21 ಡಿಸೆಂಬರ್, ಕುಮಟಾ:    ಅರ್ಬನ್ ನಕ್ಸಲಿಸಂ ವಿಷಯವಾಗಿ ಮಂಥನ ವತಿಯಿಂದ ಸಂವಾದ ಕಾರ್ಯಕ್ರಮ ಕುಮಟಾದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿದ ಪ್ರಜ್ಞಾ ಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ್ ಮಾತನಾಡಿದರು. ಮಂಥನದ ಸಂಯೋಜಕರಾದ ಶ್ರೀ ಡಿ ವಿ ಹೆಗಡೆ ಉಪಸ್ಥಿತರಿದ್ದರು.

ನಕ್ಸಲರ ಬಗ್ಗೆ ಮಾತನಾಡಿ, ನಕ್ಸಲ್‌ಬಾರಿಯಲ್ಲಿ ಶುರುವಾದ ನಕ್ಸಲಿಸಂ ಸುಮಾರು 125 ಜಿಲ್ಲೆಗಳವರೆಗೆ ಹರಡಿತ್ತು. ಪೋಲಿಸರ ಮೇಲೆ, CRPF ತುಕಡಿಗಳ ಮೇಲೆ ದಾಳಿ ಮಾಡುವಷ್ಟು ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೊಂದಿದ್ದರು. ಜಿಹಾದ್‌ನಿಂದ ಹತ್ಯೆಯಾದವರ ಸಂಖ್ಯೆಗಿಂತ ನಕ್ಸಲ್‌ರಿಂದ ಹತ್ಯೆಯಾದವರ ಸಂಖ್ಯೆಯೆ ಹೆಚ್ಚು. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೆ ಕ್ರಾಂತಿ ಮಾಡಬೇಕೆಂದು ಕೊಲ್ಲುವ ನಕ್ಸಲರಿಗೆ ಈ ಅರ್ಬನ್ ನಕ್ಸಲರು ಬೆಂಬಲ ಕೊಡುತ್ತಾರೆ. ಅರ್ಬನ್ ನಕ್ಸಲರು ನಗರ ಪ್ರದೇಶಗಳಲ್ಲಿ ಗೌರವಾನ್ವಿತ ಸ್ಥಾನಗಳಲ್ಲಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆಗಿರುತ್ತಾರೆ. ನಕ್ಸಲರಾಗಲು ಪ್ರಚೋದಿಸುವ ಇವರು ನಕ್ಸಲರಿಗೆ ಕಾನೂನು ಬೆಂಬಲ ನೀಡುತ್ತಾರೆ. ತಮ್ಮ ಬೇರೆ ಬೇರೆ ಹೆಸರಿನಲ್ಲಿರುವ ಹೋರಾಟದ ವೇದಿಕೆಗಳಿಂದ ನಕ್ಸಲರ ನೇಮಕಾತಿಯನ್ನೂ ಮಾಡುತ್ತಾರೆ. ಇಂತಹ ಚಟುವಟಿಕೆಗಳಿಗೆ NGO ಗಳ ಮೂಲಕ ಹಣ ಪಡೆಯುತ್ತಾರೆ. ಪ್ರಜಾಪ್ರಭುತ್ವದ ಸೋಗಿನಲ್ಲಿ ಹೋರಾಟ ಮಾಡುವ ಕಮ್ಯೂನಿಸ್ಟ್‌ರು ಅಸಲಿಗೆ ಪ್ರಜಾಪ್ರಭುತ್ವವನ್ನು ಒಪ್ಪುವುದಿಲ್ಲ. ಈ ರೀತಿ ಕಾಣದೆ ಕೆಲಸ ಮಾಡಿ ಬಂದೂಕು ನೀಡಿ ಹೋರಾಟಕ್ಕೆ ಇಳಿಸುವ ಜನರೆ ಅರ್ಬನ್ ನಕ್ಸಲ್ಸ್. ಎಂದರು.

ನಂತರ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಸಮಾಜದಲ್ಲಿ ಸಮಸ್ಯೆಗಳಿದ್ದಾಗ ನಾವು ಸ್ಪಂದಿಸಬೇಕು ಮತ್ತು ಜನರನ್ನು ಹತ್ಯೆಗೈಯುವ ನಕ್ಸಲರ ಮತ್ತು ಅವರ ಸಮರ್ಥಕರಾದ ಅರ್ಬನ್ ನಕ್ಸಲರ ಸಮಾಜಕ್ಕೆ ತಿಳಿಸಬೇಕು ಎಂದರು.