ಬೆಂಗಳೂರು: ಸಮರ್ಥ ಭಾರತ ಸಂಸ್ಥೆಯು ಆಯೋಜಿಸಿರುವ ಒಂದು ಕೋಟಿ ಗಿಡ ನೆಡುವ ಬೃಹತ್ ರಾಜ್ಯವ್ಯಾಪಿ ಅಭಿಯಾನಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ದೊರೆಯಿತು.ಹೆಸರಾಂತ ಮಳೆನೀರು ಕೊಯ್ಲು ತಜ್ಞ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಶಿವಕುಮಾರ್ ಅಭಿಯಾನವವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿಶ್ವಸ್ತರಾದ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಆರ್ ವಿ ಟೀಚರ್ಸ್ ಕಾಲೇಜಿನ ಪ್ರಾಂಶುಪಾಲ ಡಾ ಕೃಷ್ಣಯ್ಯ, ಸಮರ್ಥ ಭಾರತ ಸಂಸ್ಥೆಯ ಟ್ರಸ್ಟಿ ರಾಜೇಶ್ ಪದ್ಮಾರ್, ಕೋಟಿ ವೃಕ್ಷ ಆಂದೋಲನ ಯೋಜನೆಯ ಮಾರ್ಗದರ್ಶಕ ಗಣಪತಿ ಹೆಗಡೆ,  ಕೋಟಿ ವೃಕ್ಷ ಆಂದೋಲನ ಯೋಜನೆಯ ಬೆಂಗಳೂರು ನಗರ ಸಂಚಾಲಕ ಕೃಷ್ಣ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಾಗೂ ಬೀಜದುಂಡೆಗಳನ್ನು ವಿತರಿಸಲಾಯಿತು. ಆರ್ ಟೀಚರ್ಸ್ ಕಾಲೇಜಿನಿಂದ ಲಾಲ್ ಬಾಗ್ ಪಶ್ಚಿಮ ದ್ವಾರದ ವರೆಗೆ ಹಸಿರಿಗಾಗಿ ನಡಿಗೆ ವಿಶಿಷ್ಟ ಕಾರ್ಯಕ್ರಮ ನಡೆಯಿತು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

wwed