14 ಆಕ್ಟೊಬರ್, ಧಾರವಾಡ:

ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಧಾರವಾಡ ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ಇಂದು ನಡೆಯಿತು. ಧಾರಾಕಾರ ಮಳೆಯ ಮಧ್ಯೆಯೂ ಧಾರವಾಡ ನಗರದ ಸಾಧನಕೇರಿಯ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಸಾಗಿತ್ತು.

ಸಾಧನಕೇರಿ ವರಕವಿ ದ.ರಾ ಬೇ೦ದ್ರೆ ಭವನದ ಹತ್ತಿರದ ಎಸ್‍.ವಿ.ಎಸ್‍ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಸ್ವಯಂಸೇವಕರಿಂದ ನಿಯುದ್ಧ, ಪ್ರಾಣಾಯಾಮ ಹಾಗೂ ಅನೇಕ ಶಾರೀರಿಕ ಪ್ರದಶ೯ನ ನಡೆಯಿತು
ಸಮಾರಂಭದ ಮುಖ್ಯ ಅತಿಥಿಯಾಗಿ ಮಾನ್ಯ ಶ್ರೀ ಎಸ್‍.ಬಿ.ಗಾಮನಗಟ್ಟಿ ಆಗಮಿಸಿದ್ದರು. ಧಾರವಾಡ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ನಡಕಟ್ಟಿ, ಮುಖ್ಯ ವಕ್ತಾರರಾಗಿ ಆರ್‍ಎಸ್‍ಎಸ್‍ನ ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ಶ್ರೀ ಕೃಷ್ಣ ಜೋಶಿ ಮತ್ತು ವರ್ಗಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

 


  1.  


     

ವರದಿ: ವಿಶಾಲ್ ಸಂಗಣ್ಣನವರ್