’ಸಂಕಲ್ಪ ದಿವಸ್’ ಪ್ರಯುಕ್ತ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

ಫೆಬ್ರುವರಿ ೨೨ ೧೯೯೪ರಂದು ಭಾರತ ಸಂಸತ್ತಿನ ಎರಡೂ ಸದನಗಳು ಸರ್ವಾನುಮತದಿಂದ ಒಂದು ನಿರ್ಣಯವನ್ನು ಅಂಗೀಕರಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಅವಿಭಾಜ್ಯ ಅಂಗ ಮತ್ತು ಪಾಕಿಸ್ತಾನವು ರಾಜ್ಯದಲ್ಲಿ ಆಕ್ರಮಿಸಿಕೊಂಡಿರುವ ಪ್ರದೇಶದಿಂದ ಹೊರನಡೆಯಬೇಕು ಎಂದು ಒತ್ತಿ ಹೇಳಿತು. ಈ ದಿನವನ್ನು ’ಸಂಕಲ್ಪ ದಿವಸ’ ಎಂದು ದೇಶಾದಾದ್ಯಂತ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರವು ಪ್ರಬಂಧ ಸ್ಪರ್ಧೆಯನ್ನು ನಡೆಸುತ್ತಿದ್ದು ಅರ್ಹ ವಿದ್ಯಾರ್ಥಿಗಳಿಂದ ಪ್ರಬಂಧವನ್ನು ಆಹ್ವಾನಿಸಿದೆ.

ವಿಷಯಗಳು :
೧. ಜಮ್ಮು ಮತ್ತು ಕಾಶ್ಮೀರದ ಜನಸಮುದಾಯ, ಸಂಸ್ಕೃತಿ ಮತ್ತು ಇತಿಹಾಸ
೨. ಭಾರತ ಸಂವಿಧಾನದ ವಿಧಿ ೩೫ಎ ಏಕೆ ವಜಾಗೊಳಿಸಬೇಕು?

ಬಹುಮಾನ ವಿವರ:
ಪ್ರಥಮ : ರೂ ೧೦,೦೦೦
ದ್ವಿತೀಯ : ರೂ. ೫,೦೦೦/-
ಸಮಾಧಾನಕರ : ರೂ. ೨,೦೦೦/- (೩ ಬಹುಮಾನಗಳು)

ನಿಯಮಗಳು:
೧. ಪ್ರಬಂಧಗಳು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿರಬೇಕು.
೨. ಶಬ್ದಮಿತಿ ಗರಿಷ್ಠ ೨೦೦೦ ಶಬ್ದಗಳು.
೩. ಪ್ರಬಂಧದೊಂದಿಗೆ ಅಧ್ಯಯನ ಪ್ರಮಾಣಪತ್ರ ಅಥವಾ ವಿದ್ಯಾರ್ಥಿ ಗುರುತಿನ ಚೀಟಿಯ ಝೆರಾಕ್ಸ್ ಪ್ರತಿಯನ್ನು ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣದ ಜೊತೆ ಲಗತ್ತಿಸಿರಬೇಕು. (ಇ-ಮೈಲ್ ಮೂಲಕ ಪ್ರಬಂಧವನ್ನು ಕಳುಹಿಸುವವರು ಸ್ಕ್ಯಾನ್ ಮಾಡಿ ಕಳುಹಿಸಬಹುದು)

ಪ್ರಬಂಧಗಳನ್ನು jkscblr@gmail.com ವಿಳಾಸಕ್ಕೆ ಇ-ಮೈಲ್ ಮಾಡಬಹುದು.
ಮುದ್ರಿತ/ ಕೈಬರಹದ ಪ್ರಬಂಧವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು:
ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕ, ನಂ. ೧೦, ೪ನೇ ಅಡ್ಡರಸ್ತೆ, ಪಾಪಯ್ಯ ಗಾರ್ಡನ್, ಬಿಎಸ್‍ಕೆ ೩ನೇ ಹಂತ, ಬೆಂಗಳೂರು ೫೬೦೦೮೫

ಪ್ರಬಂಧ ತಲುಪಲು ಕೊನೆಯ ದಿನಾಂಕ : ೩೧ ಜನವರಿ ೨೦೧೯.
ಹೆಚ್ಚಿನ ಮಾಹಿತಿಗಾಗಿ : 9448980436/9731264009

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕುರಿತು:
ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರವು (JKSC) ಒಂದು ಸ್ವಾಯತ್ತ ವಿಚಾರ ವೇದಿಕೆಯಾಗಿದ್ದು ಜಮ್ಮು ಕಾಶ್ಮೀರ ಕುರಿತ ವಸ್ತುನಿಷ್ಠ ಮತ್ತು ಸಮಗ್ರ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಭಾರತದ ಆಯಕಟ್ಟಿನ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ನೀತಿಗಳ ಅಧ್ಯಯನ ಮತ್ತು ಅಂತಹ ಅಧ್ಯಯನದ ಫಲಿತಾಂಶಗಳನ್ನು ಸಾರ್ವಜನಿಕರ ಮಧ್ಯೆ ಮುಂದಿಡುವ ಉದ್ದೇಶದಿಂದ ೨೦೧೧ರಲ್ಲಿ ಈ ವಿಚಾರ ವೇದಿಕೆ ಕಾರ್ಯಾರಂಭ ಮಾಡಿತು. ಇಂದು ಅಧ್ಯಯನ ಕೇಂದ್ರವು ೧೫ ಶಾಖೆಗಳು, ೨೫ ಚಟುವಟಿಕಾ ಕೇಂದ್ರಗಳು ಮತ್ತು ೫೦ ಸಹವರ್ತಿ ಸಂಸ್ಥೆಗಳನ್ನು ಒಳಗೊಂಡಿದ್ದು ೧,೦೦೦ಕ್ಕೂ ಹೆಚ್ಚು ಸ್ವಯಂಸೇವಕರು ದೇಶ ವಿದೇಶಗಳಲ್ಲಿ ಕಾರ್ಯ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕರ್ನಾಟಕ ಶಾಖೆಯು ಆರಂಭವಾದಾಗಿನಿಂದ ಸೆಮಿನಾರ್, ಕಾರ್ಯಾಗಾರ, ಹಾಗೂ ಅನೇಕ ಶೈಕ್ಷಣಿಕ, ಬೌದ್ಧಿಕ ಛಟುವಟಿಕೆಗಳನ್ನು ನಡೆಸುತ್ತ ಬಂದಿದೆ.

JAMMU AND KASHMIR KANNADA MAP

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ನಡೆಯುವ ಮಾದಕತೆ, ಅಶ್ಲೀಲತೆಯ ವಿರುದ್ಧ ಭಜರಂಗ ದಳ ಪತ್ರಿಕಾ ಗೋಷ್ಠಿ

Thu Dec 27 , 2018
ಬೆಂಗಳೂರು, ೨೭ ಡಿಸೆಂಬರ್ ೨೦೧೮: ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ನಡೆಯುವ ಮಾದಕತೆ, ಅಶ್ಲೀಲತೆಯ ಕುರಿತಾಗಿ ಇಂದು ಭಜರಂಗ ದಳ ಪತ್ರಿಕಾ ಗೋಷ್ಠಿಯನ್ನು ನಗರದ ಧರ್ಮಶ್ರೀ ಕಾರ್ಯಾಲಯದಲ್ಲಿ ಆಯೋಜಿಸಿತ್ತು. ಪತ್ರಿಕಾ ಗೋಷ್ಠಿಯಲ್ಲಿ ಭಜರಂಗ ದಳದ ರಾಷ್ಟ್ರೀಯ ಸಹ ಸಂಯೋಜಕರಾದ ಶ್ರೀ ಸೂರ್ಯನಾರಾಯಣ ರವರು ಉಪಸ್ಥಿತರಿದ್ದರು. ಪತ್ರಿಕಾ ಪ್ರಕಟಣೆಯ ಮುಖ್ಯ ಅಂಶಗಳು ಇಂತಿವೆ: ೧. ಭಾರತೀಯರಿಗೆ ಯುಗಾದಿಯು ಹೊಸ ವರ್ಷವಾಗಿದೆ. ಅದೇ ರೀತಿ ಬೇರೆ ಬೇರೆ ದೇಶಗಳಿಗೆ ಅವರದೇ ಪ್ರತ್ಯೇಕ ಹೊಸ […]