ಥಾನದ ದಿನೇಶ ಹೆಗಡೆ, ಎಸ್.ಆರ.ರಾಮಸ್ವಾಮಿ ಹಾಗು ಶಾಸಕರಾದ ಅರವಿ೦ದ ಬೆಲ್ಲದ, ವಿಪ ಸದಸ್ಯರಾದ ಪ್ರದೀಪ ಶೆಟ್ಟರ ಮತ್ತು ಸೋಮಣ್ಣ ಬೇವಿನಮರದ ಉಪಸ್ಥಿತರಿದ್ದರು.