ಟಿಪ್ಪು ಜಯಂತಿಗೆ ವಿರೋಧ : ಮಂಥನ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ, ಅಡ್ಡಂಡ ಕಾರ್ಯಪ್ಪ

ತುಮಕೂರು, ೩೧ ಅಕ್ಟೋಬರ್ ೨೦೧೭: ಮಂಥನ ವೇದಿಕೆಯಲ್ಲಿ ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ‘ಟಿಪ್ಪುವಿನ ನೈಜ ಸ್ವರೂಪ’ ವಿಷಯದ ಬಗ್ಗೆ ಲೇಖಕರಾದ ಶ್ರೀಯುತ ಅದ್ದಂಡ ಕಾರ್ಯಪ್ಪ ಮತ್ತು ಸಂಸದ ಪ್ರತಾಪ ಸಿಂಹ ಚಿಂತಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು.

File photo of MP Sri Pratap Simha

ಕನ್ನಡ ವಿರೋಧಿಯಾಗಿದ್ದ ಟಿಪ್ಪು ತನ್ನ ಆಡಳಿತಾವಧಿಯಲ್ಲಿಯೇ ವಾಡಿಕೆಯಲ್ಲಿದ್ದ ಕನ್ನಡ ಪದಗಳನ್ನು ನಿಲ್ಲಿಸಿ ಪರ್ಶಿಯಾ ಭಾಷೆಯ ಪದಗಳನ್ನು ಹೇರಿದ್ದಾನೆ. ಅಲ್ಲದೇ ನಮ್ಮ ಸ್ಥಳಗಳ ಹೆಸರುಗಳನ್ನು ಪರ್ಶಿಯಾ ಭಾಷೆಯ ಹೆಸರುಗಳಾಗಿ ಬಲವಂತವಾಗಿ ಮಾರ್ಪಡಿಸಿದ ಟಿಪ್ಪುವಿಗೇಕೆ ಜಯಂತಿಯ ಸಂಭ್ರಮ ಎಂದು ಪ್ರತಾಪ್ ಸಿಂಹ ಪ್ರಶ್ನೆಸಿದರು. ಅಬ್ಬಕ್ಕ, ಓಬವ್ವ, ಚೆನ್ನಮ್ಮರನ್ನು ಅವರು ತೋರಿದ ಶೌರ್ಯಕ್ಕಾಗಿ ಆರಾಧಿಸುತ್ತೇವೆ. ಆದರೆ ಆ ಶೌರ್ಯವು ಟಿಪ್ಪುವಿನಲ್ಲಿ ಲೋಪವಾಗಿತ್ತು ಎಂದು ಪ್ರತಾಪ್ ನುಡಿದರು.
ಇಸ್ಲಾಮಿನಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲದಿದ್ದರೂ, ಟಿಪ್ಪುವಿನ ಹೆಸರಿನಲ್ಲಿ ಜಯಂತಿಯನ್ನು ಆಚರಿಸಿವುದು ಎಷ್ಟು ಸರಿ? ಹಿಂದು ಸಂಸ್ಕೃತಿಯ ಮೇಲೆ ದೌರ್ಜನ್ಯ ಎಸಗಿದವನನ್ನು ವೈಭವೀಕರಿಸುವ ಜಯಂತಿ ಸರಿಯಿಲ್ಲ ಎಂದು ವಾದಿಸಿದರು.

ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಮಾತನಾಡಿ ಈ ಜಯಂತಿಯು ದೇಶ ವಿಭಜನೆಯನ್ನುಂಟು ಮಾಡುತ್ತದೆ. ಮಂಗಳೂರಿನ ಕ್ರೈಸ್ತರನ್ನು, ಕೊಡಗಿನ ಜನರ ಮೇಲೆ ದಾಳಿಮಾಡಿ ಪ್ರಾಣಹಾನಿ ಮಾಡಿದ ವ್ಯಕ್ತಿಯ ಜಯಂತಿ ಬೇಡ ಎಂದು ಸರಕಾರಕ್ಕೆ ಮನವಿ ಮಾಡಿದ್ದಾಗ್ಯೂ ಈ ಬಾರಿಯೂ ಟಿಪ್ಪು ಜಯಂತಿ ಆಚರಿಸಲು ಸರಕಾರ ಸಜ್ಜಾಗಿದೆ. ಇದರ ವಿರುದ್ಧ ಎಲ್ಲೆಡೆ ವ್ಯಾಪಕ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದರು. ಕೊಡಗಿನಲ್ಲಿ ಮನೆಯ ನಾಯಿಗಳಿಗೆ ಟಿಪ್ಪು ಎಂದು ಹೆಸರು ಇಡುತ್ತೇವೆಂದರೆ ನಾವು ಅವನಿಗೆ ಕೊಡುವ ಮರ್ಯಾದೆ ಎಷ್ಟು ಎಂದು ಅಂದಾಜಿಸಬಹುದಾಗಿದೆ. ಆದರೆ ಪಾಕಿಸ್ತಾನದಲ್ಲಿ ಕ್ಷಿಪಣಿಗೆ, ರಸ್ತೆ, ಕಟ್ಟಡಗಳಿಗೆ ಟಿಪ್ಪು ಹೆಸರು ಇಡಲಾಗಿದೆ. ಇದರಿಂದರೆ ಅತನಿಗಿರುವ ಸ್ಥಾನವನ್ನು ಸರಕಾರ ಅರ್ಥೈಸಿಕೊಳ್ಳಬೇಕಿದೆ ಎಂದು ಟೀಕಿಸಿದರು

ಕೃಪೆ: ವಿಜಯವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಪ್ರಜಾ ವಾಣಿ ಪತ್ರಿಕೆ

 

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Tyrant Tippu known for his fundamentalism, mass killings. Why celebrate him? : Dr. Sambit Patra

Sun Nov 5 , 2017
Bengaluru, 4th Nov 2017: FIRST (Foundation for Indic Research and Studies) had organized a seminar today in the city to understand the mindset of Tipu and his followers at Gandhi Bhavan, Kumarakrupa Road. In a packed auditorium, Dr. Sambit Patra, Dr. G B Harisha, Sri Sandeep Balakrishnan,Sri Robert Rosario presented […]