ಕೇಶವ ಸೇವಾ ಸಮಿತಿ ಆಯೋಜಿಸಿದ್ದ ಬಾಲಸಂಗಮ ‘ಮಕ್ಕಳ ಹಬ್ಬ 2018’ರ 12 ನೆ ವರ್ಷದ ಕಾರ್ಯಕ್ರಮ ಪೆಬ್ರವರಿ 3,4ರಂದು ಜರುಗಿತು. ಸುಮಾರು 1500 ಮಕ್ಕಳು ಭಾಗವಹಿಸಿದರು. 25 ದೇಸಿ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತಗೊಂಡಿತ್ತು. ಮಲ್ಲಕಂಭ, ಯೋಗಸನ, ಜನಾಪದ, ಯಕ್ಷಗಾನ, ಮುಂತದ ಪ್ರದರ್ಶಿನಿಗಳೂ ಏರ್ಪಟ್ಟಿದ್ದವು. ಮಹಿಳೆಯರ ಮಹತ್ವ ಸಾರುವ ವಾಕಥಾನ್ ನಲ್ಲಿ 2000 ಜನ ಭಾಗಿಯಾಗಿದ್ದರು. 300 ಕ್ಕೂ ಅಧಿಕ ಮನೆಗಳಿಂದ ಅಮ್ಮನ ಕೈ ತುತ್ತು ಬಾಲಸಂಗಮದ ಆಕರ್ಷಣೆಗಳಲ್ಲಿ ಒಂದು. ಕನ್ನಡ ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್, ಪೆಟ್ರೋನೆಟ್ ಎಂಎಚ್‍ಬಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸೆಲ್ವಕುಮಾರ್, ಸಿಗ್ಮಾಕ್ವಾಂಟ್ ಟೆಕ್ನೊಲಾಜಿಸ್ ನ ಸಿಇಓ ಅಮನ್ ಕೊಕಾರ್ಡಿ, ಕೇಶವ ಸೇವಾ ಸಮಿತಿಯ ಪ್ರಕಾಶ್ ರಾಜು ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸಿದರು.

Sri Selvakumar, Cine artist Golden Star Sri Ganesh, Sri Aman Kokardy, Sri Prakash Raju and others formally inaugurating the BalaSangama