ದೆಹಲಿ, ಜೂನ್ ೨೧: ದೆಹಲಿಯ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ವತಿಯಿಂದ ನಾರದ ಜಯಂತಿ ಹಾಗೂ ವಿಶೇಷ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪಾಲ್ಗೊಂಡು, ಪತ್ರಕರ್ತರು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಕೆಂಬ ಸಲಹೆಯನ್ನು ನೀಡಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿಷ್ಪಕ್ಷಪಾತವಾದ ಪತ್ರಿಕೋದ್ಯಮ, ಹಾಗೂ ವಿಷಯದ ಬಗೆಗಿನ ಗಾಢ ಅಧ್ಯಯನ ಈ ದಿನದ ಅಗತ್ಯ ಎಂಬ ಮಾತುಗಳನ್ನಾಡಿದರು. ‘ಭಾರತದ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಾಶ್ಮೀರ ಒಂದರಲ್ಲೇ ಎಷ್ಟೋ ಸೈನಿಕರ ಮಾರಣಹೋಮ ನಡೆದಿದೆ. ಹಾಗಾಗಿರುವುದಕ್ಕೆ ಸರಿಯಾದ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಸಿ ಜನರ ಮುಂದಿಡುವ ಗುರುತರ ಜವಾಬ್ದಾರಿ ಪತ್ರಕರ್ತರಾಗಿ ನಿಮ್ಮ ಮೇಲಿದೆ’ ಎಂದರು.

 

(Sri Nandakishore Trikha Ji felicitated for his lifetime contributions)

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ರಾಷ್ಟ್ರ‍ೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖ ಶ್ರ‍ೀ ಅರುಣಕುಮಾರ್, ’ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರ ಕಳೆದ ಹತ್ತು ವರ್ಷಗಳಿಂದ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸುವ ಕಾರ್ಯದಲ್ಲಿ ನಾವೆಲ್ಲರೂ ಮರೆತುಹೋಗಿರುವ ನಾರದ ಮಹಾ ಋಷಿಯನ್ನು ನೆನೆಯುವಂತೆ ಮಾಡಿದ್ದಾರೆ. ರಾಷ್ಟ್ರ‍, ರಾಷ್ಟೀಯತೆಗಳನ್ನು ಕುರಿತು ಕೆಲ ತತ್ತ್ವಗಳು ಆಕ್ರಮಣಕಾರಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಯದಲ್ಲಿ ನಾರದ ಋಷಿಯ ಆದರ್ಶವನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಳ್ಳಬೇಕಿದೆ. ಆ ಕಾಲದಲ್ಲಿ ನಾರದರು ಎಲ್ಲರೊಂದಿಗೂ ಸಂವಾದವನ್ನು ಸ್ಥಾಪಿಸಿಕೊಂಡಿದ್ದರಲ್ಲದೇ ಸಾಮಾಜಿಕ ಸದ್ಭಾವನೆಯನ್ನೂ ಸ್ಥಿತಗೊಳಿಸಿಟ್ಟಿದ್ದರು ’ ಎಂಬುದಾಗಿ ನುಡಿದರು.

ಸಭೆಯ ಅಧ್ಯಕ್ಷರಾದ ರಕ್ಷಣಾ ತಜ್ಞ ಮಾರೂಫ್ ರಾಜ಼ಾ ಪತ್ರಕರ್ತರು ದೇಶದ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಕಾರ್ಯ ನಿರ್ವಹಿಸಿಬೇಕೆಂಬ ಮಾತುಗಳನ್ನು ಆಡಿದರು. ದೇಶದ ಸುರಕ್ಷತೆಯನ್ನು ಕಾಡುವ ಆಂತರಿಕ, ಬಾಹ್ಯ ಶಕ್ತಿಗಳನ್ನು ಗುರುತಿಸಿ ಸರಿಯಾದ ವರದಿಗಾರಿಕೆ ಪತ್ರಕರ್ತರ ಹೊಣೆ ಎಂದು ತಿಳಿಸಿದರು.
ಇದೇ ದಿನ ‘ದಿಶಾ ಸ್ಮರಿಕಾ’ ಎಂಬ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ವಾರ್ಷಿಕ ಪತ್ರಿಕೆಯೂ ಬಿಡುಗಡೆಗೊಂಡಿತು.

(L-R Sri Vagish Issar, Sri Arun Kumar Ji, Srimathi Sumitra Mahajan, Sri Maharoof Raza, Sri Ashok Sachdeva) on releasing Disha Smarika

ಸಭೆಯಲ್ಲಿ ದೆಹಲಿಯ ಹನ್ನೆರಡು ಪತ್ರಕರ್ತರಿಗೆ ಅವರು ತೋರಿದ ಸಾಧನೆಗಾಗಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿವರ    ಇಂತಿದೆ.
೧. ಆಜೀವನ ಸೇವಾ ನಾರದ ಸನ್ಮಾನ – ಶ್ರೀ ನಂದ ಕಿಶೋರ ತಿಖಾ
೨. ಉತ್ಕೃಷ್ಠ ಪತ್ರಕಾರ ನಾರದ ಸನ್ಮಾನ- ಶ್ರೀ ರಾಹುಲ್ ಸಿನ್ಹಾ (ಜೀ ನ್ಯೂಸ್)
೩. ಸ್ತಂಭಕಾರ ನಾರದ ಸನ್ಮಾನ – ಶ್ರೀಮತಿ ಸಂಧ್ಯಾ ಜೈನ್
೪. ಡಿಜಿಟಲ್ ಮೀಡಿಯಾ – ಶ್ರೀ ಸಂಜಯ ಸಿಂಹ(ಫರ್ಸ್ಟ್ ಪೋಸ್ಟ್)
೫. ನ್ಯೂಸ್ ರೂಮ್ ರಿಪೋರ್ಟರ್ ನಾರದ ಸನ್ಮಾನ – ಶ್ರೀಮತಿ ನಿಧಿ ಚತುರ್ವೇದಿ (ರಾಜ್ಯಸಭಾ ಟಿವಿ)
೬. ಗ್ರಾಮೀಣ ಪತ್ರಿಕೋದ್ಯಮದ ನಾರದ ಸನ್ಮಾನ – ಶ್ರೀ ವಿವೇಕ ಶ್ರೀವಾಸ್ತವ (ಹಿಂದುಸ್ಥಾನ ಸಮಾಚಾರ)
೭. ಸೋಷಿಯಲ್ ಮೀಡಿಯಾ ನಾರದ ಸನ್ಮಾನ – ಶ್ರೀಮತಿ ಶಿಲ್ಪೀ ತಿವಾರಿ
೮. ಮಹಿಳಾ ಪತ್ರಿಕೋದ್ಯಮದ ನಾರದ ಸನ್ಮಾನ – ಶ್ರೀಮತಿ ಪ್ರತಿಭಾ ಜ್ಯೋತಿ
೯. ವಿದೇಶೀ ಪತ್ರಿಕೋದ್ಯಮದ ನಾರದ ಸನ್ಮಾನ – ಶ್ರ‍ೀ ಫ್ರಾನ್ಸುವಾ ಗಾತೇ
೧೦. ಶ್ರೇಷ್ಠ ವರದಿ ನಾರದ ಸನ್ಮಾನ (ವಿಡಿಯೋ)- ಶ್ರ‍ೀ ವಿಪಿನ್ ಚಂದ್ರ ಪೂಜಾರಿ (ನ್ಯೂಜ್18)
೧೧. ಶ್ರೇಷ್ಠ ವರದಿ ನಾರದ ಸನ್ಮಾನ – ಶ್ರ‍ೀ ಹೇಮರಾಜ (ಭಾರತ ಪ್ರಕಾಶನ)
೧೨. ವಿಶೇಷ ಜೂರಿ ಪ್ರಶಸ್ತಿ – ಬಾಲಕನಾಮಾ ತಂಡ – ಶ್ರೀ ಸಂಜಯ ಗುಪ್ತಾ, ಶ್ರೀ ಶಂಭೂ, ಕು ಜ್ಯೋತಿ, ಮಾಸ್ಟರ್ ಚೇತನ್

 

(A Group photo with the dignitaries and the felicitated journalists)

______________________________________________________________________________________________________

ಕಾರ್ಯಕ್ರಮದ ಆಯ್ದ ವಿಡಿಯೋ ತುಣುಕುಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ವೀಕ್ಷಿಸಬಹುದು.

______________________________________________________________________________________________________