ಯಾದಗಿರಿ, 24Dec 2017: ಜಿಲ್ಲೆಯ ವನವಾಸಿ ಸಮ್ಮೇಳನದಲ್ಲಿ ವಾಲ್ಮೀಕಿ ಆಶ್ರಮ ಗೋಲಪಲ್ಲಿಯ ಪೂಜ್ಯ ಶ್ರೀ ವರದಾನೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ ಗಣಪತಿ ಪೂಜಾರಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ,ಯಾದಗಿರಿ ,ಶ್ರೀ ಯಮನಪ್ಪ ತನಿಕೇದಾರ,ಅಧ್ಯಕ್ಷರು,ಜಿಲ್ಲಾವಾಲ್ಮೀಕಿ ನಾಯಕ ನೌಕರರ ಸಂಘ, ಶ್ರೀ ಮರೇಪ್ಪ ನಾಯಕ ಮಗದಂಪೂರ,ಅಧ್ಯಕ್ಷರು,ಯಾದಗಿರಿ ಜಿಲ್ಲಾ ವಾಲ್ಮೀಕಿ ಸಮಾಜ, ಇವರು ಪಾಲ್ಗೊಂಡು ಯಶಸ್ವಿಗೊಳಿಸಿದರು. ವಾಲ್ಮೀಕಿ,ಚೆಂಚು,ಮೇದಾ ಜನಾಂಗಕ್ಕೆ ಸೇರಿದ 500ಕ್ಕೂ ಹೆಚ್ಚು ಜನಸೇರಿದ್ದರು.