ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಜರುಗಿತು.
ಮಡಿಕೇರಿ ಜಿಲ್ಲಾಡಳಿತ ಭವನದೆದುರು, ಸೋಮವಾರಪೇಟೆ ತಾಲ್ಲೂಕು ಕಛೇರಿ ಎದುರು, ವಿರಾಜಪೇಟೆ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಯಿತು.