3rd International Yoga Day : 54,101 participants in Mysuru

Mysuru: Jun 21 2017. A mind blowing 54101 participants on the Yoga Day today has made the event truly wonderful. The cultural city of the State, Mysuru witnessed today this magnanimous number of participants which was a resultant of toiling for weeks by the organizing folks. Mysuru MP Pratap Simha has tweeted saying a Thank you to all Mysureans who took part in the event. Pratap Simha administered Swacch Bharat oath to all attendees.

3ನೆಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಮೈಸೂರಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿಸುವ ಮಹತ್ವಾಕಾಂಕ್ಷೆಯೊಂದಿಗೆ ಆಚರಿಸಲಾಯಿತು. ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ।। ಹೆಚ್ ಸಿ ಮಹಾದೇವಪ್ಪ ಮತ್ತು ಕೇಂದ್ರ ಸಚಿವರಾದ ಶ್ರೀ ಡಿ ವಿ ಸದಾನಂದ ಗೌಡ ಸಂಸದರಾದ ಪ್ರತಾಪಸಿಂಹ ಇನ್ನಿತರ ಪ್ರಮುಖರು ಡೋಲು ನುಡಿಸುವ ಮೂಲಕ ಉದ್ಘಾಟಿಸಿದರು, ನಂತರ ಮಾತನಾಡಿದ ಉಸ್ತುವಾರಿ ಸಚಿವರು ಕೇಂದ್ರ ರಾಜ್ಯ ಸರ್ಕಾರಗಳೊಡಗೂಡಿ, ಜಾತಿ ಧಾರ್ಮ ಮೀರಿ ಎಲ್ಲ ಜನರ ಆರೋಗ್ಯಕ್ಕಾಗಿ ಯೋಗ ದಿನವನ್ನು ಆಚರಿಸುತ್ತಿದ್ದೇವೆ, ಈ ಐತಿಹಾಸಿಕ ಯೋಗ ದಿನಾಚಾರಣೆಗಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಯೋಗ ಒಕ್ಕೂಟಗಳಿಗೆ ಅಭಿನಂದನೆ ಸಲ್ಲಿಸಿದರು. ನಂತರ ಕೇಂದ್ರ ಸಚಿವರಾದ ದಿವಿ ಸದಾನಂದಗೌಡರು ಮಾತನಾಡುತ್ತ ಭಾರತ ಇಡೀ ವಿಶ್ವಕ್ಕೆ ಒಳ್ಳೆಯದನ್ನೇ ನೀಡುತ್ತಾ ಬಂದಿದೆ ಹಾಗೆಯೇ ವಿಶ್ವದ ಆರೋಗ್ಯ ವೃದ್ಧಿಗಾಗಿ ಯೋಗವನ್ನು ವಿಶ್ವಕ್ಕೆ ನೀಡಿದೆ ಎಂದರು. ಬಳಿಕ ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹರವರು ಸ್ವಚ್ಛ ಭಾರತದ ಪ್ರತಿಜ್ಞೆಯನ್ನು ಭೋದಿಸಿದರು. ಸಾರಿಗೆ, ವಾಹನ ನಿಲುಗಡೆ, ನೋಂದಣಿ ಹೀಗೆ ಎಲ್ಲದರ ಅಚ್ಚುಕಟ್ಟಾದ ವ್ಯವಸ್ಥೆಯ ಕಾರಣ ೫೪೧೦೧ ಸಂಖ್ಯೆ ಶಾಲಾ ಮಕ್ಕಳು, ಯೋಗ ಒಕ್ಕೂಟಗಳು, ವಿವಿಧ ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

3ನೇ ಅಂತಾರಾಷ್ಟ್ರೀಯ ಯೋಗ ದಿನ: ರಾಜ್ಯದ ಸಾವಿರಾರು ಜನರು ಯೋಗದಲ್ಲಿ ಭಾಗಿ

Thu Jun 22 , 2017
ಬೆಂಗಳೂರಿನ ವಿವಿಧೆಡೆಗಳಲ್ಲಿ, ಶಿವಮೊಗ್ಗ, ಮಂಗಳೂರು, ಮೈಸೂರುಗಳಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದ ಆಯ್ದ ಚಿತ್ರಪಟಗಳು JP Nagar, Bengaluru June 21, 2017: International Yoga Day Celebration Committee Bengaluru organised International Yoga Day Celebrations at Durga Temple Grounds near RV Dental College, JP Nagar, Bengaluru.  Vishweshwara Bhat,  Editor of Vishwavani, Guruprasad, Noted Cinema Director, Rajesh Padmar, Trustee […]